»   » ನಟಿ ಶ್ರುತಿ ಹರಿಹರನ್ ಬಗ್ಗೆ ಹೀಗೂ ಒಂದು ಗಾಳಿಸುದ್ದಿ ಇತ್ತಂತೆ.!

ನಟಿ ಶ್ರುತಿ ಹರಿಹರನ್ ಬಗ್ಗೆ ಹೀಗೂ ಒಂದು ಗಾಳಿಸುದ್ದಿ ಇತ್ತಂತೆ.!

Posted By:
Subscribe to Filmibeat Kannada

''ನಟಿ ಶ್ರುತಿ ಹರಿಹರನ್ ಹಾಗೂ ನಟ ಧನಂಜಯ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ. ಇಬ್ಬರ ನಡುವಿನ ಸ್ನೇಹ ಎಕ್ಸ್ ಟ್ರಾ ಸ್ಪೆಷಲ್ ಆಗಿದೆ'' ಎಂಬ ಗಾಳಿಸುದ್ದಿ ಹರಿದಾಡಿತ್ತಂತೆ. ಹಾಗಂತ ಸ್ವತಃ ನಟಿ ಶ್ರುತಿ ಹರಿಹರನ್ ರವರೇ ಬಾಯ್ಬಿಟ್ಟಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಶ್ರುತಿ ಹರಿಹರನ್ ತಮ್ಮ ಬಗ್ಗೆ ತಾವೇ ಕೇಳಿದ ಗಾಸಿಪ್ ವೊಂದನ್ನ ಬಹಿರಂಗ ಪಡಿಸಿದರು.

Sruthi Hariharan revealed the gossip that she had heard about herself

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಮಾತುಕತೆ ಎಲ್ಲ ಮುಗಿದ ಬಳಿಕ ದಿಢೀರ್ ಬೆಂಕಿ (Rapid Fire) ರೌಂಡ್ ಗೆ ನಿರೂಪಕ ಅಕುಲ್ ಬಾಲಾಜಿ ಚಾಲನೆ ನೀಡಿದರು.

ಆಗ, ''ನಿಮ್ಮ ಬಗ್ಗೆ ನೀವೇ ಹಬ್ಬಿಸಿರುವ ಗಾಳಿಸುದ್ದಿ ಯಾವುದು'' ಎಂದು ನಿರೂಪಕ ಅಕುಲ್, ಶ್ರುತಿ ಹರಿಹರನ್ ಗೆ ಕೇಳಿದರು. ಅದಕ್ಕೆ ''ಯಾವುದೂ ಇಲ್ಲ'' ಎಂದರು ಶ್ರುತಿ ಹರಿಹರನ್.

''ಹಾಗಾದ್ರೆ, ಬೇರೆಯವರ ಕಡೆಯಿಂದ ನಿಮ್ಮ ಬಗ್ಗೆ ಬಂದ ಗಾಳಿಸುದ್ದಿ ಯಾವುದು.?'' ಎಂದು ಪ್ರಶ್ನೆ ಕೇಳಿದರು ಅಕುಲ್ ಬಾಲಾಜಿ. ಅದಕ್ಕೆ ''ನನ್ನ ಹಾಗೂ ಧನಂಜಯ್ ಮಧ್ಯೆ ಏನೋ ನಡೆಯುತ್ತಿದೆ ಎಂಬ ಗಾಸಿಪ್ ಕೇಳಿಬಂದಿತ್ತು'' ಎಂದು ಬೋಲ್ಡ್ ಆಗಿ ಉತ್ತರ ಕೊಟ್ಟರು ಶ್ರುತಿ ಹರಿಹರನ್.

Sruthi Hariharan speaks about her Cinema Journey in Super Talk Time Show

ಹಾಗಂತ ಇದು ಜಸ್ಟ್ ಗಾಸಿಪ್ ಅಷ್ಟೆ. ''ನನ್ನ ಹಾಗೂ ಧನಂಜಯ್ ನಡುವೆ ಏನೂ ಇಲ್ಲ'' ಎಂದು ಇದೇ ಕಾರ್ಯಕ್ರಮದಲ್ಲಿ ಶ್ರುತಿ ಹರಿಹರನ್ ಸ್ಪಷ್ಟ ಪಡಿಸಿದ್ದಾರೆ.

English summary
Kannada Actress Sruthi Hariharan revealed the gossip that she had heard about herself in Colors Super Channel's popular show 'Super Talk Time'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada