»   » ಫ್ಯಾಮಿಲಿ ಪವರ್ ನಲ್ಲಿ ದೇಶವೇ ಮೆಚ್ಚುವ ಅಥಿತಿಗಳು

ಫ್ಯಾಮಿಲಿ ಪವರ್ ನಲ್ಲಿ ದೇಶವೇ ಮೆಚ್ಚುವ ಅಥಿತಿಗಳು

Posted By:
Subscribe to Filmibeat Kannada

ವೀಕೆಂಡ್ ಬಂತು ಅಂದರೆ ಸಾಕು ಮನೆಮಂದಿ ಎಲ್ಲರೂ ಕುಳಿತು ನೋಡುವ ರಿಯಾಲಿಟಿ ಶೋ ಫ್ಯಾಮಿಲಿ ಪವರ್. ಒಂದೇ ವೇದಿಕೆಯಲ್ಲಿ ಆಟವಾಡಿ 10 ಲಕ್ಷ ಬಹುಮಾನವನ್ನ ಪಡೆದುಕೊಳ್ಳುಬಹುದಾದ ಫ್ಯಾಮಿಲಿ ಶೋನಲ್ಲಿ ಈಗಾಗಲೇ ಸಾಕಷ್ಟು ಫ್ಯಾಮಿಲಿಗಳು ಭಾಗಿ ಆಗಿವೆ. ಸಾಮಾನ್ಯ ವರ್ಗದ ಪ್ರತಿಯೊಂದು ಕುಟುಂಬವೂ ಈ ಶೋ ನಲ್ಲಿ ಆಟ ಆಡುವ ಅವಕಾಶ ಮಾಡಿಕೊಟ್ಟಿದೆ ಕಲರ್ಸ್ ಕನ್ನಡ ವಾಹಿನಿ.

ಸ್ಟಾರ್ ಕುಟುಂಬ ಸೇರಿದಂತೆ ಧಾರಾವಾಹಿಯ ಫ್ಯಾಮಿಲಿಗಳು ಕೂಡ ಪವರ್ ಸ್ಟಾರ್ ಜೊತೆಯಲ್ಲಿ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಭಾಗಿ ಆಗಿ ಎಂಜಾಯ್ ಮಾಡಿದ್ದಾರೆ. ಫ್ಯಾಮಿಲಿ ಕಾರ್ಯಕ್ರಮ ಎಲ್ಲಾ ವರ್ಗದ ಜನರನ್ನು ಮುಟ್ಟಬೇಕು ಎನ್ನುವ ನಿಟ್ಟಿನಲ್ಲಿ ದೇಶವೇ ಮೆಚ್ಚುವಂತಹ ಅತಿಥಿಗಳನ್ನ ಈ ವಾರ ಕರೆತರಲಾಗಿದೆ.

500 ಜನರಲ್ಲಿ 'ಶನಿ' ಪಾತ್ರಕ್ಕೆ ಸುನೀಲ್ ಆಯ್ಕೆಯಾಗಲು ಈ ಡೈಲಾಗ್ ಕಾರಣ

ಹಾಗಾದರೆ ದೇಶವೇ ಮೆಚ್ಚುವಂತಹ ಅತಿಥಿಗಳು ಯಾರು? ಈ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನ ಮಾಡಲು ಕಾರಣವೇನು? ಈ ವಾರ ವಿಶೇಷ ಅತಿಥಿಗಳಿಗಾಗಿ ಕಾರ್ಯಕ್ರವನ್ನ ಮೀಸಲಿಟ್ಟಿದ್ದು ಯಾಕೆ? ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ ಮುಂದೆ ಓದಿ.

ಫ್ಯಾಮಿಲಿ ಪವರ್ ನಲ್ಲಿ ಸೈನಿಕರ ಕುಟುಂಬ

ಸಾಮಾನ್ಯವಾಗಿ ನಾವುಗಳು ಸೈನಿಕರನ್ನ ಯುದ್ಧದಲ್ಲಿ ವೀರ ಮರಣರಾದಾಗ ನೆನಪು ಮಾಡಿಕೊಂಡು ದಿನ ಕಳೆದಂತೆ ಮರೆತು ಹೋಗುತ್ತೇವೆ. ಅಂತಹ ಕುಟುಂಬವನ್ನ ಮತ್ತೆ ನೆನಪಿಸುವ ಕೆಲಸಕ್ಕೆ ಫ್ಯಾಮಿಲಿ ಪವರ್ ಶೋ ಮುಂದಾಗಿದೆ. ಈ ವಾರಾಂತ್ಯಕ್ಕೆ ಸೈನಿಕರ ಕುಟುಂಬಕ್ಕಾಗಿ ಫ್ಯಾಮಿಲಿ ಪವರ್ ಕಾರ್ಯಕ್ರಮವನ್ನ ಮೀಸಲಿಟ್ಟಿದೆ.

ಅಪ್ಪು ಕಾರ್ಯಕ್ರಮದಲ್ಲಿ ಸೈನಿಕರ ಕುಟುಂಬ

ಕಳೆದ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ತರಬೇತಿ ವೇಳೆಯಲ್ಲಿ ಕರ್ನಾಟಕದ ಯೋಧ ಜಾವೇದ್ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾಗಿದ್ದರು. ಅವರ ತಾಯಿ ಫಾತಿಮಾ ಮತ್ತು ಕುಟುಂಬಸ್ಥರು ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಭಾಗಿ ಆಗಲಿದ್ದಾರೆ.

ಸೈನಿಕರ ಕುಟುಂಬಗಳ ಮಧ್ಯೆ ಆಟ

ಜಾವೇದ್ ಕುಟುಂಬಸ್ಥರ ಎದುರು ಆಟ ಆಡಲು ಮತ್ತೊಂದು ಸೈನಿಕನ ಫ್ಯಾಮಿಲಿ ಫ್ಯಾಮಿಲಿ ಪವರ್ ಕಾರ್ಯಕ್ರಮಕ್ಕೆ ಬಂದಿದೆ. ಮಡಿಕೇರಿ ಮೂಲದ ಯಶೋಧ ಎನ್ನುವವರ ಮಗ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಕುಟುಂಬ ಈ ವಾರ ಪವರ್ ಸ್ಟಾರ್ ಜೊತೆಯಲ್ಲಿರಲಿದೆ.

ವಿಭಿನ್ನವಾದ ಸಂಚಿಕೆ

ಈ ವಾರದ ಫ್ಯಾಮಿಲಿ ಪವರ್ ಸಂಚಿಕೆ ತುಂಬಾನೇ ಸ್ಪೆಷಲ್ ಆಗಿರಲಿದೆ. ಇಬ್ಬರು ಯೋಧರ ಕುಟುಂಬ ಕಾರ್ಯಕ್ರಮ ಆಟವಾಡಲಿದ್ದು ಯೋಧರ ಫ್ಯಾಮಿಲಿಯ ಪ್ರತಿನಿತ್ಯದ ಹೋರಾಟದ ಬದುಕು ಹೇಗಿರಲಿದೆ ಎನ್ನುವುದರ ಬಗ್ಗೆ ಕುಟುಂಬಸ್ಥರು ತಿಳಿಸಲಿದ್ದಾರೆ.

English summary
The soldiers family participant in the family power program, which is hosted by Puneet Rajkumar. Family Power Program is broadcast on Colours Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X