»   » ಹೊಸ ರೂಪದಲ್ಲಿ ಮತ್ತೆ ಬರ್ತಿದೆ 'ಮಜಾ ಟಾಕೀಸ್'

ಹೊಸ ರೂಪದಲ್ಲಿ ಮತ್ತೆ ಬರ್ತಿದೆ 'ಮಜಾ ಟಾಕೀಸ್'

Posted By:
Subscribe to Filmibeat Kannada
ಸೃಜನ್ ಲೋಕೇಶ್ ಮಜಾ ಟಾಕೀಸ್ ಮತ್ತೆ ಶುರು | Filmibeat Kannada

ಪ್ರತಿ ಶನಿವಾರ ಮತ್ತು ಭಾನುವಾರ ಬಂತು ಅಂದರೆ ಸಾಕು ಮನೆ ಮಂದಿಯಲ್ಲರು ಟಿವಿ ಮುಂದೆ ಕೂತು ನೋಡುತ್ತಿದ್ದ ಕಾರ್ಯಕ್ರಮ ಮಜಾ ಟಾಕೀಸ್. ಸೃಜನ್ ನಿರೂಪಣೆ ಶೈಲಿ, ಕುರಿ ಕಾಮಿಡಿ, ರೆಮೋ ಮ್ಯೂಸಿಕ್, ಅಪರ್ಣ ಹಾಗೂ ಪವನ್ ಆಕ್ಟಿಂಗ್ ಇದೆಲ್ಲ ನೋಡಿ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದರು.

ಪ್ರತಿ ಎಪಿಸೋಡ್ ನಲ್ಲೂ ಹೊಸ ಕಾನ್ಸೆಪ್ಟ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದ ಸೃಜನ್ ಮತ್ತು ಟೀಂ ಇಲ್ಲದೆ ಪ್ರೇಕ್ಷಕರು ಬೇಸರವಾಗಿದ್ದರು. ಆ ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಸೃಜನ್ 'ಕಾಮಿಡಿ ಟಾಕೀಸ್' ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದರು. ಅದೆಕೋ ಆ ಕಾರ್ಯಕ್ರಮ ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟವಾಗಲಿಲ್ಲ.

Srujan Lokesh planning to start session 2 of Maja Talkies

ಇದರ ಬಳಿಕ ಇದೀಗ ಸೃಜನ್ ಅವರಿಗೆ ಮತ್ತೆ 'ಮಜಾ ಟಾಕೀಸ್' ಶುರು ಮಾಡಿ ಎಂಬ ಕರೆ ಬಂದಿದೆಯಂತೆ. ಅದೇ ರೀತಿ ರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಖ್ಯಾತಿ ಪಡೆದುಕೊಂಡಿದ್ದ 'ಮಜಾ ಟಾಕೀಸ್' ಕಾರ್ಯಕ್ರಮ ಮತ್ತೆ ಶುರುವಾಗಲಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋ ಶೂಟಿಂಗ್ ಅನ್ನು ಮಾಡಿ ಮುಗಿಸಿದ್ದಾರೆ. ಫೆಬ್ರವರಿ 8 ರಿಂದ ಹೊಸ ರೂಪದಲ್ಲಿ, ಹೊಸ ಕಾನ್ಸೆಪ್ಟ್ ನಲ್ಲಿ ಪ್ರೇಕ್ಷಕರ ಮುಂದೆ 'ಮಜಾ ಟಾಕೀಸ್' ಬರುತ್ತೆ ಅನ್ನುವ ಸುದ್ದಿಗಳು ಸಿಕ್ಕಿದೆ. ಆದರೆ ಅದರ ಬಗ್ಗೆ ಅಧಿಕೃತ ಮಾಹಿತಿಯನ್ನು ವಾಹಿನಿ ಬಿಟ್ಟುಕೊಟ್ಟಿಲ್ಲ.

English summary
Srujan Lokesh planning to start session 2 of Maja Talkies. Maja Talkies is Colours Kannada Channel's popular show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X