»   » ದುನಿಯಾ ವಿಜಯ್ ಜೊತೆ ನಟಿಸೋಕೆ ಒಲ್ಲೆ ಎಂದ ದೇಸಿ ಚೆಲುವೆ ಸಿಂಧು

ದುನಿಯಾ ವಿಜಯ್ ಜೊತೆ ನಟಿಸೋಕೆ ಒಲ್ಲೆ ಎಂದ ದೇಸಿ ಚೆಲುವೆ ಸಿಂಧು

Posted By:
Subscribe to Filmibeat Kannada

ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಜೊತೆ ನಟಿಸುವ ಅವಕಾಶವನ್ನು ಯಾರು ತಾನೇ ಮಿಸ್ ಮಾಡಿಕೊಳ್ಳುತ್ತಾರೆ ಹೇಳಿ.? ಆದರೆ, ನಟಿ ಸಿಂಧು ಲೋಕನಾಥ್ ಮಾತ್ರ ಯಾವ ಕಾರಣಕ್ಕೂ ವಿಜಿ ಜೊತೆ ಅಭಿನಯಿಸುವುದಿಲ್ಲ ಅಂತ ಹೇಳುತ್ತಿದ್ದಾರೆ.

ಇತ್ತೀಚಿಗಷ್ಟೆ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಸಿಂಧು ಲೋಕನಾಥ್ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದ Rapid Fire ಪ್ರಶ್ನೆಗಳಿಗೆ ಸಖತ್ ಬೋಲ್ಡ್ ಆಗಿ ಸಿಂಧು ಉತ್ತರಿಸಿದ್ದರು. ಮುಂದೆ ಓದಿ...

ಅನೀಶ್ - ಸಿಂಧು ಲೋಕನಾಥ್ ಮಧ್ಯೆ ಇರುವ ಗಾಸಿಪ್ ಗೆ ಕ್ಲಾರಿಟಿ ಸಿಕ್ತು

ಯಾವ ನಟನ ಜೊತೆ ಚಿತ್ರ ಮಾಡಲ್ಲ.?

ಕಾರ್ಯಕ್ರಮದಲ್ಲಿ 'ಯಾವ ನಟನ ಜೊತೆ ನೀವು ಸಿನಿಮಾ ಮಾಡಲ್ಲ'? ಎಂಬ ಪ್ರಶ್ನೆಗೆ ನಟಿ ಸಿಂಧು ಹಿಂದು ಮುಂದು ನೋಡದೆ ದುನಿಯಾ ವಿಜಯ್ ಅಂತ ಉತ್ತರಿಸಿದ್ದಾರೆ.

ಇರಿಟೇಟ್ ಮಾಡುತ್ತಾರಾ..?

ಸ್ಯಾಂಡಲ್ ವುಡ್ ನಲ್ಲಿ ಇರಿಟೇಟ್ ಮಾಡುವ ಮೂವರ ಹೆಸರು ಹೇಳಿ ಅಂದರೆ ದುನಿಯಾ ವಿಜಯ್, ಹುಚ್ಚ ವೆಂಕಟ್, ಹರ್ಷಿಕಾ ಪೂಣಚ್ಚ ಅಂತ ಸಿಂಧು ಹೇಳಿದ್ದಾರೆ.

ಸಿಂಧು ಸುಮ್ಮನಿದ್ದಾರಂದ್ರೆ ಕೆಲಸ ಇಲ್ಲ ಅಂತ ಅರ್ಥ ಅಲ್ಲ!

ಹರ್ಷಿಕಾ - ಸಿಂಧು ನಡುವೆ ಅಷ್ಟಕಷ್ಟೆ

ನಟಿ ಹರ್ಷಿಕಾ ಪೂಣಚ್ಚ ಅವರ ಡ್ರೆಸಿಂಗ್ ಸೆನ್ಸ್ ಸಿಂಧುಗೆ ಹಿಡಿಸುವುದಿಲ್ಲವಂತೆ. ಅಲ್ಲದೆ, ಅವರು ತುಂಬ ಇರಿಟೇಟ್ ಮಾಡುವ ನಟಿ ಅಂತೆ.

ಸುದೀಪ್ ಅಂದ್ರೆ ಇಷ್ಟ

ಸುದೀಪ್ ಅಂದರೆ ಸಿಂಧುಗೆ ತುಂಬ ಇಷ್ಟ ಅಂತೆ. ಅವರು ವಿಲನ್ ಆಗಿ ಕಾಣಿಸಿಕೊಳ್ಳುವುದನ್ನು ನೋಡಲು ಚೆಂದ ಅಂತಾರೆ ಸಿಂಧು.

ತಮಾಷೆನೋ.. ಸೀರಿಯಸ್ಸೋ...

ಸಿಂಧು Rapid Fire ನಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ಸಖತ್ ಬೋಲ್ಡ್ ಆಗಿ ಉತ್ತರಿಸಿದರು. ಆದರೆ ಅದು ತಮಾಷೆಗೆ ಹೇಳಿದ್ದಾ ಅಥವಾ ಸೀರಿಯಸ್ ಆಗಿ ಹೇಳಿದ್ದಾ ಅವರಿಗೆ ಗೊತ್ತು.!

English summary
Kannada Actress 'Sindhu Loknath' Spoke about Duniya Vijay in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada