»   » ಒಮ್ಮೆ ಶ್ರುತಿ ಹರಿಹರನ್ ಕಡೆ ತಿರುಗಿ ನೋಡಿ ಪುನೀತ್

ಒಮ್ಮೆ ಶ್ರುತಿ ಹರಿಹರನ್ ಕಡೆ ತಿರುಗಿ ನೋಡಿ ಪುನೀತ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ಅರ್ಜುನ್ ಸರ್ಜಾ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಶರಣ್... ಹೀಗೆ ಸ್ಯಾಂಡಲ್ ವುಡ್ ನ ಲೀಡಿಂಗ್ ಹೀರೋಗಳ ಜೊತೆ ತೆರೆ ಹಂಚಿಕೊಳ್ಳುತ್ತಾ ಬಂದಿರುವ ಶ್ರುತಿ ಹರಿಹರನ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೂ ಸ್ಕ್ರೀನ್ ಶೇರ್ ಮಾಡುವ ಬಯಕೆ ಇದೆ. ಅದನ್ನ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಜಾಣ್ಮೆಯಿಂದ ಹೊರಹಾಕಿದ್ದಾರೆ ಶ್ರುತಿ ಹರಿಹರನ್.

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರುತಿ ಹರಿಹರನ್ ಗೆ, ನಿರೂಪಕ ಅಕುಲ್ ಬಾಲಾಜಿ 'Rapid Fire' ರೌಂಡ್ ನಲ್ಲಿ, ''ಈ ಸ್ಟಾರ್ಸ್ ಬಗ್ಗೆ ಕಂಪ್ಲೇಂಟ್ಸ್ ಹೇಳಿ..'' ಎಂದು 'ಪುನೀತ್ ರಾಜ್ ಕುಮಾರ್' ಹೆಸರನ್ನ ಮುಂದೆ ಇಟ್ಟಾಗ, ''ಇನ್ನೂ ನನ್ನ ಜೊತೆ ಆಕ್ಟ್ ಮಾಡಿಲ್ಲ'' ಎಂದು ಶ್ರುತಿ ಹರಿಹರನ್ ಜಾಣ್ಮೆಯ ಉತ್ತರ ಕೊಟ್ಟರು.

Sruthi Hariharan expresses her desire to act with Puneeth Rajkumar
Sruthi Hariharan speaks about her Cinema Journey in Super Talk Time Show

ಸ್ಯಾಂಡಲ್ ವುಡ್ ನ 'ಪವರ್' ಪುನೀತ್ ಜೊತೆ ತೆರೆಹಂಚಿಕೊಳ್ಳಲು ಯಾವ ನಟಿಗೆ ತಾನೇ ಇಷ್ಟ ಇರಲ್ಲ ಹೇಳಿ. ಸಹಜವಾಗಿ ಶ್ರುತಿ ಹರಿಹರನ್ ರವರಿಗೂ ಬಯಕೆ ಇದೆ. ಆದ್ರೆ, ಅದನ್ನ ಈಡೇರಿಸುವ ಜವಾಬ್ದಾರಿ ಪುನೀತ್ ರವರ ಚಿತ್ರದ ನಿರ್ದೇಶಕರ ಮೇಲೆ ಇದೆ. ಕನ್ನಡ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಪುನೀತ್, ಒಮ್ಮೆ ಶ್ರುತಿ ಹರಿಹರನ್ ಕಡೆಗೂ ತಿರುಗಿ ನೋಡಿ...

English summary
Kannada Actress Sruthi Hariharan expresses her desire to share screen space with Power Star Puneeth Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada