»   » ಪ್ರತ್ಯೂಷಾ ಆತ್ಮಹತ್ಯೆ ಕೇಸಲ್ಲಿ ಟ್ವಿಸ್ಟ್: ರಾಹುಲ್ ಮುಖವಾಡ ಕಳಚಿ ಬಿತ್ತು

ಪ್ರತ್ಯೂಷಾ ಆತ್ಮಹತ್ಯೆ ಕೇಸಲ್ಲಿ ಟ್ವಿಸ್ಟ್: ರಾಹುಲ್ ಮುಖವಾಡ ಕಳಚಿ ಬಿತ್ತು

Posted By:
Subscribe to Filmibeat Kannada

2016 ಏಪ್ರಿಲ್ 1, ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ, 'ಬಾಲಿಕಾ ವಧು' ಖ್ಯಾತಿಯ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಪ್ರಕರಣ ಕೇಸ್ ಈಗಲೂ ಕೋರ್ಟ್ ನಲ್ಲಿ ನಡೆಯುತ್ತಿದೆ. ಇದೀಗ ಈ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ನಟಿ ಪ್ರತ್ಯೂಷಾ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಗೆಳೆಯ ರಾಹುಲ್ ರಾಜ್ ಸಿಂಗ್ ಜೊತೆ ಸಂಭಾಷಣೆ ನಡೆಸಿದ್ದರು. ಸುಮಾರು ಮೂರು ನಿಮಿಷಗಳ ಸಂಭಾಷಣೆಯಲ್ಲಿ, ಪ್ರತ್ಯೂಷಾ ಒಬ್ಬ ಮುಂಬೈ ಉದ್ಯಮಿ ಜೊತೆ ಹಾಸಿಗೆ ಹಂಚಿಕೊಂಡಿರುವ ವಿಚಾರದ ಬಗ್ಗೆ ಮಾತನಾಡಿದ್ದರು.[ಕಿರುತೆರೆ ನಟಿ ಪ್ರತ್ಯೂಷ ಸಾವಿನ ಬಗ್ಗೆ ರಾಖಿ ಸಾವಂತ್ ಹೇಳಿದ್ದೇನು?]

Shocking Revelation Made In Pratyusha-Rahul’s Last Telephonic call

'ನಾನು ಈ ಕ್ಷೇತ್ರಕ್ಕೆ ನಟಿಸಬೇಕು ಅಂತ ಬಂದೆ, ಆದರೆ ನೀನು ನನ್ನನ್ನು ಈ ಮಟ್ಟಕ್ಕೆ ಕರೆ ತಂದು ನಿಲ್ಲಿಸಿದ್ದೀಯಾ. ನಿನಗೆ ಗೊತ್ತಿಲ್ಲ, ಇಂದು ನಾನು ಎಷ್ಟು ನೋವು ಅನುಭವಿಸುತ್ತಿದ್ದೇನೆ, ನನ್ನಲ್ಲಿ ಎಂತಹ ಕೆಟ್ಟ ಭಾವನೆ ಮೂಡುತ್ತಿದೆ ಅಂತ ನಿನಗೆ ಅರ್ಥ ಆಗೋದಿಲ್ಲ' ಹೀಗೆ ಮಾತಾಡಿ ಪ್ರತ್ಯೂಷಾ ಫೋನ್ ಕಟ್ ಮಾಡಿದ್ದಾರೆ.

Shocking Revelation Made In Pratyusha-Rahul’s Last Telephonic call

ಈ ಫೋನ್ ಸಂಭಾಷಣೆ ಪ್ರತಿ ಪ್ರತ್ಯೂಷಾ ಪೋಷಕರ ಪರ ವಾದ ಮಾಡುತ್ತಿರುವ ವಕೀಲ ನೀರಜ್ ಗುಪ್ತಾ ಅವರಿಗೆ ಸಿಕ್ಕಿದೆ ಎಂದು ಮೂಲಗಳು ವರದಿ ಮಾಡಿವೆ.['ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?]

Shocking Revelation Made In Pratyusha-Rahul’s Last Telephonic call

ಒಟ್ನಲ್ಲಿ ಪ್ರತ್ಯೂಷಾ ಅವರ ಈ ಫೋನ್ ಸಂಭಾಷಣೆ ನೋಡಿದರೆ, ಅವರ ಗೆಳೆಯ ರಾಹುಲ್ ಸಿಂಗ್ ಆಕೆಯನ್ನು ಒತ್ತಾಯಪೂರ್ವಕವಾಗಿ ವೈಶ್ಯಾವಾಟಿಕೆ ಕೆಲಸಕ್ಕೂ ದೂಡುತ್ತಿದ್ದರೇ?, ಅನ್ನೋ ಅನುಮಾನ ಕಾಡುತ್ತದೆ.

English summary
The latest development in the case is, the shocking revelation that the late actress Pratyusha made in her last telephonic conversation with Rahul, before her death.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada