For Quick Alerts
  ALLOW NOTIFICATIONS  
  For Daily Alerts

  ಇಂದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ 'ಮಫ್ತಿ' ಫ್ರೆಂಡ್ಸ್!

  By Harshitha
  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ನಿರ್ದೇಶಕ ನರ್ತನ್ ಅತಿಥಿಗಳಾಗಿ ಭಾಗವಹಿಸಿದ್ದಾರೆ.

  ಹಾಗ್ನೋಡಿದ್ರೆ, ಇವರಿಬ್ಬರು ಸ್ಯಾಂಡಲ್ ವುಡ್ ನ ನೂತನ 'ಯಾರಿ'ಗಳು (ಗೆಳೆಯರು). 'ರಾಥಾವರ' ಚಿತ್ರದಿಂದ ಇವರಿಬ್ಬರ ಗೆಳೆತನ ಶುರುವಾಯ್ತು. 'ರಥಾವರ' ಸಿನಿಮಾದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ನರ್ತನ್, ಶ್ರೀಮುರಳಿಗಾಗಿ 'ಮಫ್ತಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು.

  'ಮಫ್ತಿ' ನಿರೀಕ್ಷೆಯಂತೆ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತು. ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, 'ಮಫ್ತಿ' ಚಿತ್ರದ ವಿಶೇಷ ಪಾತ್ರಕ್ಕಾಗಿ ಬಣ್ಣ ಹಚ್ಚಿದವರು ಶಿವಣ್ಣ. ಇದೇ ಶಿವಣ್ಣ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಿರೂಪಕರಾಗಿ ಶ್ರೀಮುರಳಿ ಹಾಗೂ ನರ್ತನ್ ರನ್ನ ಮಾತನಾಡಿಸಲಿದ್ದಾರೆ.

  'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.?'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.?

  ಅಲ್ಲಿಗೆ, ಇಂದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಿಮಗೆ 'ಮಫ್ತಿ' ಚಿತ್ರದ ಫೀಲ್ ಹೆಚ್ಚಾಗಿ ಬಂದರೆ ಅಚ್ಚರಿ ಪಡಬೇಡಿ. ಇನ್ನೂ, ಇದೇ ಶೋನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ''ಸ್ಯಾಂಡಲ್ ವುಡ್ ನಲ್ಲೇ ಸತ್ಯವಂತ ವ್ಯಕ್ತಿ'' ಎಂದು ನರ್ತನ್ ಹೇಳಿದ್ದಾರೆ.

  English summary
  Kannada Actor Srimurali and Director Narthan takes part as guests in 'No.1 Yari with Shivanna' program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X