»   » 'ಮಜಾ ಟಾಕೀಸ್'ನಲ್ಲಿ ಸೃಜನ್ ಲೋಕೇಶ್ ಮಾಡಿದ ಮಹಾ ಎಡವಟ್ಟಿದು.!

'ಮಜಾ ಟಾಕೀಸ್'ನಲ್ಲಿ ಸೃಜನ್ ಲೋಕೇಶ್ ಮಾಡಿದ ಮಹಾ ಎಡವಟ್ಟಿದು.!

Posted By:
Subscribe to Filmibeat Kannada

'ಎ ಡೇ ವಿಥೌಟ್ ಲಾಫ್ಟರ್ ಈಸ್ ಎ ಡೇ ವೇಸ್ಟೆಡ್' ಅಂತ ಹೇಳುತ್ತಾ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಕಾಮಿಡಿ ಕಚಗುಳಿ ಇಡುವ ನಟ ಸೃಜನ್ ಲೋಕೇಶ್ ಇದೀಗ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ತಮ್ಮ 'ಒನ್ ಲೈನ್ ಪಂಚ್' ಮೂಲಕ ವೀಕ್ಷಕರನ್ನ ನಗೆಗಡಲಿನಲ್ಲಿ ತೇಲಿಸಲು ಹೋಗಿ ಬಹಿರಂಗವಾಗಿ ಕ್ಷಮೆ ಕೇಳುವ ಪರಿಸ್ಥಿತಿ ಸೃಜನ್ ಲೋಕೇಶ್ ಗೆ ಬಂದೊದಗಿದೆ.[ಪ್ರಥಮ್ ಕಾಲೆಳೆದ ಸೃಜನ್ ವಿರುದ್ಧ ಸಿಟ್ಟಿಗೆದ್ದ ಕನ್ನಡ ವೀಕ್ಷಕರು.!]

ನಟ ಹಾಗೂ ನಿರೂಪಕ ಸೃಜನ್ ಲೋಕೇಶ್ ಸಿಲುಕಿಕೊಂಡಿರುವ ಹೊಸ ವಿವಾದದ ಕುರಿತ ಸಂಪೂರ್ಣ ಚಿತ್ರಣ ಇಲ್ಲಿದೆ ಓದಿರಿ....

ವಿವಾದದ ಕೇಂದ್ರಬಿಂದು ಆಗಿರುವ ನಿನ್ನೆಯ ಸಂಚಿಕೆ

'ಮಜಾ ಟಾಕೀಸ್' ಕಾರ್ಯಕ್ರಮದ ನಿನ್ನೆಯ ಸಂಚಿಕೆಯಲ್ಲಿ (ಮಾರ್ಚ್ 19) ತುಳುನಾಡಿನ 'ಭೂತಾರಾಧನೆ' ಬಗ್ಗೆ ಸೃಜನ್ ಲೋಕೇಶ್ ಅಪಹಾಸ್ಯ ಮಾಡಿದ್ದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.[ಭೂತಕೋಲಕ್ಕೆ ಅಪಹಾಸ್ಯ, ಸೃಜನ್ ವಿರುದ್ಧ ಕರಾವಳಿಗರ ಆಕ್ರೋಶ]

'ಮಜಾ ಟಾಕೀಸ್'ನಲ್ಲಿ ಆಗಿದ್ದೇನು.?

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ನಿನ್ನೆ 'ಶುದ್ಧಿ' ತಂಡ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. 'ಶುದ್ಧಿ' ತಂಡ ನಿರ್ದೇಶಕ ಆದರ್ಶ ರವರಿಗೆ 'ಮಜಾ ಟಾಕೀಸ್' ಸೆಟ್ ನಲ್ಲಿ ಕುಳಿತಿದ್ದ ಆಡಿಯನ್ಸ್ ಒಬ್ಬರು ಪ್ರಶ್ನೆಯೊಂದನ್ನು ಕೇಳಿದರು. [ಪ್ರಥಮ್, ಸೃಜನ್ ಮತ್ತು ಪ್ರೇಕ್ಷಕರು: ಮುಗಿಯದ ಕಾಮೆಂಟ್ಸ್ ಕದನ]

ಯುವತಿ ಕೇಳಿದ ಪ್ರಶ್ನೆ ಏನು.?

''ಸರ್ಕಾರಿ ಕೆಲಸ ದೇವರ ಕೆಲಸ ಅಂತಾರಲ್ಲ... ಕಾಲ್ ಸೆಂಟರ್ ಕೆಲಸ, ಐಟಿ-ಬಿಟಿ ಕೆಲಸಕ್ಕೆ ಏನಂತಾರೆ.?'' ಅಂತ ಪ್ರಶ್ನೆ ಕೇಳಿದ್ದಕ್ಕೆ ನಿರ್ದೇಶಕ ಆದರ್ಶ, ''ಹೊಟ್ಟೆಪಾಡಿಗೆ ಮಾಡುವ ಕೆಲಸ'' ಅಂತ ಉತ್ತರ ಕೊಟ್ಟರು. ಜೊತೆಗೆ ನಟಿ ನಿವೇದಿತಾ ಕೂಡ ''ಕಾಯಕವೇ ಕೈಲಾಸ'' ಎಂದರು.

ಮೂಗು ತೂರಿಸಿದ ಸೃಜನ್

ಪ್ರಶ್ನೋತ್ತರ ಅಷ್ಟಕ್ಕೆ ಮುಗಿದಿದ್ದರೆ ವಿವಾದ ಆಗುತ್ತಿರಲಿಲ್ಲ. ಇದೇ ಪ್ರಶ್ನೆಗೆ 'ಒನ್ ಲೈನ್ ಪಂಚ್' ಕೊಡಲು ಹೋದ ಸೃಜನ್, ''ಅದು ದೇವರ ಕೆಲಸವೇ. ಒಂದು ಚೂರು ವ್ಯತ್ಯಾಸ ಏನು ಅಂದ್ರೆ, ದಕ್ಷಿಣ ಕನ್ನಡದಲ್ಲಿ ಭೂತ ಕುಣಿತ ಮಾಡ್ತಾರೆ ಗೊತ್ತಾ.?'' ಅಂತ ಹೇಳಲಾರಂಭಿಸಿದರು.

'ಮಜಾ ಟಾಕೀಸ್' ನಲ್ಲಿ ಸೃಜನ್ ಹೇಳಿದ್ದೇನು.?

ಸೃಜನ್ ಲೋಕೇಶ್ - ''ಅದು ದೇವರ ಕೆಲಸವೇ. ಒಂದು ಚೂರು ವ್ಯತ್ಯಾಸ ಏನು ಅಂದ್ರೆ, ದಕ್ಷಿಣ ಕನ್ನಡದಲ್ಲಿ ಭೂತ ಕುಣಿತ ಮಾಡ್ತಾರೆ ಗೊತ್ತಾ.?''

ಯುವತಿ - ''ರಂಗಿತರಂಗ ಫಿಲ್ಮ್ ನಲ್ಲಿ ನೋಡಿದ್ದೇನೆ''

ಸೃಜನ್ ಲೋಕೇಶ್ - ''ಹಾ.. ಕರೆಕ್ಟ್....ಸರ್ಕಾರಿ ಕೆಲಸ ದೇವರ ಕೆಲಸ. ಈ ಕಾಲ್ ಸೆಂಟರ್ ಕೆಲಸ ಭೂತಾರಾಧನೆ ಕೆಲಸ. ಯಾಕೆ ಅಂತ ಕೇಳಮ್ಮ...''

ಯುವತಿ - ''ಯಾಕೆ''

ಸೃಜನ್ ಲೋಕೇಶ್ - ''ಯಾಕೆ ಅಂದ್ರೆ, ಕಾಲ್ ಸೆಂಟರ್ ಕೆಲಸ ಮಾಡೋದು ರಾತ್ರಿ ಹೊತ್ತು. ಭೂತಾರಾಧನೆ ಕೂಡ ಮಾಡುವುದು ರಾತ್ರಿ ಹೊತ್ತು. ಅದಕ್ಕೆ ನೈಟ್ ಶಿಫ್ಟ್ ಒನ್ಲಿ''

ಸೃಜನ್ ಮಾಡಿದ ಮಹಾ ಎಡವಟ್ಟು

ತುಳುನಾಡಿನ ನಂಬಿಕೆಯ ಭೂತಾರಾಧನೆ ಬಗ್ಗೆ ಸೃಜನ್ ಲೋಕೇಶ್ ಮಾಡಿದ ಅಪಹಾಸ್ಯ ಈಗ ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬಹಿರಂಗ ಕ್ಷಮೆ ಕೇಳಲೇಬೇಕು

ಭೂತಾರಾಧನೆ ಬಗ್ಗೆ ಸೃಜನ್ ಕೊಟ್ಟಿರುವ ಹೇಳಿಕೆಯಿಂದ ತುಳುನಾಡಿಗರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ ಸೃಜನ್ ಲೋಕೇಶ್ ಬಹಿರಂಗವಾಗಿ ಕ್ಷಮೆ ಕೇಳಲೇಬೇಕು ಅಂತ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

English summary
Srujan Lokesh's comments on 'Bhootha Aradhane' in 'Maja Talkies' episode creates Controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada