For Quick Alerts
  ALLOW NOTIFICATIONS  
  For Daily Alerts

  ಮಗನೊಂದಿಗೆ ಮೊದಲ ಬಾರಿ ಪುತ್ತರಿ ಹಬ್ಬ ಆಚರಿಸಿದ ಶ್ವೇತಾ ಚೆಂಗಪ್ಪ

  |

  ಕೊಡವರ ಸಾಂಪ್ರದಾಯಿಕ ಹಬ್ಬ 'ಹುತ್ತರಿ'. ಪ್ರತಿ ವರ್ಷ ಕೊಡಗಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಆಚರಿಸುವ ಈ ಹಬ್ಬವನ್ನು ಕೊಡವ ಭಾಷೆಯಲ್ಲಿ ಪುತ್ತರಿ ಎಂದು ಕರೆಯುತ್ತಾರೆ. ಕೊಡಗಿನ ಕೃಷಿಕರ ಪಾಲಿಗೆ ಪುತ್ತರಿ 'ಸುಗ್ಗಿ' ಹಬ್ಬ.

  ಪುತ್ತರಿ ಎಂದರೆ ಅಕ್ಕಿ ಎಂದರ್ಥ. ಭತ್ತ ಕಟಾವಿಗೆ ಅಧಿಕೃತ ಚಾಲನೆ ನೀಡುವ ಸಾಂಪ್ರದಾಯಿಕ ಹಬ್ಬವೇ ಪುತ್ತರಿ. ಈ ಹಬ್ಬವನ್ನ ನಿನ್ನೆ ಕೊಡಗಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

  ಶ್ವೇತಾ ಚೆಂಗಪ್ಪ ಮನೆಯಲ್ಲೂ ಪುತ್ತರಿ ಹಬ್ಬವನ್ನು ಸಡಗರಿಂದ ಆಚರಿಸಲಾಯಿತು. ಪುಟ್ಟ ಮಗನೊಂದಿಗೆ ಮೊದಲ ಬಾರಿಗೆ ನಟಿ ಶ್ವೇತ ಚೆಂಗಪ್ಪ ಪುತ್ತರಿ ಹಬ್ಬ ಆಚರಿಸಿದರು.

  ಕೊಡವ ಶೈಲಿಯಲ್ಲಿ ಹೆಜ್ಜೆ ಹಾಕುತ್ತಾ, ''ಎಲ್ಲರಿಗೂ ಹುತ್ತರಿ ಹಬ್ಬದ ಶುಭಾಶಯಗಳು. ಇದು ನನ್ನ ಮಗನ ಮೊದಲ ಹುತ್ತರಿ ಹಬ್ಬ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ನನ್ನ ಮಗನ ಮೇಲಿರಲಿ'' ಎಂದಿದ್ದಾರೆ ಶ್ವೇತಾ ಚೆಂಗಪ್ಪ. ಈ ವಿಡಿಯೋನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶ್ವೇತಾ ಚೆಂಗಪ್ಪ ಹಂಚಿಕೊಂಡಿದ್ದಾರೆ.

  ತಾಯಿ ಆಗ್ತಿದ್ದಾರೆ ನಟಿ, ನಿರೂಪಕಿ ಶ್ವೇತ ಚೆಂಗಪ್ಪತಾಯಿ ಆಗ್ತಿದ್ದಾರೆ ನಟಿ, ನಿರೂಪಕಿ ಶ್ವೇತ ಚೆಂಗಪ್ಪ

  ಕಳೆದ ಸೆಪ್ಟೆಂಬರ್ ನಲ್ಲಿ ನಟಿ ಶ್ವೇತ ಚೆಂಗಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೂರು ತಿಂಗಳ ಪುಟಾಣಿ ಕೊಡಗಿನ ವೀರನೊಂದಿಗೆ ಮೊದಲ ಹುತ್ತರಿ ಹಬ್ಬದ ಸಡಗರ ತಾಯಿ ಶ್ವೇತಾ ಚೆಂಗಪ್ಪಗೆ ಖುಷಿ ಕೊಟ್ಟಿದೆ.

  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶ್ವೇತಾ ಚೆಂಗಪ್ಪ ದಂಪತಿವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶ್ವೇತಾ ಚೆಂಗಪ್ಪ ದಂಪತಿ

  ಕೊಡಗು ಮೂಲದ ನಟಿ ಶ್ವೇತಾ ಚೆಂಗಪ್ಪ 'ಕಾದಂಬರಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 'ಬಿಗ್ ಬಾಸ್' ಸ್ಪರ್ಧಿಯೂ ಆಗಿದ್ದ ಶ್ವೇತಾ ಚೆಂಗಪ್ಪ, 'ಮಜಾ ಟಾಕೀಸ್'ನಲ್ಲಿ 'ರಾಣಿ'ಯಾಗಿ ಜನಪ್ರಿಯತೆ ಪಡೆದವರು. ಸದ್ಯ ಮಗುವಿನ ಲಾಲನೆ-ಪಾಲನೆಯಲ್ಲಿ ತೊಡಗಿರುವ ಶ್ವೇತಾ ಚೆಂಗಪ್ಪ, ಬಣ್ಣದ ಪ್ರಪಂಚದಿಂದ ಕೊಂಚ ಬ್ರೇಕ್ ಪಡೆದಿದ್ದಾರೆ.

  English summary
  TV Actress Shwetha Changappa celebrates Puthari Festival with her son.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X