For Quick Alerts
  ALLOW NOTIFICATIONS  
  For Daily Alerts

  ಫೈನಲ್ ತಲುಪಿದ ಹನುಮಂತಣ್ಣನಿಗೆ ಸಿಕ್ಕಿತು ವಿಶೇಷ ಉಡುಗೊರೆ

  |
  Sa Re Ga Ma Pa Season 15 : ಹಂಸಲೇಖ ಪತ್ನಿ ಲತಾ ಹಂಸಲೇಖಾರಿಂದ ವಿಶೇಷ ಉಡುಗೊರೆ ಪಡೆದ ಹನುಮಂತ

  ಹಾವೇರಿ ಜಿಲ್ಲೆ, ಸವಣೂರು ತಾಲೂಕು, ಚಿಲ್ಲೂರು ಬಟ್ನಿ ತಾಂಡದಿಂದ ಬಂದ ಹನುಮಂತಣ್ಣ ಸರಿಗಮಪ ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಅವರ ಗಾಯನಕ್ಕೆ ಇಡೀ ಕರ್ನಾಟಕ ಫ್ಯಾನ್ ಆಗಿಬಿಟ್ಟಿದೆ. ಹಾಡು ಮಾತ್ರವಲ್ಲದೆ ತಮ್ಮ ನಾಟಿ ಸ್ಟೈಲ್ ಮೂಲಕ ಅವರು ಗಮನ ಸೆಳೆದಿದ್ದಾರೆ.

  ಸಣ್ಣ ಹಳ್ಳಿಯಿಂದ ಬಂದ ಪ್ರತಿಭಾವಂತ ಗಾಯಕ ಹನುಮಂತಣ್ಣ ಇಂದು ಸರಿಗಮಪ ಸೀಸನ್ 15 ಕಾರ್ಯಕ್ರಮದ ಫೈನಲ್ ಹಂತ ತಲುಪಿದ್ದಾರೆ. ಕಾರ್ಯಕ್ರಮದ ಅಂತಿಮ ಹಂತ ತಲುಪಿದ ಆರು ಸ್ಪರ್ಧಿಗಳ ಪೈಕಿ ಹನುಮಂತಣ್ಣ ಕೂಡ ಒಬ್ಬರು ಎನ್ನುವುದು ಖುಷಿಯ ವಿಚಾರ.

  ಕುರಿ ಕಾಯುವ ಹುಡುಗನಿಗೆ ಸಂಗೀತ ಕಲಿಸಲು ಮುಂದಾದ ವಿಜಯ ಪ್ರಕಾಶ್!

  ಹನುಮಂತಣ್ಣ ತಮ್ಮ ಪ್ರತಿಭೆ ಮೂಲಕ ಸೆಮಿ ಫೈನಲ್ ನಲ್ಲಿ ಪ್ಲಾಟಿನಮ್ ಟಿಕೆಟ್ ಪಡೆದು ಫೈನಲ್ ಗೆ ಹೋಗಿದ್ದಾರೆ. ಫೈನಲ್ ಹಂತ ತಲುಪಿದ ಹನುಮಂತಣ್ಣ ಅಲ್ಲಿ ಗೆಲ್ಲುತ್ತಾರೋ ಇಲ್ಲವೋ ತಿಳಿಸಿಲ್ಲ. ಆದರೆ, ಇದೀಗ ಇವರಿಗೆ ವಿಶೇಷ ಉಡುಗೊರೆ ಸಿಕ್ಕಿದೆ.

  ಅಂದಹಾಗೆ, ಹನುಮಂತಣ್ಣನಿಗೆ ಸಿಕ್ಕ ಉಡುಗೊರೆ ಏನದು ಎಂಬ ಕುತೂಹಲ ಇದ್ದರೆ, ಹಾಗೆ ಮುಂದೆ ಓದಿ...

  ಹಾರ್ಮೋನಿಯಂ ಉಡುಗೊರೆ

  ಹಾರ್ಮೋನಿಯಂ ಉಡುಗೊರೆ

  ಸರಿಗಮಪ ಕಾರ್ಯಕ್ರಮದಲ್ಲಿ ಫೈನಲ್ ಗೆ ಹೋದ ಹನುಮಂತಣ್ಣನಿಗೆ ಹಾರ್ಮೋನಿಯಂ ಉಡುಗೊರೆ ಸಿಕ್ಕಿದೆ. ಸೆಮಿ ಫೈನಲ್ ನಲ್ಲಿ 'ಜೋಗಿ' ಚಿತ್ರದ 'ಬೇಡುವೇನು ವರವನ್ನು..' ಹಾಡು ಹಾಡಿನ ಹನುಮಂತಣ್ಣ ಫೈನಲ್ ಗೆ ಪಾಸ್ ಆದರು. ಹನುಮಂತಣ್ಣನ ಈ ಸಾಧನೆಗೆ ಗಿಫ್ಟ್ ಆಗಿ ಹಾರ್ಮೋನಿಯಂ ಸಿಕ್ಕಿದೆ.

  ಹಂಸಲೇಖ ಪತ್ನಿಯ ಉಡುಗೊರೆ

  ಹಂಸಲೇಖ ಪತ್ನಿಯ ಉಡುಗೊರೆ

  ನಾದಬ್ರಹ್ಮ ಹಂಸಲೇಖ ಅವರು ಈ ಕಾರ್ಯಕ್ರಮದ ಮಹಾ ಗುರುಗಳಾಗಿದ್ದಾರೆ. ಹಂಸಲೇಖ ಅವರ ಪತ್ನಿ ಲತಾ ಅವರ ಕಡೆಯಿಂದ ಹನುಮಂತಣ್ಣ ಉಡುಗೊರೆಯಾಗಿ ಹಾರ್ಮೋನಿಯಂ ಪಡೆದುಕೊಂಡಿದ್ದಾನೆ. ಕಳೆದ ವಾರದ ಸಂಚಿಕೆಗೆ ಬಂದಿದ್ದ ಲತಾ ಹಂಸಲೇಖ ತಮ್ಮ ಕೈಯಾರ ಹಾರ್ಮೋನಿಯಂ ನೀಡಿ ಹನುಮಂತಣ್ಣನಿಗೆ ಶುಭಾಶಯ ತಿಳಿಸಿದರು.

  ಹಂಸಲೇಖ ದಂಪತಿಯಿಂದ ಚಿನ್ನದ ಉಂಗುರ ಪಡೆದ ಸರಿಗಮಪ ಸ್ಪರ್ಧಿ

  ಈ ಹಿಂದೆ ಚಿನ್ನದ ಉಂಗುರ ನೀಡಿದ್ದರು

  ಈ ಹಿಂದೆ ಚಿನ್ನದ ಉಂಗುರ ನೀಡಿದ್ದರು

  ಈ ಹಿಂದೆ ಲತಾ ಹಂಸಲೇಖ ಮತ್ತೊಬ್ಬ ಸ್ಪರ್ಧಿಗೆ ಸಹ ಉಡುಗೊರೆ ನೀಡಿದ್ದರು. ಸರಿಗಮಪ ಸೀಸನ್ 14ರ ಅತಿ ಕಿರಿಯ ಸ್ಪರ್ಧಿಯಾಗಿದ್ದ ನೇಹಾಗೆ ಚಿನ್ನದ ಉಂಗುರ ನೀಡುವ ಮೂಲಕ ಲತಾ ಹಂಸಲೇಖ ಆರ್ಶೀವಾದ ಮಾಡಿದ್ದರು. ನೇಹಾ ಹುಟ್ಟುಹಬ್ಬದ ವಿಶೇಷವಾಗಿ ಆಕೆಯ ಹಾಡುಗಳನ್ನು ಮೆಚ್ಚಿ ಈ ಗಿಫ್ಟ್ ನೀಡಲಾಗಿತ್ತು.

  ಮತ್ತೆ ಹನುಮಂತಣ್ಣನಿಗೆ ಗಿಫ್ಟ್

  ಮತ್ತೆ ಹನುಮಂತಣ್ಣನಿಗೆ ಗಿಫ್ಟ್

  ಕಾರ್ಯಕ್ರಮದ ಮತ್ತೊಬ್ಬ ತೀರ್ಪುಗಾರರಾದ ವಿಜಯ್ ಪ್ರಕಾಶ್ ಸಹ ಈ ಹಿಂದೆ ಹನುಮಂತಣ್ಣನಿಗೆ ಹಿಯರ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದರು. ತನ್ನ ಮೊಬೈಲ್ ನಲ್ಲಿ ಹಾಡು ಕೇಳಿ ಸಂಗೀತ ಕಲಿಯುತ್ತಿದ್ದ ಹನುಮಂತಣ್ಣನಿಗೆ ಉಪಯೋಗ ಆಗಲಿ ಎಂದು ಹಿಯರ್ ಫೋನ್ ನೀಡಿದ್ದರು.

  ಫೈನಲ್ ವೇದಿಕೆಯಲ್ಲಿ 6 ಸ್ಪರ್ಧಿಗಳು

  ಈ ಬಾರಿಯ ಸರಿಗಮಪ ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದಿದೆ. ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಇದೇ ಶನಿವಾರ ಸಂಜೆ 6 ಗಂಟೆಯಿಂದ ಲೈವ್ ಪ್ರಸಾರ ಆಗಲಿದೆ. ಕೀರ್ತನ್, ವಿಜೇತ್, ಸಾದ್ವಿನಿ, ನಿಹಾಲ್, ಋತ್ವಿಕ್ ಹಾಗೂ ಹನುಮಂತ ಫೈನಲ್ ಹಂತ ತಲುಪಿದ 6 ಸ್ಪರ್ಧಿಗಳಾಗಿದ್ದಾರೆ.

  English summary
  Singer Hanumantha enters Zee Kannada channel's Saregamapa Season 15 final.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X