For Quick Alerts
  ALLOW NOTIFICATIONS  
  For Daily Alerts

  ಹ್ಯಾಟ್ರಿಕ್ ಹೀರೋ ಶಿವಣ್ಣ ಅಮ್ಮಾವ್ರ ಗಂಡನಾ?

  By Rajendra
  |

  ಮದುವೆಯಾದ ಯಾರಿಗೇ ಆಗಲಿ ಈ ಪ್ರಶ್ನೆ ಕೇಳಿದರೆ ಸಿಟ್ಟು ಬಂದೇ ಬರುತ್ತದೆ ತಾನೆ. ಆದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಪ್ರಶ್ನೆಯನ್ನು ಕೂಲಾಗಿ ತೆಗೆದುಕೊಂಡಿದ್ದಾರೆ. ಅವರು ಹೌದು ತಾನು ಅಮ್ಮಾವ್ರ ಗಂಡ ಎಂದು ಒಪ್ಪಿಕೊಂಡಿದ್ದಾರೆ.

  ಈ ವಿಶಿಷ್ಟ ಪ್ರಶ್ನೆ ತೂರಿಬಂದಿದ್ದು ರಾಜ್ ಮ್ಯೂಸಿಕ್ ವಾಹಿನಿಯಲ್ಲಿ ಸುಗುಣ ಅವರು ನಡೆಸಿಕೊಡುವ 'ಸುಗುಣಾಸ್ ಸ್ಟ್ರೈಟ್ ಹಿಟ್' ಕಾರ್ಯಕ್ರಮದಲ್ಲಿ. ಸೋಮವಾರ (ಜೂ.10) ರಾತ್ರಿ 9 ಗಂಟೆಗೆ ಪ್ರಸಾರವಾದ ಕಾರ್ಯಕ್ರಮದಲ್ಲಿ ಶಿವಣ್ಣ ಅವರಿಗೆ ವಿಭಿನ್ನ ಪ್ರಶ್ನೆಗಳು ತೂರಿಬಂದವು.

  ಅವುಗಳಲ್ಲಿ ನೀವು ಅಮ್ಮಾವ್ರ ಗಂಡಾನಾ? ಎಂಬ ಪ್ರಶ್ನೆಯೂ ಒಂದು. ಆಫ್ ಕೋರ್ಸ್ ಹೌದು ಎಂದು ಶಿವಣ್ಣ ನಗುನಗುತ್ತಲೇ ಉತ್ತರಿಸಿದರು. ಚಿತ್ರೋದ್ಯಮದಲ್ಲಿ ಎರಡು ಧ್ರುವಗಳಿವೆ ಅಂತಾರೆ. ಒಂದು ರಾಜ್ ಕುಟುಂಬ ಮತ್ತೊಂದು ಸುದೀಪ್ ಹಾಗೂ ದರ್ಶನ್? ಈ ಬಗ್ಗೆ ಶಿವಣ್ಣ ಹೇಳಿದ್ದು ಹೀಗೆ...

  ಈ ಪ್ರಶ್ನೆಯನ್ನು ಸಾರಾಸಗಟಾಗಿ ಶಿವಣ್ಣ ನಿರಾಕರಿಸಿದರು. ಸುದೀಪ್ ಅವರು ತುಂಬಾ ಒಳ್ಳೊಳ್ಳೆ ಪಾತ್ರಗಳನ್ನು ಮಾಡುತ್ತಿದ್ದಾರೆ. ದರ್ಶನ್ ಸಹ ಅಷ್ಟೇ ನಮಗೆ ಚಿಕ್ಕಂದಿನಿಂದಲೂ ಗೊತ್ತು. ಇಲ್ಲಿ ಎಲ್ಲರೂ ಒಂದೇ ಅವರೊಂದು, ನಾವೊಂದು ಎಂದು ಯಾಹೊತ್ತು ಭಾವಿಸಿಲ್ಲ ಎಂಬರ್ಥದಲ್ಲಿ ಹೇಳಿದರು.

  ಇನ್ನು ಶಿವಣ್ಣ ಅವರಿಗೆ ಅಂಡರ್ ವರ್ಲ್ಡ್ ಜೊತೆ ಸಂಪರ್ಕ ಇದೆಯೇ? ಎಂಬ ಪ್ರಶ್ನೆಯನ್ನು ಸುಗುಣ ಅವರು ಕೇಳಿದರು. ಇದಕ್ಕೆ ಶಿವಣ್ಣ ಇಲ್ಲ ಎಂದರು. ಆದರೆ ಮುತ್ತಪ್ಪ ರೈ ಗೊತ್ತು ಎಂದಿದ್ದಾರೆ. ಶಿವಣ್ಣ ಯಾವುದೇ ಪ್ರಶ್ನೆಯನ್ನೂ ಗಂಭೀರವಾಗಿ ಪರಿಗಣಿಸದೆ ಲವಲವಿಕೆಯಿಂದ ಉತ್ತರಿಸಿದ್ದು ನಿಜಕ್ಕೂ ಇಷ್ಟವಾಯಿತು.

  ಪುನೀತ್ ಅವರು ಶಿವಣ್ಣ ಅವರಿಗೆ ಸ್ಪರ್ಧಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ಇಲ್ಲ ಎಂದರು. ಪುನೀತ್ ಚಿಕ್ಕಂದಿನಿಂದಲೇ ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಪ್ರತಿಭಾವಂತ. ನಾವಿಬ್ಬರೂ ಯಾಹೊತ್ತು ಸ್ಪರ್ಧಿ ಎಂದು ತಿಳಿದಿಲ್ಲ ಎಂದರು. ಈ ಕಾರ್ಯಕ್ರಮಕ್ಕೆ ಮತ್ತೆ ಪುನರ್ ಪ್ರಸಾರ ಭಾಗ್ಯವಿಲ್ಲದ ಕಾರಣ ನಿಮ್ಮ ನೆಚ್ಚಿನ ತಾಣ ಒನ್ಇಂಡಿಯಾ ಕನ್ನಡದಲ್ಲಿ ದಾಖಲಿಸುತ್ತಿದ್ದೇವೆ.

  ಈ ಬಗ್ಗೆ ಒನ್ಇಂಡಿಯಾ ಕನ್ನಡ ವಾಹಿನಿ ಜೊತೆ ಮಾತನಾಡಿದ ಸುಗುಣ ಅವರು, ಸ್ವಲ್ಪ ಅಂಜಿಕೆಯಿಂದಲೇ ಶಿವಣ್ಣ ಅವರಿಗೆ ಪ್ರಶ್ನೆಗಳನ್ನು ಕೇಳಿದೆ. ಆದರೆ ಅವರು ಅಷ್ಟೇ ಡೇರಿಂಗ್ ಆನ್ಸರ್ಸ್ ಕೊಟ್ಟರು. ಅವರೊಂದಿಗೆ ನಡೆಸಿದ ಸಂದರ್ಶನ ತಮ್ಮ ವೃತ್ತಿ ಬದುಕಿನಲ್ಲಿ ಮರೆಯಲಾಗದ ಅನುಭವ ನೀಡಿದೆ ಎಂದರು.

  ಇಷ್ಟಕ್ಕೂ ಅಮ್ಮಾವ್ರ ಗಂಡ ಎಂದರೆ ಪತ್ನಿ ಹೇಳಿದ ಪ್ರತಿಯೊಂದನ್ನೂ ಗೌರವಿಸುವ, ಆಕೆ ಏನೇ ಹೇಳಿದರೂ ಇಲ್ಲ ಎನ್ನದ ಪತಿರಾಯ ಎಂದರ್ಥ. ಪತ್ನಿಗಿಂತಲೂ ಚೆನ್ನಾಗಿ ರುಚಿಯಾಗಿ ಅಡುಗೆ ಮಾಡುವ ಗಂಡ ಎನ್ನಲೂ ಬಹುದು. ಇದಕ್ಕಿಂತಲೂ ಭಿನ್ನ ಅರ್ಥ ಇದ್ದರೆ ತಿಳಿಸಿ. (ಒನ್ಇಂಡಿಯಾ ಕನ್ನಡ)

  English summary
  Hat Trick Hero Shivrajkumar faced may questions on Raj Musix Kannada's programme Suguna's Straight Hit. The programme aired on 10th June at 9 pm. Shivannna agrees he is hen-pecked husband

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X