»   » 'ದೊಡ್ಮನೆ'ಯೊಳಗಿರುವವರ ಕಣ್ಣಿಗೆ ಈ ಮೂವರು ಮಾತ್ರ ಘಟಾನುಘಟಿಗಳು.!

'ದೊಡ್ಮನೆ'ಯೊಳಗಿರುವವರ ಕಣ್ಣಿಗೆ ಈ ಮೂವರು ಮಾತ್ರ ಘಟಾನುಘಟಿಗಳು.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಆರಂಭ ಆಗಿ ಒಂದು ವಾರ ಕಳೆದಿದೆ. ಈ ಬಾರಿ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದರೂ, 'ಬಿಗ್ ಬಾಸ್' ಮನೆಯೊಳಗೆ ಉಪ್ಪು, ಹುಳಿ, ಖಾರ ಸ್ವಲ್ಪ ಕಮ್ಮಿ ಆಗಿದೆ ಅನ್ನೋದು ಅನೇಕರ ಅಭಿಪ್ರಾಯ.

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ

ಅದೇನೇಯಿದ್ದರೂ, 'ದೊಡ್ಮನೆ'ಯೊಳಗೆ ಇರುವವರ ಕಣ್ಣಿಗೆ 'ಮೂವರು' ಮಾತ್ರ 'ಘಟಾನುಘಟಿ' ಸ್ಪರ್ಧಿಗಳಂತೆ ಕಾಣುತ್ತಿದ್ದಾರೆ. ''ಇವರು ನನಗೆ ಕಠಿಣ ಸ್ಪರ್ಧಿ'' ಎಂದು 'ಬಿಗ್ ಬಾಸ್' ಸ್ಪರ್ಧಿಗಳೇ ಮೂವರನ್ನು ಹೆಸರಿಸಿದ್ದಾರೆ. ಅವರೇ... ಸಿಹಿ ಕಹಿ ಚಂದ್ರು, ದಯಾಳ್ ಪದ್ಮನಾಭನ್ ಹಾಗೂ ಜೆ.ಕೆ.! ಮುಂದೆ ಓದಿರಿ...

ಸಿಹಿ ಕಹಿ ಚಂದ್ರುಗೆ ಹೆಚ್ಚಿನ ವೋಟ್ಸ್.!

ಶ್ರುತಿ ಪ್ರಕಾಶ್, ತೇಜಸ್ವಿನಿ, ಜಗನ್, ನಿವೇದಿತಾ, ಜಯಶ್ರೀನಿವಾಸನ್ ಸೇರಿದಂತೆ 'ಬಿಗ್ ಬಾಸ್' ಮನೆಯ ಬಹುತೇಕ ಸ್ಪರ್ಧಿಗಳು ''ಸಿಹಿ ಕಹಿ ಚಂದ್ರು ಉತ್ತಮ ಸ್ಪರ್ಧೆ ನೀಡಬಲ್ಲರು'' ಎಂದು ಹೇಳಿದ್ದಾರೆ.

'ಬಿಗ್ ಬಾಸ್' ವೇದಿಕೆ ಮೇಲೆ ಚಮಕ್ ಕೊಟ್ಟ ಚಂದ್ರು ಸಿಹಿಯೋ.? ಕಹಿಯೋ.?

ದಯಾಳ್ ಹಾಗೂ ಜೆ.ಕೆ ಕೂಡ ಕಾಂಪಿಟೇಷನ್.!

'ಬಿಗ್ ಬಾಸ್' ಮನೆ ಸದಸ್ಯರಿಗೆ ದಯಾಳ್ ಪದ್ಮನಾಭನ್ ಹಾಗೂ ಜೆ.ಕೆ ಕೂಡ ''ಕಠಿಣ ಸ್ಪರ್ಧಿ'' ಎಂಬ ಭಾವನೆ ಮೂಡಿದೆ.

'ಬಿಗ್ ಬಾಸ್' ಮನೆ ಸೇರಿದ 'ಜೆ.ಕೆ'ಯ ಜರ್ನಿಯಲ್ಲಿ ಖುಷಿಗಿಂತ ನೋವು ಹೆಚ್ಚಿದೆ.!

ಇವರೆಲ್ಲ ಲೆಕ್ಕಕ್ಕೆ ಇಲ್ಲ.!

'ಜನಸಾಮಾನ್ಯ' ಸ್ಪರ್ಧಿಗಳಾದ ಸುಮಾ ರಾಜ್ ಕುಮಾರ್, ಮೇಘ ಹಾಗೂ ದಿವಾಕರ್ ''ಕಾಂಪಿಟೇಷನ್ ಅಲ್ಲವೇ ಅಲ್ಲ'' ಅನ್ನೋದು 'ಬಿಗ್ ಬಾಸ್' ಮನೆ ಸದಸ್ಯರ ಅಭಿಪ್ರಾಯ.

'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.?

ಲೆಕ್ಕಾಚಾರ ಉಲ್ಟಾ ಆದ್ರೆ.?

ಜನಸಾಮಾನ್ಯ ಸ್ಪರ್ಧಿಗಳ ಪೈಕಿ ಈಗಾಗಲೇ ಸುಮಾ ರಾಜ್ ಕುಮಾರ್ ಔಟ್ ಆಗಿದ್ದಾರೆ. ಸೆಲೆಬ್ರಿಟಿ ಸ್ಪರ್ಧಿಗಳ ಮುಂದೆ ತೊಡೆ ತಟ್ಟಿ ನಿಲ್ಲುವ ಹಾಗೆ ಮೇಘ ಹಾಗೂ ದಿವಾಕರ್ ಸ್ಪರ್ಧೆ ನೀಡುತ್ತಾರಾ ಅಂತ ಕಾದು ನೋಡಬೇಕು.

English summary
Sihi Kahi Chandru, Dayal and JK are tough competitors for all Bigg Boss Kannada 5 Contestants

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X