For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಮತ್ತೆ ಒಂದಾದ 'ರಾಧಾ ರಮಣ' ಜೋಡಿ

  |

  ಕಿರುತೆರೆ ಪ್ರಪಂಚದಲ್ಲಿ ಒಂದಲ್ಲ ಒಂದು ಬದಲಾವಣೆಗಳು, ಕಲಾವಿದರ ಅತಿಥಿ ಪಾತ್ರ, ಒಂದು ಸೀರಿಯಲ್ ಮೂಲಕ ಪ್ರಖ್ಯಾತಿ ಪಡೆದ ಜೋಡಿ ಮತ್ತೊಂದು ಸೀರಿಯಲ್‌ಗೆ ಆಗಮಿಸೋದು ಹೀಗೆ ಒಂದಲ್ಲ ಒಂದು ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇರುತ್ತವೇ. ಇದೀಗ 'ರಾಧಾ ರಮಣ' ಸೀರಿಯಲ್‌ನ ಫೇಮಸ್ ಜೋಡಿಯಾಗಿದ್ದ ಸ್ಕಂದ ಮತ್ತು ಶ್ವೇತಾ ಮತ್ತೆ ತೆರೆಮೇಲೆ ಒಂದಾಗುತ್ತಿದ್ದಾರೆ. ಈ ಸುದ್ದಿ ತಿಳಿದು ಅಭಿಮಾನಿಗಳು ಖುಷಿಯಾಗಿದ್ದಾರೆ.

  ಈ ಹಿಂದೆ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಸೀರಿಯಲ್ ಸಾಕಷ್ಟು ಜನಪ್ರೀಯತೆಯನ್ನು ಪಡೆದಿತ್ತು. ಕಥೆಯ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು ಈ ಸೀರಿಯಲ್. ಹಾಗೇ ಇದರ ಪ್ರಮುಖ ಪಾತ್ರದಾರಿಗಳಾದ ಶ್ವೇತಾ ಆರ್ ಪ್ರಸಾದ್ ರಾಧ ಪಾತ್ರದಲ್ಲಿ ಹಾಗೂ ಸ್ಕಂದ ಅಶೋಕ್ ರಮಣ್ ಪಾತ್ರದಲ್ಲಿ ಜನಮನ ಗೆದ್ದಿದ್ದರು. ಈ ಸೀರಿಯಲ್ ಮೂಲಕವೇ ಹೆಸರುವಾಸಿಯಾಗಿದ್ದ ಈ ಜೋಡಿಯನ್ನು ಈಗಲೂ ಜನ ನೆನಪಿಟ್ಟುಕೊಂಡಿದ್ದಾರೆ. ಇವರಿಬ್ಬರು ತೆರೆಮೇಲೆ ಬಂದರೆ ಚೆನ್ನಾಗಿರುತ್ತೆ ಎಂಬ ಬಗ್ಗೆ ಅಂದುಕೊಳ್ಳುತ್ತಿರುತ್ತಾರೆ. ಇದೀಗ ಜನರ ಆಸೆಯಂತೆ ಮತ್ತೆ ಈ ಜೋಡಿ ಒಂದಾಗುತ್ತಿದೆ.

  ಕೆಲ ದಿನಗಳ ಹಿಂದೆ ನಟಿ ಶ್ವೇತ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಕಂದ ಅಶೋಕ್ ಜೊತೆಗೆ ತೆಗೆದಿರುವ ಒಂದು ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಹೊಸದೇನೋ ಬರುತ್ತಿದೆ ಎಂದು ಈ ಮೂಲಕ ತಿಳಿಸಿದ್ದರು ಶ್ವೇತ. ಇದನ್ನು ಗಮನಿಸಿದ ಅಭಿಮಾನಿಗಳು ಏನಿರಬಹುದು ಇದರ ಹಿಂದಿನ ಗುಟ್ಟು ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದರು. ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ಪ್ರಖ್ಯಾತ ಸೀರಿಯಲ್ ಒಂದರಲ್ಲಿ ಸ್ಕಂದ ಅಶೋಕ್ ಮತ್ತು ಶ್ವೇತಾ ಅತಿಥಿ ಪಾತ್ರವನ್ನು ಮಾಡಲಿದ್ದಾರೆ.

  ರಾಧೆಶ್ಯಾಮ್ ಧಾರವಾಹಿಯಲ್ಲಿ ಇವರಿಬ್ಬರು ಅತಿಥಿ ಪಾತ್ರ ಮಾಡಲು ಒಂದಾಗಿದ್ದಾರೆ. ಇದೊಂದು ವಿಶೇಷ ಪಾತ್ರವಾಗಿದ್ದು, ಸ್ಕಂದ ಅಶೋಕ್ ಮತ್ತು ಶ್ವೇತಾ ಅವರನ್ನು ತೆರೆಮೇಲೆ ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಹಾಗೇ ರಾಧೆಶ್ಯಾಮ್ ಸೀರಿಯಲ್‌ನಲ್ಲಿ ಸ್ಕಂದ ಅಶೋಕ್ ಮತ್ತು ಶ್ವೇತಾ ಅವರ ಅತಿಥಿ ಪಾತ್ರದ ಬಗ್ಗೆ ಈಗಾಗಲೇ ಪ್ರೋಮೊ ಕೂಡ ರಿಲೀಸ್ ಆಗಿದ್ದು, ಪ್ರೋಮೊಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇವರಿಬ್ಬರ ಎಪಿಸೋಡ್ ಶೀಘ್ರದಲ್ಲೆ ಪ್ರಸಾರವಾಗಲಿದ್ದು, ಅಭಿಮಾನಿಗಳು ಆದಷ್ಟು ಬೇಗ ಪ್ರಸಾರವಾಗಲು ಎದುರುನೋಡುತ್ತಿದ್ದಾರೆ.

  ಇನ್ನು 'ರಾಧಾ ರಮಣ' ಸೀರಿಯಲ್ ಬಳಿಕ ಸ್ಕಂದ ಅಶೋಕ್ ಮತ್ತು ಶ್ವೇತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇವರಿಬ್ಬರು ಬೇರೆ ಬೇರೆ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಶುರು ಮಾಡಿದ್ದರು. ಹೀಗಿದ್ದರೂ ಕೂಡ ಕಿರುತೆರೆ ಅಭಿಮಾನಿಗಳು ಇವರಿಬ್ಬರು ಮತ್ತೆ ಸೀರಿಯಲ್‌ನಲ್ಲಿ ಒಂದಾಗಿ ಅಭಿನಯಿಸಬೇಕೆಂಬ ಒತ್ತಾಯ ಮುಂದಿಟ್ಟಿದ್ದರು. ಅದು ಈಗ ನಿಜವಾಗುವ ಸಮಯ ಹತ್ತಿರ ಬಂದಿದೆ. ರಾಧೆಶ್ಯಾಮ್ ಸೀರಿಯಲ್‌ನ ನಾಯಕ-ನಾಯಕಿ ಯನ್ನು ಹತ್ತಿರ ಮಾಡಲು ಶ್ವೇತಾ ಮತ್ತು ಸ್ಕಂದ ಅಶೋಕ್ ನೆರವಾಗಲಿದ್ದಾರೆ. ಅದು ಹೇಗೆ ಎಂಬುದನ್ನು ಸೀರಿಯಲ್ ನೋಡಿ ತಿಳಿದುಕೊಳ್ಳಬೇಕು. ಈಗಾಗಲೇ ಚಿಕ್ಕಮಗಳೂರಿನ ಹಚ್ಚ ಹಸಿರಿನ ಪರಿಸರದ ನಡುವೆ ಇವರಿಬ್ಬರ ಶೂಟಿಂಗ್ ಕೂಡ ಮುಗಿದಿದೆ.

  ಇನ್ನು ಈ ಹಿಂದೆ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಸೀರಿಯಲ್‌ ಮೂರು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದೆ. ಸೀರಿಯಲ್ ಅರ್ಧದಲ್ಲಿಯೇ ನಟಿ ಶ್ವೇತಾ ಅವರು ವೈಯುಕ್ತಿಕ ಕಾರಣ ನೀಡಿ ಸೀರಿಯಲ್‌ನಿಂದ ಹೊರನಡೆದಿದ್ದರು . ಅವರ ಜಾಗಕ್ಕೆ ಮತ್ತೆ ಕಾವ್ಯಾ ಗೌಡ ಆಗಮಿಸಿದ್ದರು. ಆದರೇ ಸೀರಿಯಲ್ ಮುಗಿಯುವ ಸಂದರ್ಭದಲ್ಲಿ ಸರಿಯಾದ ಎಂಡಿಂಗ್ ಕೂಡ ನೀಡದೇ ಧಾರವಾಹಿಯನ್ನು ನಿಲ್ಲಿಸಲಾಗಿತ್ತು. ಇದು 'ರಾಧಾ ರಮಣ' ಸೀರಿಯಲ್ ಪ್ರಿಯರಿಗೆ ಸಾಕಷ್ಟು ಬೇಸರ ಉಂಟು ಮಾಡಿತ್ತು. ಹೀಗಾಗಿ ಮತ್ತೆ ರಾಧರಮಣ ಸೀರಿಯಲ್‌ ಅನ್ನು ಪ್ರಸಾರ ಮಾಡಬೇಕು, ಅಥವಾ ರಾಧರಮಣ ಪಾರ್ಟ್ 2 ಮಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಇದಕ್ಕೆ ಯಾವುದೇ ಉತ್ತರ ಕೂಡ ಸಿಕ್ಕಿರಲಿಲ್ಲ. ಈಗ 'ರಾಧಾ ರಮಣ' ಸಿರಿಯಲ್‌ನ ಜೋಡಿ ಶ್ವೇತಾ ಮತ್ತು ಸ್ಕಂದ ಮತ್ತೊಂದು ಸೀರಿಯಲ್ ಮೂಲಕ ಮತ್ತೆ ಒಂದಾಗುತ್ತಿರೋದಕ್ಕೆ ಫ್ಯಾನ್ಸ್ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

  English summary
  Actress Shwetha R Prasad and Skanda Ashok reunite for Radha Shyam serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X