For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್'ನಲ್ಲಿ ಮಜಾ ಕೊಡೋಕೆ ಮತ್ತೊಂದು 'ಶೋ' ಆರಂಭಿಸಿದ ಸೃಜನ್

  By Bharath Kumar
  |

  ಸೃಜನ್ ಲೋಕೇಶ್ ಅಂದ್ರೆನೇ ವೀಕ್ಷಕರಿಗೆ ಒಂಥರಾ ಮಜಾ. ಅದರಲ್ಲೂ 'ಮಜಾ ಟಾಕೀಸ್' ಮೂಲಕ ಪ್ರೇಕ್ಷಕರ ಮಜವನ್ನ ಡಬಲ್ ಮಾಡ್ತಿದ್ರು ಈ ಸುಜಾ. ಹೀಗಿರುವಾಗ, ಕಿರುತೆರೆ ಪ್ರೇಕ್ಷಕರ ಮಜಾ ಹೆಚ್ಚಿಸಲು ಸೃಜನ್ ಕಡೆಯಿಂದ ಹೊಸ ಪ್ಲಾನ್ ಆಗಿದೆ.

  ಸದ್ಯ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಸೃಜನ್ ಸಾರಥ್ಯದ 'ಮಜಾ ಟಾಕೀಸ್' ಪ್ರಸಾರವಾಗ್ತಿದೆ. ಗುರುವಾರ ಮತ್ತು ಶುಕ್ರವಾರ ಸೃಜನ್ ಅಂಡ್ ಟೀಮ್ ನಿಮ್ಮ ನಕ್ಕು ನಗಿಸುತ್ತಿದ್ದಾರೆ. ಇನ್ಮುಂದೆ ಅದೇ ಟೀಮ್ ವಾರಂತ್ಯದಲ್ಲೂ ಬರಲಿದೆಯಂತೆ. ಆದ್ರೆ, 'ಮಜಾ ಟಾಕೀಸ್' ಮೂಲಕವಲ್ಲ, ಮತ್ತೊಂದು ಹೊಸ ಶೋ ಮೂಲಕ.

  ಉದಯ ಟಿವಿಯಲ್ಲಿ 'ಸದಾ ನಿಮ್ಮೊಂದಿಗೆ' ಎಂಬ ವಿನೂತನ ಕಾರ್ಯಕ್ರಮ ನಿರ್ಮಾಣ ಮಾಡ್ತಿರುವ ಸೃಜನ್, ಈಗ ಮತ್ತೆ ಕಲರ್ಸ್ ಕನ್ನಡಕ್ಕೆ ವಾಪಸ್ ಆಗಿದ್ದಾರೆ. ಅಷ್ಟಕ್ಕೂ, ಸೃಜನ್ ಅವರ ಹೊಸ ಮಜಾ ಶೋ ಯಾವುದು.? ಯಾವಾಗ ಆರಂಭ.? ಮುಂದೆ ಓದಿ....

  ಹೊಸ ಶೋ ಆರಂಭಿಸಿದ ಸೃಜನ್

  ಹೊಸ ಶೋ ಆರಂಭಿಸಿದ ಸೃಜನ್

  'ಮಜಾ ಟಾಕೀಸ್' ರೀತಿಯಲ್ಲಿ ಇನ್ನೊಂದು ಹೊಸ ಶೋ ಆರಂಭಿಸಿದ್ದಾರೆ. ಅದರ ಹೆಸರು 'ಮಜಾ ವೀಕೆಂಡ್'. ಪ್ರತಿ ವಾರಂತ್ಯಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

  ಸೇಮ್ ಕಾನ್ಸಪ್ಟ್, ಮಜಾ ಬೇರೆ

  ಸೇಮ್ ಕಾನ್ಸಪ್ಟ್, ಮಜಾ ಬೇರೆ

  'ಮಜಾ ಟಾಕೀಸ್' ಗುರುವಾರ, ಶುಕ್ರವಾರ ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗ್ತಿದೆ. 'ಮಜಾ ವೀಕೆಂಡ್' ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತೆ. ಮಜಾ ಟಾಕೀಸ್ ಫ್ಲೇವರ್ ನಲ್ಲಿ ಮೂಡಿ ಬರಲಿರುವ ಈ ಕಾರ್ಯಕ್ರಮದಲ್ಲಿ ಮಜಾ ಬೇರೆ ರೀತಿಯಲ್ಲಿರಲಿದೆ ಎನ್ನುತ್ತಾರೆ ಸೃಜನ್.

  ಸದಾ ನಿಮ್ಮೊಂದಿಗೆ

  ಸದಾ ನಿಮ್ಮೊಂದಿಗೆ

  'ಮಜಾಟಾಕೀಸ್' ಮತ್ತು 'ಮಜಾವೀಕೆಂಡ್' ಮಾತ್ರವಲ್ಲದೇ ಉದಯ ಟಿವಿಯಲ್ಲಿ 'ಸದಾ ನಿಮ್ಮೊಂದಿಗೆ' ಎಂಬ ವಿನೂತನ ಕಾರ್ಯಕ್ರಮವನ್ನ ಕೂಡ ನಿರ್ಮಾಣ ಮಾಡುತ್ತಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಅವರು ನಿರೂಪಣೆ ಮಾಡ್ತಿದ್ದಾರೆ.

  ಮೊದಲ ಎಪಿಸೋಡ್ ನಲ್ಲಿ ಸರ್ಪ್ರೈಸ್

  ಮೊದಲ ಎಪಿಸೋಡ್ ನಲ್ಲಿ ಸರ್ಪ್ರೈಸ್

  ಇದೇ ಶನಿವಾರ 28ನೇ ತಾರೀಖು 'ಮಜಾ ವೀಕೆಂಡ್' ಮೊದಲ ಎಪಿಸೋಡ್ ಗೆ ಚಾಲನೆ ದೊರೆಯಲಿದೆ. ಈ ವಿಶೇಷ ಸಂಚಿಕೆಯಲ್ಲಿ ಹಲವು ವಿಶೇಷತೆಗಳು ಇರಲಿದೆ ಎನ್ನಲಾಗಿದೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಈ ಶೋನಲ್ಲಿ ಭಾಗವಾಗಲಿದ್ದಾರಂತೆ.

  English summary
  Kannada actor, tv anchor srujan lokesh has starts new tv show called 'maja weekend'. the show will on air from july 28th in colors kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X