For Quick Alerts
  ALLOW NOTIFICATIONS  
  For Daily Alerts

  ಸರಿಗಮಪ ಶೋ ನಿಂದ ಹೊರ ನಡೆದ ರಾಜೇಶ್ ಕೃಷ್ಣನ್

  By Pavithra
  |
  ಸರಿಗಮಪ ಶೋ ನಿಂದ ಹೊರ ನಡೆದ ರಾಜೇಶ್ ಕೃಷ್ಣನ್ | Filmibeat Kannada

  ವಾರಾಂತ್ಯ ಬಂತು ಅಂದ್ರೆ ಸಾಕು ಮನೆ ಮಂದಿಯೆಲ್ಲಾ ಸಣ್ಣ ಸಣ್ಣ ಮಕ್ಕಳು ಹಾಡುವ ಹಾಡುಗಳನ್ನ ಹೇಳಿ ಎಂಜಾಯ್ ಮಾಡೋ ಕಾರ್ಯಕ್ರಮ ಅಂದ್ರೆ ಜೀ ಟಿವಿ ನಲ್ಲಿ ನಡೆಯುವ ಸರಿಗಮಪ. ಸಾಕಷ್ಟು ಸೀಸನ್ ಗಳಿಂದ ಮುಖ್ಯ ಗುರುಗಳಾಗಿ ಕಾರ್ಯಕ್ರಮ ನಡೆಸಿಕೊಡ್ತಿದ್ದ ತೀರ್ಪುಗಾರರಾದ ನಟ-ಗಾಯಕ ರಾಜೇಶ್ ಕೃಷ್ಣನ್ 'ಸರಿಗಮಪ' ಫ್ಯಾಮಿಲಿಯಿಂದ ಹೊರ ನಡೆದಿದ್ದಾರೆ.

  'ಸರಿಗಮಪ' ಲಿಟಲ್ ಚಾಂಪ್ಸ್ 'ಮೆಗಾ ಆಡಿಷನ್ಸ್' ಈಗಾಗ್ಲೆ ಶುರುವಾಗಿದೆ. ಇನ್ನ ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಕೂಡ ಶುರುವಾಗಲಿದೆ. ಇದೇ ಸಂದರ್ಭದಲ್ಲಿ ರಾಜೇಶ್ ಕೃಷ್ಣನ್ ಶೋ ಬಿಟ್ಟು ಜಾಗ ಖಾಲಿ ಮಾಡಿದ್ದಾರೆ

  'ಸರಿಗಮಪ' ಕಾರ್ಯಕ್ರಮಕ್ಕೆ ಗುಡ್ ಬಾಯ್

  'ಸರಿಗಮಪ' ಕಾರ್ಯಕ್ರಮಕ್ಕೆ ಗುಡ್ ಬಾಯ್

  ಸಾಕಷ್ಟು ವರ್ಷಗಳಿಂದ 'ಸರಿಗಮಪ' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದ ರಾಜೇಶ್ ಕೃಷ್ಣನ್ ಸದ್ಯ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ. ಹದಿನಾಲ್ಕನೆಯ ಸೀಸನ್ ನ ಆಡಿಷನ್ಸ್ ಪ್ರಾರಂಭವಾಗಿದ್ದು ಈ ಬಾರಿ ಅವ್ರ ಜಾಗದಲ್ಲೇ ಬೇರೆಯವರನ್ನ ನೋಡಬಹುದು.

  ದೇಸಿ ತೀರ್ಪುಗಾರರ ಆಗಮನ

  ದೇಸಿ ತೀರ್ಪುಗಾರರ ಆಗಮನ

  ರಾಜೇಶ್ ಕೃಷ್ಣನ್ ಅವ್ರ ಜಾಗಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘುದೀಕ್ಷಿತ್ ಆಗಮಿಸಿದ್ದಾರೆ. ಕನ್ನಡದ ದೇಸಿ ಸ್ಟೈಲ್ ನ ಹಾಡುಗಳನ್ನ ವಿದೇಶದ ಜನರಿಗೂ ತಲುಪಿಸಿರುವ ರಘು ದೀಕ್ಷಿತ್ ಈ ಬಾರಿ ಮಹಾಗುರುಗಳಾಗಿ ಎಂಟ್ರಿ ಪಡೆದುಕೊಂಡಿದ್ದಾರೆ

  ಹೊಸ ರೂಪ ಪಡೆದುಕೊಳ್ಳಲಿದೆಯಾ ಕಾರ್ಯಕ್ರಮ

  ಹೊಸ ರೂಪ ಪಡೆದುಕೊಳ್ಳಲಿದೆಯಾ ಕಾರ್ಯಕ್ರಮ

  ರಘುದೀಕ್ಷಿತ್ ಇಂದಿಗೂ ತಮ್ಮದೇ ಆದ ವಿಶೇಷ ರೀತಿಯಲ್ಲಿ ಸಂಗೀತವನ್ನ ಜನರಿಗೆ ಪರಿಚಯಿಸಿದವರು. ದೇಸಿ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಜನರಿಗೆ ಮರೆತು ಹೋಗಿದ್ದ ಅದೆಷ್ಟೋ ವಾದ್ಯಗಳನ್ನ ಮತ್ತೆ ಜನರಿಗೆ ಪರಿಚಯಿಸಿದವರು. ದೀಕ್ಷಿತ್ ತೀರ್ಪುಗಾರರಾಗಿರೋದ್ರಿಂದ ಶೋ ಹೊಸ ರೂಪ ಪಡೆದುಕೊಳ್ಳುವ ಸಾಧ್ಯತೆ ಗಳಿವೆ.

  ಲಿಟಿಲ್ ಚಾಂಪ್ಸ್ ಜೊತೆಗೆ ಕಾಮಿಡಿ ಕಿಕ್

  ಲಿಟಿಲ್ ಚಾಂಪ್ಸ್ ಜೊತೆಗೆ ಕಾಮಿಡಿ ಕಿಕ್

  ಜೀ ವಾಹಿನಿಯಲ್ಲಿ ಸಕ್ಸಸ್ ಕಂಡಿದ್ದ ಕಾಮಿಡಿ ಕಿಲಾಡಿಗಳು ಸೀಸನ್ 2 ಕೂಡ ಪ್ರಾರಂಭವಾಗ್ತಿದೆ. ಸರಿಗಮಪ ಲಿಟಲ್ ಚಾಂಪ್ಸ್ ಜೊತೆಯಾಗಿ ಕಾಮಿಡಿ ಕಿಲಾಡಿಗಳು ಬರ್ತಿದ್ದಾರೆ. ಇಷ್ಟು ವರ್ಷಗಳು ಜೊತೆಗಿದ್ದ ರಾಜೇಶ್ ಕೃಷ್ಣನ್ ಈಗ್ಯಾಕೆ ಹೊರ ನಡೆದ್ರು ಅನ್ನೋದು ಮಾತ್ರ ಇನ್ನು ಗುಟ್ಟಾಗಿಯೇ ಉಳಿದುಕೊಂಡಿದೆ.

  ಮಕ್ಕಳ ಹಾಡಿಗೆ ದೀಕ್ಷಿತ್ ತಾಳ

  ಮಕ್ಕಳ ಹಾಡಿಗೆ ದೀಕ್ಷಿತ್ ತಾಳ

  ಇದೇ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಗಾಯಕ ರಘು ದೀಕ್ಷಿತ್ ತೀರ್ಪುಗಾರರಾಗಿ ಬಂದಿದ್ರು. ಸೆಮಿ ಫೈನಲ್ ನಲ್ಲಿ ತೀರ್ಪು ನೀಡೋದಕ್ಕೆ ಕೆಲವೇ ಕೆಲ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ರು.

  English summary
  Singer and Music Director Raghu Dixith to judge SaReGaMaPa little champs sesson 14.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X