Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಉಗ್ರಂ' ವೀರ ಕಷ್ಟದಲ್ಲಿದ್ದಾಗ ಕೈಹಿಡಿದಿದ್ದರಂತೆ ದಾಸ ದರ್ಶನ್
'ಉಗ್ರಂ', ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾ. ನಟ ಶ್ರೀಮುರಳಿ ಸಿನಿ ಜೀವನಕ್ಕೆ ಬ್ರೇಕ್ ಕೊಟ್ಟಂತ ಸಿನಿಮಾ. ಪ್ರಶಾಂತ್ ನೀಲ್ ಎನ್ನುವ ಅದ್ಭುತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ. ಸಾಕಷ್ಟು ಹೊಸತನದೊಂದಿಗೆ ಕನ್ನಡ ಪ್ರೇಕ್ಷಕರನ್ನ ಮನ ಗೆದ್ದಿದ್ದ 'ಉಗ್ರಂ' ಇಂದಿಗೂ ಚಿತ್ರಪ್ರಿಯರ ಫೇವರಿಟ್ ಸಿನಿಮಾಗಳಲ್ಲಿ ಒಂದು.
ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದ ಶ್ರೀಮುರಳಿಗೆ ಲೈಫ್ ಕೊಟ್ಟ 'ಉಗ್ರಂ' ಸಿನಿಮಾದ ಸಮಯದಲ್ಲಿ ಅನುಭವಿಸಿದ ಕಷ್ಟವನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಶ್ರೀ ಮುರಳಿ ಸಂಚಿಕೆಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು!
ಕಷ್ಟಪಟ್ಟು ಇಷ್ಟಪಟ್ಟು ಮಾಡಿದ ಉಗ್ರಂ ಸಿನಿಮಾ ಚಿತ್ರೀಕರಣ ಮುಗಿಸಿ ಇನ್ನೇನು ರಿಲೀಸ್ ಆಗಬೇಕು ಎನ್ನುವಷ್ಟೊತ್ತಿಗೆ ವಿತರಣೆ ಹಕ್ಕು ಪಡೆಯಲು ಯಾರು ಮುಂದೆ ಬಂದಿರಲಿಲ್ಲವಂತೆ. ಆ ಸಮಯದಲ್ಲಿ 'ಉಗ್ರಂ' ನೆರವಿಗೆ ಬಂದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಕಷ್ಟ ಎಂದವರಿಗೆ ಸದಾ ಸಹಾಯ ಹಸ್ತ ಚಾಚುವ ದಚ್ಚು ಶ್ರೀಮುರಳಿ 'ಉಗ್ರಂ' ಸಿನಿಮಾ ರಿಲೀಸ್ ಗೂ ಸಹಾಯ ಮಾಡಿದ್ದಾರೆ. ಮುಂದೆ ಓದಿ..

ದರ್ಶನ್ ಇಲ್ಲಾ ಅಂದ್ರೆ ಉಗ್ರಂ ಇಲ್ಲ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕಷ್ಟ ಎಂದವರಿಗೆ ಯಾವತ್ತು ಇಲ್ಲ ಅಂತ ಹೇಳಿ ಕಳುಹಿಸಿದ್ದೆ ಇಲ್ಲ. ನಟ ಶ್ರೀ ಮುರಳಿಗೂ, ವಿಶಾಲಿ ಹೃದಯಿ ದರ್ಶನ್ ಸಹಾಯ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ 'ಉಗ್ರಂ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದ್ರೆ ಯಾರು ಸಿನಿಮಾವನ್ನು ವಿತರಣೆ ಮಾಡಲು ಮುಂದೆ ಬರುತ್ತಿರಲಿಲ್ಲವಂತೆ. ಹೇಳಿ ಕೇಳಿ ಶ್ರೀಮುರಳಿ ಅಂದು ಫ್ಲ್ಯಾಪ್ ಹೀರೋ ಅನ್ನೋ ಪಟ್ಟಬೇರೆ. ಆ ಸಮಯದಲ್ಲಿ ತೂಗುದೀಪ ಸಂಸ್ಥೆ ಚಿತ್ರದ ವಿತರಣೆ ಹಕ್ಕನ್ನು ಪಡೆದು ಚಿತ್ರ ರಿಲೀಸ್ ಮಾಡಿ ಕೊಟ್ಟಿದೆ.
ಶ್ರೀ ಮುರಳಿ ಸಂಚಿಕೆಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು!

ನಿನಗ್ಯಾಕೆ ನಾನು ಇದೀನಿ
ಚೆನ್ನೈನಲ್ಲಿ ದರ್ಶನ್ ಅವರನ್ನು ಆಕಸ್ಮಿಕವಾಗಿ ಭೇಟಿಯಾದ ಮುರಳಿ 'ಉಗ್ರಂ' ಸಿನಿಮಾ ರಿಲೀಸ್ ಮಾಡಿ ಕೊಡುವುದಾಗಿ ಕೇಳಿ ಕೊಂಡಿದ್ದಾರೆ. ಮುರಳಿ ಮಾತಿಗೆ ಒಂದು ಕ್ಷಣವು ಹಿಂದೆಮುಂದೆ ಯೋಚಿಸದೆ ಸಿನಿಮಾ ರಿಲೀಸ್ ಮಾಡಿ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. 'ನಿನಗ್ಯಾಕೆ ನಾನು ಇದೀನಿ. ತಲೆ ಕೆಡಿಸಿಕೊಳ್ಳಬೇಡ, ನಾನು ಸಿನಿಮಾ ರಿಲೀಸ್ ಮಾಡಿಸಿ'ಕೊಡುತ್ತೇನೆ' ಎಂದು ದರ್ಶನ್ ಹೇಳಿದ್ದರಂತೆ.

ಟ್ರೈಲರ್ ನೋಡಿ ಇಷ್ಟಪಟ್ಟಿದ್ದ ಉಪೇಂದ್ರ
ಚಿತ್ರದ ಟ್ರೈಲೆರ್ ನೋಡಿ ದಚ್ಚು ಬ್ರದರ್ಸ್ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ರಂತೆ. ಷ್ಟೆಯಲ್ಲ ಅನೇಕ ಜನ ಚಿತ್ರದ ಟ್ರೈಲರ್ ಗೆ ಫಿದಾ ಆಗಿದ್ರಂತೆ. ರಿಯಲ್ ಸ್ಟಾರ್ ಉಪೇಂದ್ರ ಕೂಡ ಚಿತ್ರದ ಟ್ರೈಲರ್ ನೋಡಿ, 'ಈ ರೀತಿಯ ಸೌಂಡಿಂಗ್ ಮತ್ತು ಕ್ಲಾಲಿಟಿ ಕನ್ನಡ ಚಿತ್ರರಂಗದಲ್ಲಿ ನೋಡಿಯೆ ಇಲ್ಲ. ಹೊಸತನದೊಂದಿಗೆ ಬರ್ತಿದ್ದೀರಾ ಒಳ್ಳೆಯದಾಗಲಿ ಎಂದು ಶ್ರೀಮುರಳಿ' ಎಂದು ಹಾರೈಸಿದ್ರಂತೆ.
'ಚಂದ್ರ ಚಕೋರಿ' ಸಿನಿಮಾಗೆ ಮುರಳಿ ಆಯ್ಕೆಯ ಹಿಂದಿದೆ ರೋಚಕ ಸಂಗತಿ

ಶ್ರೀಮುರಳಿಗೆ ಪ್ರಶಾಂತ್ ಕೊಟ್ಟ ವರದಕ್ಷಿಣೆ
ಉಗ್ರಂ ಸಿನಿಮಾ ನಟ ಶ್ರೀಮುರಳಿಗೆ ನಿರ್ದೇಶಕ ಪ್ರಶಾಂತ್ ನೀಲ್ ಕೊಟ್ಟ ವರದಕ್ಷಿಣೆ ಅಂತೆ. ಹೀಗಂತ ಸ್ವತಹ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಶ್ರೀಮುರಳಿ ಪತ್ನಿ ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆ ಸಮದಯದಲ್ಲಿ ಪ್ರಾರಂಭವಾದ 'ಉಗ್ರಂ' ಸಿನಿಮಾ ಶ್ರೀಮುರಳಿಯನ್ನು ಮತ್ತೆ ಸ್ಟಾರ್ ನಟನನ್ನಾಗಿ ಮಾಡಿದೆ. ಅಷ್ಟು ದೊಡ್ಡ ಹಿಟ್ ನೀಡಿದ ನಿರ್ದೇಶಕ ಪ್ರಶಾಂತ್ ನೀಲ್ ವಿದ್ಯಾ ಅವರ ಸಹೋದರ. ಹಾಗಾಗಿ ವರದಕ್ಷಿಣೆಯಾಗಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.