For Quick Alerts
  ALLOW NOTIFICATIONS  
  For Daily Alerts

  ಹಿಂದಿ ಬಿಗ್‌ಬಾಸ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಇವರೇ!

  |

  ಬಿಗ್‌ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಮೂವರು ಸ್ಟಾರ್ ಸೆಲೆಬ್ರಿಟಿಗಳು ಒಟ್ಟಿಗೆ ಮನೆ ಪ್ರವೇಶ ಮಾಡಿದ್ದು, ಎರಡು ವಾರಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಸಿದ್ಧಾರ್ಥ್ ಶುಕ್ಲಾ, ಗೌಹರ್ ಖಾನ್ ಮತ್ತು ಹೀನಾ ಖಾನ್ ಈ ಬಾರಿ ಹೆಚ್ಚು ಸುದ್ದಿಯಲ್ಲಿರುವ ಸ್ಪರ್ಧಿಗಳು.

  ಈ ಮೂವರು ಪೈಕಿ ಸಿದ್ಧಾರ್ಥ್ ಶುಕ್ಲಾ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರಬಹುದು ಎಂಬ ಅಂದುಕೊಂಡವರೇ ಹೆಚ್ಚು. ಆದ್ರೆ, ಬಿಗ್ ಬಾಸ್ ವೀಕ್ಷಕರ ಲೆಕ್ಕಚಾರ ಉಲ್ಟಾಪಲ್ಟಾ ಆಗಿದ್ದು, ಸಿದ್ಧಾರ್ಥ್ ಶುಕ್ಲಾ ಹೆಚ್ಚು ಸಂಭಾವನೆ ಪಡೆಯುತ್ತಿಲ್ಲ ಎಂದು ತಿಳಿದು ಬಂದಿದೆ. ಹಾಗಾದ್ರೆ, ಹೆಚ್ಚು ಸಂಭಾವನೆ ಸಿಗುತ್ತಿರುವುದು ಯಾರಿಗೆ? ಮುಂದೆ ಓದಿ...

  ಹೀನಾ ಖಾನ್ ದುಬಾರಿ ಸ್ಪರ್ಧಿ

  ಹೀನಾ ಖಾನ್ ದುಬಾರಿ ಸ್ಪರ್ಧಿ

  ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ನಟಿ ಹೀನಾ ಖಾನ್ ದುಬಾರಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಎರಡು ವಾರಗಳ ಆಟಕ್ಕಾಗಿ ಹೀನಾ ಖಾನ್ ಸುಮಾರು 72 ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಬಿಟೌನ್‌ನಲ್ಲಿ ವರದಿಯಾಗಿದೆ.

  ಹಿಂದಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟ ವಿವಾದಿತ ಸ್ಪರ್ಧಿ, ಆಕೆಗೆ ಅತಿ ಹೆಚ್ಚು ಸಂಭಾವನೆ!ಹಿಂದಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟ ವಿವಾದಿತ ಸ್ಪರ್ಧಿ, ಆಕೆಗೆ ಅತಿ ಹೆಚ್ಚು ಸಂಭಾವನೆ!

  ಸಿದ್ಧಾರ್ಥ್ ಶುಕ್ಲಾಗೆ ಎಷ್ಟು ಹಣ?

  ಸಿದ್ಧಾರ್ಥ್ ಶುಕ್ಲಾಗೆ ಎಷ್ಟು ಹಣ?

  ಇನ್ನು ಸಿದ್ಧಾರ್ಥ್ ಶುಕ್ಲಾ ಅವರಿಗೆ ಎರಡು ವಾರಗಳ ಆಟಕ್ಕಾಗಿ ಭಾರಿ ಮೊತ್ತವನ್ನೆ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಹದಿನಾಲ್ಕು ದಿನಗಳ ಕಾಲ್‌ಶೀಟ್‌ಗಾಗಿ 32 ಲಕ್ಷ ಸಂಭಾವನೆ ನೀಡಲಾಗುತ್ತಿದೆಯಂತೆ.

  ಶುಕ್ಲಾಗೆ ಕೊಡಲಾಗ್ತಿದೆ 12 ಕೋಟಿ!

  ಶುಕ್ಲಾಗೆ ಕೊಡಲಾಗ್ತಿದೆ 12 ಕೋಟಿ!

  ಸಿದ್ಧಾರ್ಥ್ ಶುಕ್ಲಾ ಅವರ ಸಂಭಾವನೆ ವಿಚಾರದಲ್ಲಿ ಮತ್ತೊಂದು ಸುದ್ದಿ ವರದಿಯಾಗಿದೆ. ಶುಕ್ಲಾ ಅವರು ಬಿಗ್ ಬಾಸ್ ಎಪಿಸೋಡ್‌ಗಾಗಿ 12 ಕೋಟಿ ವೇತನ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಒಂದು ವೇಳೆ ಇದೇ ನಿಜ ಆದ್ರೆ, ಸಿದ್ಧಾರ್ಥ್ ಶುಕ್ಲಾ ಅತ್ಯಂತ ದುಬಾರಿ ಸ್ಪರ್ಧಿಯಾಗಿರಲಿದ್ದಾರೆ.

  ತೆಲುಗು ಬಿಗ್‌ಬಾಸ್‌ನಿಂದ ಗಂಗವ್ವ ಹೊರಗೆ!

  ತೆಲುಗು ಬಿಗ್‌ಬಾಸ್‌ನಿಂದ ಗಂಗವ್ವ ಹೊರಗೆ!

  ಮತ್ತೊಂದೆಡೆ ತೆಲುಗು ಬಿಗ್ ಬಾಸ್ ಕುತೂಹಲ ಹೆಚ್ಚಿಸಿದೆ. ಯ್ಯೂಟ್ಯೂಬ್ ಸ್ಟಾರ್ ಗಂಗವ್ವ ಬಿಗ್ ಮನೆಯಿಂದ ಹೊರಗೆ ಬಂದಿದ್ದಾರೆ. ಆದ್ರೆ, ಎಲಿಮಿನೇಟ್ ಆಗಿಲ್ಲ. 59 ವರ್ಷದ ಸ್ಪರ್ಧಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ, ಆರೋಗ್ಯ ದೃಷ್ಟಿಯಿಂದ ಹೊರಗೆ ಕಳುಹಿಸಲಾಗಿದೆ.

  English summary
  Siddharth shukla Is not highest Paid contestant in bigg boss 14. hina khan is costly contestant in this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X