»   » 'ಡ್ರಾಮಾ ಜೂನಿಯರ್ಸ್ 2' : ಹೊಸ ಜಗತ್ತು.. ಹೊಸ ತರಹದ ಮಕ್ಕಳು..

'ಡ್ರಾಮಾ ಜೂನಿಯರ್ಸ್ 2' : ಹೊಸ ಜಗತ್ತು.. ಹೊಸ ತರಹದ ಮಕ್ಕಳು..

Posted By:
Subscribe to Filmibeat Kannada

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಡ್ರಾಮಾ ಜೂನಿಯರ್ಸ್' ಮತ್ತೆ ಬರುತ್ತಿದೆ. ಇದೇ ಜುಲೈ 22 ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಈ ಸೀಸನ್ ಮೇಲೆ ದೊಡ್ಡ ನಿರೀಕ್ಷೆ ಇದೆ. 'ಡ್ರಾಮಾ ಜೂನಿಯರ್ಸ್ ಸೀಸನ್ 2' ಗಾಗಿ ಈಗಾಗಲೇ ಎಲ್ಲಾ ರೀತಿಯ ತಯಾರಿಗಳು ನಡೆದಿದೆ.

ತೀರ್ಪುಗಾರರು, ನಿರೂಪಕರಿಂದ ಹಿಡಿದು ಈ ಬಾರಿ ಹೆಚ್ಚು ಕಡಿಮೆ ಅದೇ ತಂಡವನ್ನು ಉಳಿಸಿಕೊಂಡಿದ್ದಾರೆ. ಈಗಾಗಲೇ ಕರ್ನಾಟಕದ ಅನೇಕ ಕಡೆ ಆಡಿಷನ್ ನಡೆಸಿದ ಜೀ ಕನ್ನಡ ತಂಡ ಪ್ರತಿಭಾವಂತ ಮಕ್ಕಳಿಗಾಗಿ ಹುಡುಕಾಟ ನಡೆಸಿದೆ. ಅಂದಹಾಗೆ, ಈ ಬಾರಿಯ 'ಡ್ರಾಮಾ ಜೂನಿಯರ್ಸ್' ವೀಕ್ಷಕರಿಗೆ ಹೊಸ ಜಗತ್ತು ತೋರಿಸಲಿದೆ.

ಸದ್ಯದಲ್ಲಿಯೇ ಶುರುವಾಗುವ 'ಡ್ರಾಮಾ ಜೂನಿಯರ್ಸ್ ಸೀಸನ್ 2' ಕಾರ್ಯಕ್ರಮದ ವಿಶೇಷತೆಗಳು ಇಲ್ಲಿದೆ ಓದಿ..

ತೀರ್ಪುಗಾರರು

'ಡ್ರಾಮ ಜೂನಿಯರ್ಸ್ ಸೀಸನ್ 2'ನಲ್ಲಿಯೂ ನಟಿ ಲಕ್ಷ್ಮಿ, ನಿರ್ದೇಶಕ ಟಿ.ಎನ್.ಸೀತಾರಂ, ಮತ್ತು ನಟ ವಿಜಯ ರಾಘವೇಂದ್ರ ಇರುತ್ತಾರೆ. ಜೊತೆಗೆ ಮಾಸ್ಟರ್ ಆನಂದ್ ನಿರೂಪಣೆ ಮಾಡಲಿದ್ದಾರೆ.

ರಂಗಭೂಮಿಗೆ ಹೆಚ್ಚಿನ ಪ್ರಾಮುಖ್ಯತೆ

ಈ ಬಾರಿಯ ಕಾರ್ಯಕ್ರಮದಲ್ಲಿ ರಂಗಭೂಮಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆಯಂತೆ. ಮಕ್ಕಳಿಂದ ಹೆಸರು ಮಾಡಿದ ನಾಟಕಗಳನ್ನು ಮಾಡಿಸುವ ಆಲೋಚನೆ ಇದೆ.

ಮಕ್ಕಳ ವೇದಿಕೆ

ಈ ಸೀಸನ್ ನ ಕಾರ್ಯಕ್ರಮದ ವೇದಿಕೆ ಬದಲಾಗಿದೆ. ಮಕ್ಕಳ ಕಾರ್ಯಕ್ರಮ ಆಗಿರುವುದರಿಂದ ಅವರಿಗೆ ಇಷ್ಟವಾಗುವ ರೀತಿಯ ಫ್ಯಾಂಟಸಿ ಸೆಟ್ ಹಾಕುವ ತಯಾರಿ ನಡೆದಿದೆ.

ಇನ್ನಷ್ಟು ಪ್ರೊಫೆಷನಲ್

ಈ ಬಾರಿಯ ನಾಟಕಗಳು ಇನ್ನಷ್ಟು ಪ್ರೊಫೆಷನಲ್ ಆಗಿರಲಿದೆ. ಹೊಸ ಜಗತ್ತು ಇದ್ದು, ಹಳೆ ಸೀಸನ್ ಮರೆತು ಹೊಸ ರೀತಿಯ ಡ್ರಾಮಾ ಕಂಟೆಂಟ್ ಸಿದ್ಧ ಪಡಿಸಿದ್ದಾರಂತೆ.

English summary
Zee kannada Channel's Popular Show Drama Juniors Season 2 will start from July 22.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada