For Quick Alerts
  ALLOW NOTIFICATIONS  
  For Daily Alerts

  ಸಿದ್ಧಾರ್ಥ್ ಶುಕ್ಲಾ ಸಾವಿನ ಬಗ್ಗೆ ಅನುಮಾನ: ರಾತ್ರಿ ಮಲಗುವ ಮೊದಲು ಔಷಧಿ ಸೇವಿಸಿದ್ದ ನಟ

  By ಫಿಲ್ಮಿಬೀಟ್ ಡೆಸ್ಕ್
  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ಹಠಾತ್ ನಿಧನ ಅಭಿಮಾನಿಗಳಿಗೆ, ಸ್ನೇಹಿತರಿಗೆ ಅವರ ಕುಟುಂಬಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ. ಸಿದ್ಧಾರ್ಥ್ ಇನ್ನಿಲ್ಲ ಎನ್ನುವ ಸುದ್ದಿಯನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಗ್ ಬಾಸ್ 13 ವಿನ್ನರ್ ಸಿದ್ಧಾರ್ಥ್ ಶುಕ್ಲಾ ಗುರುವಾರ ಬೆಳಗ್ಗೆ (ಸೆಪ್ಟಂಬರ್ 02) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದ ನಟ ಸಿದ್ಧಾರ್ಥ್ ಸಾವು ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

  ರಾತ್ರಿ ಮಲಗಿದ್ದ ಸಿದ್ಧಾರ್ಥ್ ಬೆಳಗ್ಗೆ ಅಷ್ಟೊತ್ತಿಗೆ ಶವವಾಗಿ ಕಾಣಿಸಿದ್ದು ಹಲವು ಸಂಶಯಗಳನ್ನು ಹುಟ್ಟುಹಾಕಿದೆ. ಮುಂಬೈ ಪೊಲೀಸರ ಪ್ರಕಾರ ಸಿದ್ಧಾರ್ಥ್ ಮಲಗುವ ಮುನ್ನ ಕೆಲವು ಔಷಧಿಗಳನ್ನು ತೆಗೆದುಕೊಂಡಿದ್ದರು. ಔಷಧಿ ಸೇವಿಸಿ ಮಲಗಿದವರು ಬೆಳಗ್ಗೆ ಎದ್ದಿಲ್ಲ ಎಂದು ಹೇಳಿದ್ದಾರೆ. ಮುಂಬೈನ ಕೂಪರ್ ಆಸ್ಪತ್ರೆಯ ವೈದ್ಯರು ಹೇಳಿರುವ ಪ್ರಕಾರ ಸಿದ್ಧಾರ್ಥ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಮುಂದೆ ಓದಿ...

  ಕೂಪರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ

  ಕೂಪರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ

  ರಾತ್ರಿವರೆಗೂ ಫಿಟ್ ಆಗಿದ್ದ, ಆರೋಗ್ಯವಾಗಿದ್ದ ಸಿದ್ಧಾರ್ಥ್ ಬೆಳಗ್ಗೆ ಅಷ್ಟೊತ್ತಿಗೆ ಇಲ್ಲ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸದ್ಯ ಸಿದ್ಧಾರ್ಥ್ ಮೃತ ದೇಹ ಕೂಪರ್ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಿದ್ಧಾರ್ಥ್ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಶೀಘ್ರದಲ್ಲೇ ಆಸ್ಪತ್ರೆಯಿಂದ ಮೃತದೇಹವನ್ನು ಸಿದ್ಧಾರ್ಥ್ ನಿವಾಸಕ್ಕೆ ರವಾನಿಸಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

  ಸುಶಾಂತ್ ಸಿಂಗ್ ಮತ್ತು ಸಿದ್ಧಾರ್ಥ್ ಶುಕ್ಲಾ ಹಳೆಯ ಫೋಟೋ ವೈರಲ್ಸುಶಾಂತ್ ಸಿಂಗ್ ಮತ್ತು ಸಿದ್ಧಾರ್ಥ್ ಶುಕ್ಲಾ ಹಳೆಯ ಫೋಟೋ ವೈರಲ್

  ಆಸ್ಪತ್ರೆ ವಿರುದ್ಧ ನೆಟ್ಟಿಗರ ಆಕ್ರೋಶ

  ಆಸ್ಪತ್ರೆ ವಿರುದ್ಧ ನೆಟ್ಟಿಗರ ಆಕ್ರೋಶ

  ಸಿದ್ಧಾರ್ಥ್ ಸಾವಿನ ಬಳಿಕ ಅನೇಕರು ಕಾಮೆಂಟ್ ಕೂಪರ್ ಆಸ್ಪತ್ರೆ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, "ಕೂಪರ್ ಆಸ್ಪತ್ರೆಯ ವೈದ್ಯರು ಮತ್ತು ಆಡಳಿತ ಮಂಡಳಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ವರದಿಯಲ್ಲಿ ಏನು ತಪ್ಪಿದೆ" ಎಂದು ಹೇಳುತ್ತಿದ್ದಾರೆ.

  ಸಿದ್ಧಾರ್ಥ್ ಸಾವು ಸುಶಾಂತ್ ಸಾವನ್ನು ನೆನಪಿಸುತ್ತಿದೆ

  ಸಿದ್ಧಾರ್ಥ್ ಸಾವು ಸುಶಾಂತ್ ಸಾವನ್ನು ನೆನಪಿಸುತ್ತಿದೆ

  ಸಿದ್ಧಾರ್ಥ್ ಶುಕ್ಲಾ ಸಾವು ಕಳೆದ ವರ್ಷ ಜೂನ್ ನಲ್ಲಿ ಮೃತಪಟ್ಟಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನು ನೆನಪಿಸುತ್ತಿದೆ. ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆ ಎಂದು ಮೊದಲು ವರದಿಯಾಗಿತ್ತು. ಆದರೆ ಬಳಿಕ ದೊಡ್ಡ ಮಟ್ಟದಲ್ಲಿ ತಿರುವು ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಆತ್ಮಹತ್ಯೆಯಲ್ಲ ಕೊಲೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದುವರೆಗೂ ಸುಶಾಂತ್ ಸಾವಿನ ಅಂತಿಮ ವರದಿ ಹೊರಬಿದ್ದಿಲ್ಲ.

  ಕುತೂಹಲ ಮೂಡಿಸಿದ ಮರಣೋತ್ತರ ವರದಿ

  ಕುತೂಹಲ ಮೂಡಿಸಿದ ಮರಣೋತ್ತರ ವರದಿ

  ಸುಶಾಂತ್ ಸಾವಿನ ಘಟನೆ ಇನ್ನು ಹಸಿರಾಗಿರುವಾಗಲೇ ಮತ್ತೋರ್ವ ಖ್ಯಾತ ನಟನ ಅನುಮಾನಾಸ್ಪದ ಸಾವು ಅಭಿಮಾನಿಗಳಿಗೆ ಶಾಕ್ ನೀಡಿದೆ. ಸಿದ್ಧಾರ್ಥ್ ಶುಕ್ಲಾ ಮಲಗುವ ಮುನ್ನ ತೆಗೆದುಕೊಂಡಿದ್ದ ಔಷಧಿ ಯಾವುದು? ಸಾವಿಗೆ ಆ ಔಷಧಿಯೇ ಕಾರಣನಾ? ಎನ್ನುವುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಬಹಿರಂಗವಾಗಲಿದೆ.

  ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಪ್ರಾರಂಭ

  ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಪ್ರಾರಂಭ

  ಮಾಡೆಲಿಂಗ್ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸಿದ್ಧಾರ್ಥ್ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು. ಹಲವು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಇತ್ತೀಚಿಗಷ್ಟೆ ಪ್ರಸಾರವಾದ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. 'ಡ್ಯಾನ್ಸ್ ದಿವಾನೆ-3' ಕಾರ್ಯಕ್ರಮದಲ್ಲಿ ಶೆಹನಾಜ್ ಗಿಲ್ ಜೊತೆ ಭಾಗವಹಿಸಿದ್ದರು.

  ಬಿಗ್ ಬಾಸ್ 13 ವಿನ್ನರ್

  ಬಿಗ್ ಬಾಸ್ 13 ವಿನ್ನರ್

  ಸಿದ್ಧಾರ್ಥ್ 2019ರಲ್ಲಿ ಪ್ರಸಾರವಾದ ಬಿಗ್ ಬಾಸ್ 13 ರಲ್ಲಿ ಭಾಗಿಯಾಗಿದ್ದರು. ಅದ್ಭುತವಾಗಿ ಆಟವಾಡುವ ಮೂಲಕ ಸಿದ್ಧಾರ್ಥ್ ಪ್ರೇಕ್ಷಕರ ಮನಗೆದ್ದಿದ್ದರು. ಬಿಗ್ ಬಾಸ್ 13 ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದರು. ಇನ್ನು ಬಿಗ್ ಬಾಸ್ 14ನಲ್ಲೂ ಸಿದ್ಧಾರ್ಥ್ ಗೆಸ್ಟ್ ಆಗಿ ಭಾಗಿಯಾಗಿದ್ದರು.

  ಸಿದ್ಧಾರ್ಥ್ ಧಾರಾವಾಹಿಗಳು

  ಸಿದ್ಧಾರ್ಥ್ ಧಾರಾವಾಹಿಗಳು

  ಇನ್ನು ಸಿದ್ಧಾರ್ಥ 'ಬಾಲಿಕಾ ವಧು', 'ದಿಲ್ ಸೆ ದಿಲ್ ತಕ್' ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸುತ್ತಿದ್ದು, ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. 'ಜಲಕಾ ದಿಕ್ ಲಾಜಾ 6', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ' ಮತ್ತು 'ಬಿಗ್ ಬಾಸ್ 13' ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

  English summary
  Sidharth Shukla death reason: Actor took some medicines before sleeping as hospital sources say.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X