For Quick Alerts
  ALLOW NOTIFICATIONS  
  For Daily Alerts

  ಆ ದಿನ ಸತ್ತಿದ್ದೀನಾ, ಬದುಕಿದ್ದೀನಾ ಎಂದು ಯಾರೂ ಬಂದು ನೋಡಿಲ್ಲ

  |
  Weekend With Ramesh Season 4:ರಾಯಲ್ ಫ್ಯಾಮಿಲೀಲಿ ಹುಟ್ಟಿದ್ರೂ ಶ್ರೀಮುರಳಿ ಕಷ್ಟಪಟ್ಟಿದ್ರು | FILMIBEAT KANNADA

  ಮೊದಲನೇ ಸಿನಿಮಾ ಚಂದ್ರಚಕೋರಿ ಎರಡು ವರ್ಷ ಯಶಸ್ವಿ ಪ್ರದರ್ಶನವಾಗುತ್ತೆ. ಬಹುದೊಡ್ಡ ಹೆಸರು, ಖ್ಯಾತಿ ತಂದು ಕೊಡುತ್ತೆ. ಅದಾದ ಬಳಿಕ ಮಾಡಿದ ಚಿತ್ರ 'ಕಂಠಿ' ಮತ್ತೊಂದು ಸೂಪರ್ ಹಿಟ್. ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಕೂಡ ಸಿಗುತ್ತೆ.

  ಎರಡಕ್ಕೆ ಎರಡೂ ಚಿತ್ರವೂ ಬ್ಲಾಕ್ ಬಸ್ಟರ್ ಹಿಟ್ ಆಯ್ತು ಎಂಬ ಆತ್ಮವಿಶ್ವಾಸ, ನಂಬಿಕೆ, ಭರವಸೆ ಹೆಚ್ಚಾಗುತ್ತೆ. ಆಮೇಲೆ ಏನಾಯ್ತೋ ಗೊತ್ತಿಲ್ಲ. ಒಂದರ ಹಿಂದೆ ಒಂದರಂತೆ ಸೋಲು. ಸತತ ನಾಲ್ಕೈದು ಚಿತ್ರಗಳು ಫ್ಲಾಫ್ ಆಗುತ್ತೆ. ಆಮೇಲೆ ಬರುವ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲ್ಲ.

  ಮುಂಬೈನಲ್ಲಿ ಮೂರು ಹೊತ್ತು ಊಟಕ್ಕೆ ಪರದಾಡಿದ್ದರು ಶ್ರೀಮುರಳಿ

  ಶ್ರೀಮುರಳಿ ಜೀವನದಲ್ಲಿ ಎಲ್ಲವೂ ಮುಗಿದೇ ಹೋಯಿತು ಎಂಬ ಕ್ಷಣವೊಂದು ಬರುತ್ತೆ. ಕಷ್ಟಕಾಲ ಅಲ್ಲಿಂದ ಆರಂಭವಾಯಿತು. ಇಂಡಸ್ಟ್ರಿನೇ ಬೇಡ ಎನ್ನುವ ಮಟ್ಟಕ್ಕೆ ಶ್ರೀಮುರಳಿ ನಿರ್ಧರಿಸಿದ್ದರು. 'ಈ ದಿನಗಳಲ್ಲಿ ಯಾರೊಬ್ಬರು ನಾನು ಸತ್ತಿದ್ದೀನಾ ಅಥವಾ ಬದುಕಿದ್ದೀನಾ ಎಂದು ಯಾರೂ ನೋಡಿಲ್ಲ' ಎಂದು ಕಣ್ಣೀರಿಟ್ಟಿದ್ದಾರೆ. ಅಷ್ಟಕ್ಕೂ, ಆ ನೋವಿನ ದಿನ ಹೇಗಿತ್ತು? ಮುಂದೆ ಓದಿ.....

  ಖುಷಿ ಕಳೆದು ಮತ್ತೆ ಕಷ್ಟ ಬಂತು

  ಖುಷಿ ಕಳೆದು ಮತ್ತೆ ಕಷ್ಟ ಬಂತು

  ''ಇದ್ದಾಗ ಸಖತ್ ಎಂಜಾಯ್ ಮಾಡಿದ್ದೀನಿ. ಜೊತೆಯಲ್ಲಿದ್ದವರಿಗೆಲ್ಲಾ ಖುಷಿಯಾಗಿ ನೋಡಿಕೊಂಡಿದ್ದೇನೆ. ಆದ್ರೆ, ಅದೊಂದು ಸಮಯ ಬಂತು. ಏನೇ ಮಾಡಿದ್ರು ಕೈಯಲ್ಲಿ ಇರುತ್ತಿರಲಿಲ್ಲ. ಕಷ್ಟ ಅಂತ ಮತ್ತೆ ಎದುರಾಯಿತು. ಕಾರಿಗೆ ಫುಲ್ ಟ್ಯಾಂಕ್ ಪೆಟ್ರೂಲ್ ಹಾಕಿಸುತ್ತಿದ್ದವನು 500 ರೂಪಾಯಿ ಪೆಟ್ರೋಲ್ ಗೆ ಬಂದೆ. ಸುತ್ತಮುತ್ತಲಿನವರು ನನ್ನನ್ನು ಒಂಥರಾ ನೋಡಲು ಶುರು ಮಾಡಿದರು''

  ಪುಟ್ ಪಾತ್ ನಲ್ಲಿ ನಿಂತಿದ್ದೀನಿ

  ಪುಟ್ ಪಾತ್ ನಲ್ಲಿ ನಿಂತಿದ್ದೀನಿ

  ''ಬೀದಿ ಬೀದಿ ಅಲೆದಿದ್ದೇನೆ. ಪುಟ್ ಪಾತ್ ನಲ್ಲಿ ನಿಂತು ಕಾದಿದ್ದೇನೆ. ಫೈನಾನ್ಸ್ ಗಾಗಿ ಸುತ್ತಾಡಿದ್ದೇನೆ. ಆಗ ನಾನು, ನನ್ನ ಹೆಂಡತಿ ನಮ್ಮ ತಂದೆ, ತಾಯಿ ಮತ್ತು ಮಕ್ಕಳು ಮಾತ್ರ ಇದ್ವಿ. ನಾನು ಬದುಕಿದ್ದೀನಾ, ಸತ್ತಿದ್ದೀನಾ ಅಂತಾನೂ ಯಾರೂ ಬಂದು ಕೇಳಿಲ್ಲ''

  'ಉಗ್ರಂ' ವೀರ ಕಷ್ಟದಲ್ಲಿದ್ದಾಗ ಕೈಹಿಡಿದಿದ್ದರಂತೆ ದಾಸ ದರ್ಶನ್

  ಚಂದ್ರಚಕೋರಿ, ಕಂಠಿ ಯಾಕೆ ಮಾಡಿದೆ?

  ಚಂದ್ರಚಕೋರಿ, ಕಂಠಿ ಯಾಕೆ ಮಾಡಿದೆ?

  ''ಯಾರನ್ನ ದೂಷಿಸಿಲ್ಲ. ಯಾರನ್ನ ಹೀಯಾಳಿಸಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡ್ತಿದ್ದೆ. ನನ್ನ ಅದೃಷ್ಟನೋ ನನ್ನ ಕರ್ಮಾನೋ ಗೊತ್ತಾಗಲಿಲ್ಲ. ನನಗೆ ಯಾಕೆ ಹೀಗಾಯ್ತು ಅಂತ ಗೊತ್ತೇ ಆಗಲಿಲ್ಲ. ಆ ಸಮಯದಲ್ಲಿ ಚಂದ್ರಚಕೋರಿ ಮತ್ತು ಕಂಠಿ ಸಿನಿಮಾಗಳನ್ನ ನಾನು ಯಾಕೆ ಮಾಡಿದೆ ಅನಿಸಿಬಿಟ್ಟಿತ್ತು''

  ಷಡ್ಯಂತ್ರಗಳಿಗೆ ನಮ್ಮ ಕುಟುಂಬ ಬಲಿ ಆಯಿತು

  ಷಡ್ಯಂತ್ರಗಳಿಗೆ ನಮ್ಮ ಕುಟುಂಬ ಬಲಿ ಆಯಿತು

  ''ನಮ್ಮ ಮನೆ ವಿಚಾರದಲ್ಲಿ ಸ್ವಲ್ಪ ಗೊಂದಲ ಆಯಿತು. ತಪ್ಪು ನಿರ್ಧಾರಗಳಿಂದ ಉದ್ಯಮದಲ್ಲಿ ಹಿನ್ನಡೆಯಾಯಿತು. ಸಮಾಜದಲ್ಲಿ ಎ ಚಿನ್ನೆಗೌಡ್ರನ್ನ ಮತ್ತು ಅವರ ಮಕ್ಕಳನ್ನ ಲಾಕ್ ಮಾಡ್ಬೇಕು ಎಂಬ ಉದ್ದೇಶದಲ್ಲಿ ಆದ ಕೆಲವು ಬೆಳವಣಿಗೆಗಳಿಂದ ಅದೇ ಆಯ್ತು''

  ಶ್ರೀ ಮುರಳಿ ಸಂಚಿಕೆಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು!

  ಸ್ವಂತ ಮನೆಯನ್ನ ಮಾರಿದ್ವಿ

  ಸ್ವಂತ ಮನೆಯನ್ನ ಮಾರಿದ್ವಿ

  ಈ ನಡುವೆ ಕುಟುಂಬವೆಲ್ಲ ಒಟ್ಟಿಗೆ ಇದ್ದ, ಕನಸಿನ ಮನೆಯನ್ನ ಕೂಡ ಮಾರಬೇಕಾದ ಪರಿಸ್ಥಿತಿ ಬಂತು. ನಮ್ಮ ಕುಟುಂಬದಲ್ಲಿ ಸ್ವಂತ ಜಾಗ ಪಡೆದ ಯಾರೂ ಮನೆ ಕಟ್ಟಿರಲಿಲ್ಲ. ನಮ್ಮ ತಂದೆ ಜಾಗ ಪಡೆದ, ಮನೆ ಕಟ್ಟಿದ್ದರು. ಆದ್ರೆ, ಅದನ್ನ ಉಳಿಸಿಕೊಂಡಿಲ್ಲ' ಎಂಬ ಬೇಸರವನ್ನ ಕೂಡ ಹೊರಹಾಕಿದರು.

  'ಚಂದ್ರ ಚಕೋರಿ' ಸಿನಿಮಾಗೆ ಮುರಳಿ ಆಯ್ಕೆಯ ಹಿಂದಿದೆ ರೋಚಕ ಸಂಗತಿ

  'ಉಗ್ರಂ' ಬಿಡುಗಡೆಯಾಗುವವರೆಗೂ ನಂಬಿಕೆ ಇರಲಿಲ್ಲ

  'ಉಗ್ರಂ' ಬಿಡುಗಡೆಯಾಗುವವರೆಗೂ ನಂಬಿಕೆ ಇರಲಿಲ್ಲ

  ''ಇಷ್ಟೆಲ್ಲಾ ಕಷ್ಟಗಳ ಮಧ್ಯೆ ಉಗ್ರಂ ಸಿನಿಮಾ ಕೈಗೆತ್ತಿಕೊಂಡಿದ್ದೆ. ಅದಕ್ಕೆ ತಯಾರಿ ನಡೆಯುತ್ತಿತ್ತು. ಆದ್ರೆ, ಬಿಡುಗಡೆಯಾಗುವವರೆಗೂ ಅದರ ಮೇಲೆಯೂ ನಂಬಿಕೆ ಇರಲಿಲ್ಲ. ಇದೆಲ್ಲ ನೋಡಿದಾಗ ಯಾವ ಕಲಾವಿದನಿಗೂ ಈ ಕಷ್ಟ ಬರಬಾರದು ಎಂದು ಕೇಳಿಕೊಳ್ಳುತ್ತೇನೆ'' ಎಂದು ಶ್ರೀಮುರಳಿ ಕಣ್ಣೀರಿಟ್ಟರು.

  'ಉಗ್ರಂ' ಹೆಸರಿಡುವುದಕ್ಕೂ ಮುಂಚೆ ರಿಜೆಕ್ಟ್ ಆಗಿದ್ದ ಆ ಎರಡು ಟೈಟಲ್ ಯಾವುದು?

  English summary
  Kannada actor Sri Murali debuted with super hit movie chandra chakori. he wins state award from his second movie kanti. after huge success of kanti, he could not give succes for long time. what happend to srimurali that period?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X