For Quick Alerts
  ALLOW NOTIFICATIONS  
  For Daily Alerts

  ಅಂದು ಸೃಜನ್-ರಾಘವೇಂದ್ರ ಹುಣಸೂರ್ ಭೇಟಿ ಮಾಡಿದ್ದರ ಗುಟ್ಟು ಬಹಿರಂಗ

  |
  ಸೃಜನ್ ಲೋಕೇಶ್ ಹಾಗು ರಾಘವೇಂದ್ರ ಹುಣಸೂರು ಭೇಟಿಯ ಕಾರಣ ಬಯಲು

  ಫೆಬ್ರವರಿ ತಿಂಗಳಲ್ಲಿ ನಟ, ನಿರೂಪಕ ಸೃಜನ್ ಲೋಕೇಶ್ ಮತ್ತು ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಭೇಟಿ ಮಾಡಿದ್ದರು. ಅಂದಿನ ಆ ಭೇಟಿಯಲ್ಲಿ ಅದೇನೋ ಸಂಭ್ರಮವಿತ್ತು. ಇಬ್ಬರು ಕೇಕ್ ಕಟ್ ಮಾಡಿ ಸೆಲೆಬ್ರೆಟ್ ಮಾಡಿದ್ದರು. ಆದ್ರೆ, ವಿಷ್ಯ ಏನೂ ಅಂತ ಬಿಟ್ಟು ಕೊಟ್ಟಿರಲಿಲ್ಲ.

  ಕಲರ್ಸ್ ಕನ್ನಡದಲ್ಲಿ ಮಜಾ ಟಾಕೀಸ್ ಕಾರ್ಯಕ್ರಮ ಮಾಡುತ್ತಿರುವ ಸೃಜನ್ ಲೋಕೇಶ್, ಕಲರ್ಸ್ ಬಿಟ್ಟು ಜೀ ಕನ್ನಡಕ್ಕೆ ಜೈ ಎನ್ನುತ್ತಿದ್ದಾರೆ ಎಂಬ ಚರ್ಚೆಗಳು ಹುಟ್ಟಿಕೊಂಡಿತ್ತು. ಅಥವಾ ಜೀ ಟಿವಿಯಲ್ಲಿ ಯಾವುದಾದರೂ ಹೊಸ ಶೋ ಮಾಡ್ತಾರಾ ಎಂಬ ಕುತೂಹಲ ಕೂಡ ಇತ್ತು.

  ಕಲರ್ಸ್ ಗೆ ಬೈ ಹೇಳಿ ಜೀ-ಕನ್ನಡಕ್ಕೆ ಜೈ ಅಂತಾರಾ ಸೃಜನ್ ಲೋಕೇಶ್?

  ಈ ಎಲ್ಲಾ ಕುತೂಹಲಕ್ಕೆ ತೆರೆಬಿದ್ದಿದ್ದು, ಅಂದು ಸೃಜನ್ ಲೋಕೇಶ್ ಮತ್ತು ರಾಘವೇಂದ್ರ ಹುಣಸೂರ್ ಮಾಡಿದ್ದ ಭೇಟಿಯ ಹಿಂದಿನ ಅಸಲಿ ಕಾರಣ ಬಹಿರಂಗವಾಗಿದೆ. ಏನದು? ಮುಂದೆ ಓದಿ....

  ಮತ್ತೆ ಬರ್ತಿದೆ ಚೋಟಾ ಚಾಂಪಿಯನ್

  ಮತ್ತೆ ಬರ್ತಿದೆ ಚೋಟಾ ಚಾಂಪಿಯನ್

  2013 ಮತ್ತು 2014ರಲ್ಲಿ ಚೋಟಾ ಚಾಂಪಿಯನ್ ಎಂಬ ಮಕ್ಕಳ ಕಾರ್ಯಕ್ರಮ ಬರ್ತಿತ್ತು. ಈ ಶೋವನ್ನ ಸೃಜನ್ ಲೋಕೇಶ್ ನಿರೂಪಣೆ ಮಾಡ್ತಿದ್ರು. ಎರಡು ಸೀಸನ್ ಮುಗಿಸಿ ಬ್ರೇಕ್ ಕೊಟ್ಟಿದ್ದ ಸೃಜನ್ ಲೋಕೇಶ್ ಈಗ ಮೂರನೇ ಆವೃತ್ತಿ ಮೂಲಕ ಮತ್ತೆ ಜೀ ಕನ್ನಡಕ್ಕೆ ಕಂಬ್ಯಾಕ್ ಆಗುತ್ತಿದ್ದಾರೆ.

  ಲೋಕೇಶ್ ಕುಟುಂಬದ ಹೊಸ ಸಾಧನೆ: ಇನ್ಮುಂದೆ ಯಾರೂ ಮಾಡಲಾಗದು.!

  ಅತಿ ಶೀಘ್ರದಲ್ಲಿ ಬರುತ್ತಿದೆ

  ಅತಿ ಶೀಘ್ರದಲ್ಲಿ ಬರುತ್ತಿದೆ

  ಚೋಟಾ ಚಾಂಪಿಯನ್ ಹೊಸ ಆವೃತ್ತಿ ಆರಂಭವಾಗುತ್ತಿದ್ದು, ಈಗಾಗಲೇ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಸದ್ಯಕ್ಕೆ ದಿನಾಂಕ ಮತ್ತು ಸಮಯ ನಿಗದಿಯಾಗಿಲ್ಲವಾದರೂ, ಅತಿ ಶೀಘ್ರದಲ್ಲಿ ಎಂಬ ಪ್ರೋಮೋ ಹೊರಬಿದ್ದಿದೆ. ಈ ಮೂಲಕ ಮಾತಿನ ಮಲ್ಲ, ಪ್ರತಿಭಾನ್ವಿತ ಪುಟಾಣಿಗಳಿಗೆ ಖುಷಿ ನೀಡಿದೆ.

  ಗಜನ ಜೊತೆ ಸೃಜನಿಗೂ ಸಿಕ್ತು ಹೊಸ ಬಿರುದು

  3 ರಿಂದ 5 ವಯಸ್ಸಿನ ಮಕ್ಕಳು

  3 ರಿಂದ 5 ವಯಸ್ಸಿನ ಮಕ್ಕಳು

  ಈ ಕಾರ್ಯಕ್ರಮದಲ್ಲಿ ನಿಮ್ಮ ಮಕ್ಕಳನ್ನ ನೋಡಬೇಕೇ. ಹಾಗಿದ್ರೆ, ನಿಮ್ಮ ಮಕ್ಕಳ 3 ರಿಂದ 5 ವರ್ಷದೊಳಗಿನವರಾಗಿದ್ದರೇ ಅವರ ವಿಡಿಯೋವನ್ನ ಜೀ ಕನ್ನಡ ವಾಟ್ಸಾಪ್ ನಂಬರ್ ಗೆ ಕಳುಹಿಸಬೇಕು. ಪ್ರೋಮೋ ಜೀ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿದೆ. ವಾಟ್ಸಾಪ್ ನಂಬರ್ ಅದರಲ್ಲಿದೆ.

  ಗೆಳೆಯ ದರ್ಶನ್ ದಾರಿಯನ್ನು ಹಿಂಬಾಲಿಸಿದ ಸೃಜನ್

  ಸೃಜನ್ ಲೋಕೇಶ್ ಟಿವಿ ಕಾರ್ಯಕ್ರಮಗಳು

  ಸೃಜನ್ ಲೋಕೇಶ್ ಟಿವಿ ಕಾರ್ಯಕ್ರಮಗಳು

  ಇದುವರೆಗೂ ಸೃಜನ್ ಲೋಕೇಶ್ ಅವರ ಹಲವು ಟಿವಿ ಶೋಗಳನ್ನ ಮಾಡಿದ್ದಾರೆ. ಮಜಾ ವಿತ್ ಸುಜಾ ಶೋ ಮೂಲಕ ನಿರೂಪಣೆ ಆರಂಭಿಸಿದ ಸೃಜನ್, ಸೈ, ಕಿಚ್ಚನ್ ಕಿಲಾಡಿಗಳು, ಸೈ 2, ಡ್ಯಾಡಿ ನಂ 1, ಕಾಸ್ ಗೆ ಟಾಸ್, ಚೋಟಾ ಚಾಂಪಿಯನ್, ಚೋಟಾ ಚಾಂಪಿಯನ್ 2 ಅಂತಹ ಶೋ ಮಾಡಿದ್ದರು. ಬಿಗ್ ಬಾಸ್ ಕನ್ನಡ 2ನಲ್ಲಿ ಭಾಗವಹಿಸಿದ್ದರು. 2015 ರಿಂದ ಮಜಾ ಟಾಕೀಸ್ ಮಾಡ್ತಿದ್ದಾರೆ.

  English summary
  Kannada actor, anchor srujan lokesh is come back to zee kannada with chota champion season 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X