»   » ತಪ್ಪಾಗಿದ್ದರೆ 'ಕ್ಷಮಿಸಿ' ಎಂದು ವಿವಾದಕ್ಕೆ ಪೂರ್ಣವಿರಾಮ ಇಟ್ಟ ಸೃಜನ್.!

ತಪ್ಪಾಗಿದ್ದರೆ 'ಕ್ಷಮಿಸಿ' ಎಂದು ವಿವಾದಕ್ಕೆ ಪೂರ್ಣವಿರಾಮ ಇಟ್ಟ ಸೃಜನ್.!

Posted By:
Subscribe to Filmibeat Kannada

'ಮಜಾ' ಕೊಡಲು ಆಡಿದ ಒಂದೇ ಒಂದು ಮಾತು ಇಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಬಹುದು ಎಂದು 'ಮಜಾ ಸ್ಟಾರ್' ಸೃಜನ್ ಊಹಿಸಿರಲಿಲ್ಲ. ಏನೋ ಹೇಳಲು ಹೋಗಿ ತುಳು ನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿರುವ ನಟ ಸೃಜನ್ ಲೋಕೇಶ್ ''ತಪ್ಪಾಗಿದ್ದರೆ ಕ್ಷಮೆ ಇರಲಿ'' ಅಂತ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಆದರೂ, ''ಟಿವಿಯಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡಿ, ಫೇಸ್ ಬುಕ್ ನಲ್ಲಿ ಕ್ಷಮೆ ಕೇಳಿದರೆ ಹೇಗೆ?'' ಎಂಬ ಪ್ರಶ್ನೆ ಕರಾವಳಿಗರ ಮನಸ್ಸಲ್ಲಿ ಮೂಡಿದೆ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸೃಜನ್ ವಿರುದ್ಧ ತುಳುನಾಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ವಿವಾದಕ್ಕೆ ಪೂರ್ಣ ವಿರಾಮ ಇಡಲು ಮಂಗಳೂರಿನ ಶೇಖರ್ ಬಲ್ಲಾಳ್ ಎಂಬುವರ ಜೊತೆ ಸೃಜನ್ ಲೋಕೇಶ್ ಮಾತನಾಡಿ ಸಮಸ್ತ ತುಳುನಾಡಿಗರಲ್ಲಿ ಕ್ಷಮೆ ಕೋರಿದ್ದಾರೆ. ['ಮಜಾ ಟಾಕೀಸ್'ನಲ್ಲಿ ಸೃಜನ್ ಲೋಕೇಶ್ ಮಾಡಿದ ಮಹಾ ಎಡವಟ್ಟಿದು.!]

ಶೇಖರ್ ಬಲ್ಲಾಳ್ ಜೊತೆ ಸೃಜನ್ ಲೋಕೇಶ್ ಮಾತನಾಡಿರುವ ಆಡಿಯೋ ಕ್ಲಿಪ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಇಬ್ಬರ ನಡುವಿನ ಸಂಭಾಷಣೆಯ ಲಿಖಿತ ರೂಪ ಇಲ್ಲಿದೆ ಓದಿರಿ....

ಕೆಟ್ಟದಾಗಿ ನಾನು ಏನನ್ನೂ ಹೇಳಿಲ್ಲ!

ಶೇಖರ್ ಬಲ್ಲಾಳ್ - ''ಮಜಾ ಟಾಕೀಸ್' ಸಂಚಿಕೆಯಲ್ಲಿ ಭೂತಾರಾಧನೆ ಬಗ್ಗೆ ನೀವು ಒಂದು ಮಾತು ಹೇಳಿದ್ರಿ. ತುಳುನಾಡಿನವರೆಲ್ಲರೂ ನಿಮ್ಮ ಮಾತಿನ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀವು ಫೇಸ್ ಬುಕ್ ನಲ್ಲಿ ಸಾರಿ ಕೇಳಿದ್ದು ಯಾರಿಗೂ ಸಮಾಧಾನ ತಂದಿಲ್ಲ. ಮಂಗಳೂರಿಗೆ ಬಂದು ಸಾರಿ ಕೇಳಬೇಕು ಅಂತ ಎಲ್ಲರೂ ಕೇಳುತ್ತಿದ್ದಾರೆ''

ಸೃಜನ್ ಲೋಕೇಶ್ - ''ಭೂತಾರಾಧನೆ ಬಗ್ಗೆ ನಾನು ಕೆಟ್ಟದಾಗಿ ಏನನ್ನೂ ಹೇಳಿಲ್ಲ. ಈ ಬಗ್ಗೆ ನಾನು ಹಂಡ್ರೆಡ್ ಪರ್ಸೆಂಟ್ ಕಾನ್ಫಿಡೆಂಟ್ ಆಗಿ ಹೇಳುತ್ತೇನೆ. ಭೂತಾರಾಧನೆ ಬಗ್ಗೆ ಅವಮಾನ ಮಾಡಬೇಕು, ಟಾರ್ಗೆಟ್ ಮಾಡಬೇಕು ಎಂಬ ಯಾವ ಉದ್ದೇಶ ಕೂಡ ನನಗಿಲ್ಲ'' [ಕರಾವಳಿ ಆಚರಣೆ ಬಗ್ಗೆ ಕೊಂಕು ಮಾತನಾಡಿದ ಸೃಜನ್ ವಿರುದ್ಧ ರೊಚ್ಚಿಗೆದ್ದ ವೀಕ್ಷಕರು.!]

ಹೋಲಿಕೆ ಯಾಕೆ ಬೇಕಿತ್ತು.?

ಶೇಖರ್ ಬಲ್ಲಾಳ್ - ''ಭೂತಾರಾಧನೆಯನ್ನ ಕಾಲ್ ಸೆಂಟರ್ ಗೆ ಹೋಲಿಕೆ ಮಾಡುವ ಉದ್ದೇಶ ಏನಿತ್ತು ನಿಮಗೆ.?''

ಸೃಜನ್ ಲೋಕೇಶ್ - ''ಕಾಲ್ ಸೆಂಟರ್ ಅಂತ ಹೇಳಿದ ತಕ್ಷಣ ನಾನು ಬೇರೆ ರೀತಿ ಹೇಳಿದ್ದೇನೆ ಅಂತ ನೀವೆಲ್ಲ ತಪ್ಪು ತಿಳಿದುಕೊಳ್ಳುತ್ತಿದ್ದೀರಾ. ಸರ್ಕಾರಿ ಕೆಲಸ ದೇವರ ಕೆಲಸ. ಹಾಗಾದ್ರೆ, ಕಾಲ್ ಸೆಂಟರ್ ಏನು? ಎಂಬುದು ಪ್ರಶ್ನೆ ಆಗಿತ್ತು. ಕಾಲ್ ಸೆಂಟರ್ ಬಗ್ಗೆ ಕೂಡ ನನಗೆ ಅಪಾರ ಗೌರವ ಇದೆ. ಅಲ್ಲಿ ಕೆಲಸ ಮಾಡುವುದು ಕೂಡ ದೇವರ ಕೆಲಸವೇ. ಯಾಕಂದ್ರೆ, ಕಾಲ್ ಸೆಂಟರ್ ಆಗಲಿ, ಆಟೋ ಓಡಿಸುವುದಾಗಲಿ, ಆಂಬುಲೆನ್ಸ್ ಓಡಿಸುವುದಾಗಲಿ... ಕೆಲಸ ಅಂದ್ರೆ ದೇವರ ಸಮಾನ ಅಂತ ನಂಬಿರುವವನು ನಾನು. ಹೀಗಾಗಿ, ಇದು ರಾತ್ರಿ ಮಾಡುವ ಕೆಲಸ ಅದ್ರಿಂದ ಕಾಮಿಕಲ್ ಆಗಿ ನಾನು ಹೇಳಿದೆ. ಕೆಟ್ಟದಾಗಿ ಹೇಳಲಿಲ್ಲ'' [ಕಡೆಗೂ ಕರಾವಳಿಗರ ಕೂಗಿಗೆ ಬೆಲೆಕೊಟ್ಟು ತಲೆ ಬಾಗಿದ ಸೃಜನ್ ಲೋಕೇಶ್]

ಪ್ಲಾನ್ ಮಾಡಿ ಮಾಡಿದ್ದಲ್ಲ

ಶೇಖರ್ ಬಲ್ಲಾಳ್ - ''ರಾತ್ರಿ ಮಾಡುವ ಕೆಲಸ ಅಂದ್ರೆ ಪಬ್ ನಲ್ಲಿ ಡ್ಯಾನ್ಸ್ ಮಾಡುತ್ತಾರೆ, ಬೇರೇನೋ ಮಾಡುತ್ತಾರೆ.?''
ಸೃಜನ್ ಲೋಕೇಶ್ - ''ಇದು ಪ್ಲಾನ್ ಮಾಡಿ ಮಾಡಿದ್ದಲ್ಲ. ಜನರ ನಂಬಿಕೆ, ಆಚಾರ-ವಿಚಾರ ಅಂತ ಬಂದಿದ್ದಕ್ಕೆ ನಾನು ಕ್ಷಮೆ ಕೇಳಿದ್ದೇನೆ. ನಾನು ಇಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಬೇಕೂ ಅಂತಲೂ ಮಾಡಿಲ್ಲ. ಜನರಿಗೆ ನೋವಾಗಿರುವುದರಿಂದಲೇ ಕ್ಷಮೆ ಕೇಳಿದ್ದೇನೆ. ನಾನೇ ಸರಿ ಅಂತಲೂ ವಾದಿಸುತ್ತಿಲ್ಲ.''

ಬಾಯಿ ಮಾತಲ್ಲಿ ಕ್ಷಮೆ ಕೇಳಿದರೆ ಆಯ್ತಾ.?

ಶೇಖರ್ ಬಲ್ಲಾಳ್ - ''ಬಾಯಿ ಮಾತಲ್ಲಿ ಕ್ಷಮೆ ಕೇಳಿದರೆ... ಫೇಸ್ ಬುಕ್ ನಲ್ಲಿ ಕ್ಷಮೆ ಕೇಳಿದರೆ.. ಜನರು ಕ್ಷಮಿಸುತ್ತಾರಾ.?''

ಸೃಜನ್ ಲೋಕೇಶ್ - ''ಫೇಸ್ ಬುಕ್ ನಲ್ಲಿ ನನ್ನದು ಪರ್ಸನಲ್ ಅಕೌಂಟ್. ನಾನು ಫೇಸ್ ಬುಕ್ ನಲ್ಲಿ ಏನಾದರೂ ಹಾಕಿದರೆ, ಅದಕ್ಕೆ ಜನ ರಿಯಾಕ್ಟ್ ಮಾಡುತ್ತಾರೆ ಅಂದ್ರೆ ಅದಕ್ಕೂ ಬೆಲೆ ಇದೆ ಅಂತಲೇ ಅರ್ಥ. ಹೀಗಾಗಿ ಫೇಸ್ ಬುಕ್ ನಲ್ಲಿ ನಾನು ಕ್ಷಮೆ ಕೇಳಿದ್ದೇನೆ''

ಅಪಾರ ಗೌರವ ಇದೆ

''ತುಳುನಾಡಿನ ಮೇಲೆ ನನಗೆ ಅಪಾರ ಗೌರವ ಇದೆ. ಅಲ್ಲಿನ ಪ್ರತಿಭೆಗಳನ್ನೇ ಕರ್ಕೊಂಡು ಬಂದು ನಾನು 'ಮಜಾ ಟಾಕೀಸ್' ಮಾಡುತ್ತಿದ್ದೇನೆ. ನನ್ನ ಟೀಮ್ ನಲ್ಲಿ ಮೋಹನ್, ನವೀನ್ ಪಡೀಲ್, ರಜಿನಿ ಬಹುತೇಕರು ತುಳುನಾಡಿನವರೇ'' - ಸೃಜನ್ ಲೋಕೇಶ್

ತುಳುನಾಡನ್ನ ಹೇಗೆ ತಾನೆ ಇಷ್ಟ ಪಡದೆ ಇರಲು ಸಾಧ್ಯ

''ನವೀನ್ ಪಡೀಲ್.. ಒನ್ ಆಫ್ ದಿ ಬೆಸ್ಟ್ ಆಕ್ಟರ್. ಅವರನ್ನ ನಾನು 'ಮಜಾ ಟಾಕೀಸ್' ಭಾಗವಾಗಿರಬೇಕು ಅಂತ ಕರ್ಕೊಂಡು ಬಂದಾಗ ಮಂಗಳೂರು ಹಾಗೂ ತುಳುನಾಡನ್ನ ನಾನು ಹೇಗೆ ತಾನೆ ಇಷ್ಟ ಪಡದೆ ಇರಲು ಸಾಧ್ಯ.?'' - ಸೃಜನ್ ಲೋಕೇಶ್

ಕ್ಷಮಿಸಿ

''ದಯವಿಟ್ಟು ತಪ್ಪು ತಿಳಿಯಬೇಡಿ. ನಾನು ಆಡಿರುವ ಮಾತಿನಿಂದ ಬೇಸರ ಆಗಿದ್ರೆ, ಕ್ಷಮಿಸಿ. ಕ್ಷಮೆ ಕೇಳುತ್ತಿದ್ದೇನೆ. ಯಾವುದೇ ಉದ್ದೇಶ ಇಟ್ಟುಕೊಂಡು ನಾನು ಮಾತನಾಡಿಲ್ಲ'' - ಸೃಜನ್ ಲೋಕೇಶ್

ಮುಂದಿನ ಸಂಚಿಕೆಯಲ್ಲಿ ಕ್ಷಮೆ ಕೇಳಬೇಕು

ಶೇಖರ್ ಬಲ್ಲಾಳ್ - ''ನೀವು ಮುಂದಿನ ಸಂಚಿಕೆಯಲ್ಲಿ ಕ್ಷಮೆ ಕೇಳಬೇಕು ಅಂತ ನಮ್ಮ ತುಳುನಾಡಿನವರು ಒತ್ತಾಯಿಸುತ್ತಿದ್ದಾರೆ''

ಸೃಜನ್ ಲೋಕೇಶ್ - ''ಇಲ್ಲಿ ಪ್ರ್ಯಾಕ್ಟಿಕಲ್ ಪ್ರಾಬ್ಲಂ ಇದೆ. ಮುಂದಿನ ತಿಂಗಳವರೆಗೂ ಆಗುವಷ್ಟು 'ಮಜಾ ಟಾಕೀಸ್' ಶೂಟಿಂಗ್ ಆಗ್ಹೋಗಿದೆ. ಮುಂದಿನ ಸಂಚಿಕೆಯಲ್ಲೇ ಸಾರಿ ಕೇಳಿ ಅಂದ್ರೆ, ಮುಂದಿನ ಸಂಚಿಕೆಯ ಶೂಟಿಂಗ್ ಮುಗಿದು ಹೋಗಿದೆ. ಈಗಾಗಲೇ ರೆಕಾರ್ಡಿಂಗ್ ಆಗಿರುವುದರಿಂದ ಈಗೇನು ಮಾಡಲು ಸಾಧ್ಯವಿಲ್ಲ''

ಮಂಗಳೂರಿಗೆ ಬಂದು ಕ್ಷಮೆ ಕೇಳಬೇಕು

ಶೇಖರ್ ಬಲ್ಲಾಳ್ - ''ಮಂಗಳೂರಿಗೆ ಬಂದು ಕ್ಷಮೆ ಕೇಳಿ...''
ಸೃಜನ್ ಲೋಕೇಶ್ - ''ಕ್ಷಮೆ ಕೇಳಲು ಅಲ್ಲಿಯವರೆಗೂ ಬನ್ನಿ ಅಂದ್ರೆ...''
ಶೇಖರ್ ಬಲ್ಲಾಳ್ - ''ಕರಾವಳಿ ಜನಕ್ಕೆ ನೋವಾಗಿದೆ. ಅವರಿಗಾಗಿ ಕ್ಷಮೆ ಕೇಳಲು ಯಾಕೆ ಬರಬಾರದು.?''
ಸೃಜನ್ ಲೋಕೇಶ್ - ''ಹೋದ ತಿಂಗಳಷ್ಟೇ ಮಂಗಳೂರಿಗೆ ಬಂದಿದ್ದೆ. ಈಗ ನನಗೆ ತುಂಬಾ ಕಮಿಟ್ಮೆಂಟ್ಸ್ ಇದೆ. ಅದರ ಮಧ್ಯೆ ಬಿಡುವು ಮಾಡಿಕೊಳ್ಳುವುದು ಕಷ್ಟ. ಮಂಗಳೂರಿಗೆ ಬಂದೇ ಬರುತ್ತೇನೆ. ನಾನು ನಿರ್ಮಾಣ ಮಾಡುತ್ತಿರುವ ಸೀರಿಯಲ್ ಹೆಸರು 'ಮಂಗ್ಳೂರ್ ಹುಡುಗಿ ಹುಬ್ಳಿ ಹುಡುಗ'. ಅಷ್ಟು ಕನೆಕ್ಷನ್ ಇದೆ ನನಗೆ ಮಂಗಳೂರು ಬಗ್ಗೆ''

ಬೂಟಾಟಿಕೆ ಮಾಡುತ್ತಿಲ್ಲ

''ಬೂಟಾಟಿಕೆ ಮಾಡುತ್ತಿಲ್ಲ. ನಾನು ತುಂಬಾ ಇಷ್ಟ ಪಡುವ ಜಾಗ ಮಂಗಳೂರು. ನಾನು ತುಂಬಾ ಇಷ್ಟ ಪಡುವ ಜನ ಕರಾವಳಿಗರು. ನನ್ನ ತುಂಬಾ ಒಳ್ಳೆ ಸ್ನೇಹಿತರು ಅಲ್ಲಿದ್ದಾರೆ. ನನ್ನ ಮಾತಿನಿಂದ ಬೇಸರವಾಗಿದ್ರೆ, ನಾನು ಖಂಡಿತ ಕ್ಷಮೆ ಕೇಳುತ್ತೇನೆ. ನನ್ನಲ್ಲಿ ದುರುದ್ದೇಶ ಇರ್ಲಿಲ್ಲ. ದಯವಿಟ್ಟು ಇದರಲ್ಲಿ ಬೇರೇನೂ ಹುಡುಕಬೇಡಿ'' - ಸೃಜನ್ ಲೋಕೇಶ್

English summary
Srujan Lokesh Apologizes for his comment on 'Bhoota Aradhane'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada