For Quick Alerts
  ALLOW NOTIFICATIONS  
  For Daily Alerts

  ಸಿ ಎಸ್ ಪಿ ಮನೆಯಲ್ಲಿ ಭರ್ಜರಿ ಚಿತ್ರೀಕರಣ : ಮನೆಗೆ ಬಂದ ಚಂದ್ರಣ್ಣನಿಗೆ ಶಾಕ್

  |

  ಸಿ ಎಸ್ ಪಿ ಮನೆಯಲ್ಲಿ ಭರ್ಜರಿ ಚಿತ್ರೀಕರಣ. ಸಿನಿಮಾದಲ್ಲಿ ಅಭಿನಯಿಸಲು ಹರಿಕುಮಾರ್ ಮತ್ತು ಶಾಮಲಾ ಇಬ್ಬರು ರೆಡಿಯಾಗಿದ್ದಾರೆ. ಆದ್ರೆ ಹರಿ ಕುಮಾರ್ ಮಾತ್ರ ಟೇಕ್ ಮೇಲೆ ಟೇಕ್ ತಗೋತಾನೆ ಇದ್ದಾರೆ. ಡೈಲಾಗ್ ಹೇಳೋಕೆ ಬರದೆ ಪರದಾಡುತ್ತಿದ್ದಾರೆ.

  ಮೇಕಪ್ ಮಾಡಿಕೊಂಡು ಕೂತಿರುವ ಶಾಮಲಾ ಅವರಿಗೆ ಎಷ್ಟೊತ್ತಿಗೆ ಕ್ಯಾಮರಾ ಮುಂದೆ ಹೋಗುತ್ತೀನಿ ಎನ್ನುವ ತವಕ. ಲಾಯರ್ ಆಫೀಸ್ ಅನ್ನು ಶೂಟಿಂಗ್ ಸೆಟ್ ಮಾಡಿಕೊಂಡಿದ್ದಾರೆ ಶಾಮಲಾ ಮತ್ತು ಹರಿಕುಮಾರ್.

  ಮಗಳು ಜಾನಕಿಯಿಂದ ಸಿ ಎಸ್ ಪಿಗೆ ಸಿಕ್ತು ಒಲವಿನ ಉಡುಗೊರೆ

  ಮತ್ತೊಂದೆಡೆ ಜಾನಕಿ ಮತ್ತು ನಿರಂಜನ್ ಇಬ್ಬರ ಮದುವೆ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ನಿರಂಜನ್ ತಾಯಿ ದೇವಕಿ ಅವರು ಜಾನಕಿ ಮತ್ತು ನಿರಂಜನ್ ಅವರಿಗೆ ಮದುವೆ ಮಾಡಿಸುವ ಪ್ಲಾನ್ ಮಾಡಿದ್ದಾರೆ. ಮುಂದೆ ಓದಿ..

  ಊಟ ತರುವುದನ್ನ ನಿಲ್ಲಿಸಿದ ಆನಂದ್

  ಊಟ ತರುವುದನ್ನ ನಿಲ್ಲಿಸಿದ ಆನಂದ್

  ಆನಂದ್ ಮನೆಯಿಂದ ಜಾನಕಿಗಾಗಿ ದಿನ ಊಟ ತಂದು ಕೊಡುತ್ತಿದ್ದರು. ಆನಂದ್ ತಾಯಿ ಮಂಗಳಮ್ಮ ಜಾನಕಿ ಅವರಿಗೆ ಅಂತ ವಿಶೇಷವಾಗಿ ಊಟ ಕಳುಹಿಸಿಕೊಡುತ್ತಿದ್ದರು. ಆದ್ರೆ ಜಾನಕಿ ಊಟ ತರುವುದು ಬೇಡ ಎಂದು ಹೇಳದ ಪರಿಣಾಮ ಆನಂದ್ ಊಟ ತರುವುದನ್ನ ನಿಲ್ಲಿಸಿದ್ದಾರೆ. ಈ ಹಿಂದೆ ಆನಂದ್ ಮನೆಯ ಊಟ ಮಾಡುತ್ತಿರುವುದಾಗಿ ಹೇಳಿದ್ದಕ್ಕೆ ಜಾನಕಿ ಮೇಲೆಯೆ ಅನುಮಾನ ಪಟ್ಟಿದ್ದರು ಪತಿ ನಿರಂಜನ್.

  ಚಿರಂತನ್ ಗಾಗಿ ಮನೆ ಬಿಟ್ಟು ಬರುತ್ತಾರಾ ಚಂಚಲ?

  ಸಿನಿಮಾ ಮಾಡುವ ಆಸೆಯಲ್ಲಿ ಹರಿಕುಮಾರ್

  ಸಿನಿಮಾ ಮಾಡುವ ಆಸೆಯಲ್ಲಿ ಹರಿಕುಮಾರ್

  ಶಾಮಲಾ ಅವರ ಪತಿ ಹರಿಕುಮಾರ್ ಮತ್ತು ಶಾಮಲಾ ಅವರಿಗೆ ಸಿನಿಮಾದಲ್ಲಿ ಅಭಿನಯ ಮಾಡುವ ಆಸೆಯನ್ನು ಹುಟ್ಟಿಸಿದ್ದಾರೆ. ಸಿ ಎಸ್ ಪಿ ಕೊಡುವ ಸಂಬಳ ಸಾಕಾಗುವುದಿಲ್ಲ ಅಂತ ಹೇಳಿ ಆಕ್ಟಿಂಗ್ ಮಾಡಿಸುವುದಾಗಿ ಹೇಳಿ ಒಪ್ಪಿಸಿದ್ದಾರೆ. ಸಿ ಎಸ್ ಪಿ ಆಫೀಸ್ ನಲ್ಲೆ ಶೂಟಿಂಗ್ ಮಾಡಲು ಒಪ್ಪಿಕೊಂಡಿದ್ದಾರೆ ಶಾಮಲಾ. ಸಿ ಎಸ್ ಪಿ ಮನೆಗೆ ಬರುವುದರೊಳಗೆ ಶೂಟಿಂಗ್ ಮುಗಿಸುವ ಪ್ಲಾನ್ ಹರಿಕುಮಾರ್ ಶಾಮಲಾ ಅವರದ್ದು.

  ಜಾನಕಿ ಮತ್ತು ನಿರಂಜನ್ ಗೆ ಮತ್ತೆ ಮದುವೆ

  ಜಾನಕಿ ಮತ್ತು ನಿರಂಜನ್ ಗೆ ಮತ್ತೆ ಮದುವೆ

  ಜಾನಕಿ ಮತ್ತು ನಿರಂಜನ್ ಗೆ ಮತ್ತೆ ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ ನಿರಂಜನ್ ತಾಯಿ ದೇವಕಿ. ಆದ್ರೆ ಜಾನಕಿ ಇಷ್ಟು ಬೇಗ ಮದುವೆ ಆಗಲು ತಯಾರಿಲ್ಲ ಹೇಳಿದ್ದಾರೆ. ಅಲ್ಲದೆ ಜಾನಕಿ ಸತ್ಯ ಒಪ್ಪಿಕೊಳ್ಳಲು ತಯಾರಿಲ್ಲ. ನಿರಂಜನ್ ಜೊತೆ ಮತ್ತೆ ಮದುವೆ ಆಗುವ ವಿಚಾರವನ್ನು ಜಾನಕಿ ಸದ್ಯಕ್ಕೆ ನಿರಾಕರಿಸಿದ್ದಾರೆ.

  ಜಾನಕಿಯೇ ಸೊಸೆ ಎಂದು ನಿರಂಜನ್ ಮನೆಯವರಿಗೆ ಗೊತ್ತಾಗುತ್ತಾ?

  ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಬೇಡ

  ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಬೇಡ

  ಮದುವೆ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಬೇಡ ಎಂದು ನಿರಂಜನ್ ಅಮ್ಮನ ಬಳಿ ಹೇಳಿದ್ದಾರೆ. ಹೀಗೆ ಹೇಳುತ್ತಿದ್ರೆ ಜಾನಕಿ ಮನೆಯಿಂದ ಹೊರಟು ಹೋಗುತ್ತಾರೆ ಎಂದು ನಿರಂಜನ್ ಅಮ್ಮನಿಗೆ ಹೇಳುವ ಮೂಲಕ ಇನ್ನುಮುಂದೆ ಜಾನಕಿ ಜೊತೆ ಮದುವೆ ಆಗುವ ಮಾತನ್ನು ಹೇಳಬೇಡಿ ಎಂದು ಅಮ್ಮನ ಬಳಿ ಪ್ರಮಾಣ ಮಾಡಿಸಿಕೊಂಡಿದ್ದಾರೆ.

  ಸಿ ಎಸ್ ಪಿ ಮನೆಯಲ್ಲಿ ಭರ್ಜರಿ ಶೂಟಿಂಗ್

  ಸಿ ಎಸ್ ಪಿ ಮನೆಯಲ್ಲಿ ಭರ್ಜರಿ ಶೂಟಿಂಗ್

  ಶಾಮಲಾ ಮತ್ತು ಹರಿಕುಮಾರ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಿರ್ದೇಶಕರು ಹೇಳಿಕೊಟ್ಟ ಡೈಲಾಗ್ ಕೇಳಿ ಹರಿಕುಮಾರ್ ಶಾಕ್ ಆಗಿದ್ದಾರೆ. ಪದೇ ಪದೇ ಡೈಲಾಗ್ ಹೇಳುತ್ತಿರುವುದನ್ನು ನೋಡಿ, ಶಾಮಲಾ, ಹರಿಕುಮಾರ್ ಕೇಸ್ ನಲ್ಲಿ ಮಾತ್ರ ಢಮಾರ್ ಅಂತ ಅಂದುಕೊಂಡಿದ್ದೆ, ಆದ್ರೆ ಶೂಟಿಂಗ್ ನಲ್ಲೂ ಢಮಾರ್ ಅಂತ ಹೇಳಿ ಹಾಸ್ಯ ಮಾಡಿದ್ದಾರೆ.

  ಮನೆಗೆ ಬಂದ ಸಿ ಎಸ್ ಪಿಗೆ ಶಾಕ್

  ಮನೆಗೆ ಬಂದ ಸಿ ಎಸ್ ಪಿಗೆ ಶಾಕ್

  ಸಿ ಎಸ್ ಪಿ ಮನೆಗೆ ಬಂದಾಗ ಅವರಿಗೆ ಅವಾಜ್ ಹಾಕಿದನ್ನು ನೋಡಿ ಸಿ ಎಸ್ ಪಿ ಒಮ್ಮಿ ಗೊಂದಲಕ್ಕೆ ಈಡಾಗಿದ್ದಾರೆ. ಲಾಯರ್ ಆಫೀಸ್ ನಲ್ಲಿ ಚಿತ್ರೀಕರಣ ಮಾಡುತ್ತಿರುವುದನ್ನು ನೋಡಿ ಎಲ್ಲರನ್ನು ತರಾಟೆಗೆ ತೆಗೆದುಕೊಂಡಿದ್ದರು ಸಿ ಎಸ್ ಪಿ.

  ಜಾನಕಿ ಮೇಲೆಯೆ ಅನುಮಾನ ಪಟ್ಟ ಪತಿ ನಿರಂಜನ್

  ಚಿತ್ರೀಕರಣಕ್ಕೆ ಅವಕಾಶಕೊಟ್ಟವರು ಅವಿವೇಕಿಗಳು

  ಚಿತ್ರೀಕರಣಕ್ಕೆ ಅವಕಾಶಕೊಟ್ಟವರು ಅವಿವೇಕಿಗಳು

  ಚಿತ್ರೀಕರಣಕ್ಕೆ ಅವಕಾಶ ಕೊಡದೆ ಚಿತ್ರತಂಡವನ್ನು ಸಿ ಎಸ್ ಪಿ ವಾಪಸ್ ಕಳುಹಿಸಿದ್ದಾರೆ. ಅವಕಾಶ ಮಾಡಿಕೊಟ್ಟವರು ಶುದ್ದ ಅವಿವೇಕಿಗಳು ಎಂದು ಶಾಮಲಾ ಪತಿಗೆ ಬೈದು ಎಲ್ಲರನ್ನು ಹೊರಕಳಿಹಿಸಿದ್ರು. ಇದರಿಂದ ಹರಿಕುಮಾರ್ ಮತ್ತು ಶಾಮಲಾ ಅಭಿನಯಿಸುವ ಕನಸು ನುಚ್ಚು ನೂರಾಯಿತು.

  English summary
  Shyamala and Harikumar prepared to shooting in 'Magalu Janaki'. When CSP entered the home and got shocked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X