»   » 'ಕಾಸ್ಟಿಂಗ್ ಕೌಚ್' ಖಂಡಿತ ಇದೆ, ನಡೆಯುತ್ತಲೇ ಇದೆ ಎಂದ ಶ್ರುತಿ ಹರಿಹರನ್.!

'ಕಾಸ್ಟಿಂಗ್ ಕೌಚ್' ಖಂಡಿತ ಇದೆ, ನಡೆಯುತ್ತಲೇ ಇದೆ ಎಂದ ಶ್ರುತಿ ಹರಿಹರನ್.!

Posted By:
Subscribe to Filmibeat Kannada

''ನಟಿ ಆಗ್ಬೇಕು.. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಬೇಕು.. ಪ್ರತಿಭೆ ಇದ್ಯೋ, ಇಲ್ವೋ ಆದ್ರೆ ಒಳ್ಳೆ ಅವಕಾಶಗಳು ಸಿಗಬೇಕು ಅಂದ್ರೆ 'ಕಾಂಪ್ರೊಮೈಸ್' ಮಾಡಿಕೊಳ್ಳಬೇಕು... ಇದೆಲ್ಲ ಇಲ್ಲಿ ಕಾಮನ್'' ಎಂಬ ಮಾತುಗಳು ಆಗಾಗ ರಂಗೀನ್ ದುನಿಯಾದಲ್ಲಿ ಕೇಳಿ ಬರುತ್ತಲೇ ಇರುತ್ತವೆ.

ನಾಚಿಕೆಗೇಡು: ಕನ್ನಡ ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್'! ಸಾಕ್ಷಿ ಬೇಕಾ?

ಆದ್ರೆ, ಇದೆಲ್ಲ ನಿಜವೋ... ಸುಳ್ಳೋ ಎಂಬ ಅನುಮಾನ ಕೆಲವರಲ್ಲಿ ಇರಬಹುದು. ಅಂಥವರಿಗೆ, ''ಚಿತ್ರರಂಗದಲ್ಲಿ 'ಕಾಮುಕರು' ಇರುವುದು ಸತ್ಯ. ಕಾಸ್ಟಿಂಗ್ ಕೌಚ್ ಖಂಡಿತ ಇದೆ'' ಎಂಬ ದಿಟ್ಟ ಹೇಳಿಕೆ ಶ್ರುತಿ ಹರಿಹರನ್ ಬಾಯಿಂದ ಬಂದಿದೆ.

Sruthi Hariharan speaks about Casting Couch

ತುಂಬಾ ತಪ್ಪುಗಳನ್ನು ಮಾಡಿದ್ದಾರಂತೆ ನಟಿ ಶ್ರುತಿ ಹರಿಹರನ್.!

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಕಾಸ್ಟಿಂಗ್ ಕೌಚ್' ಬಗ್ಗೆ ನಟಿ ಶ್ರುತಿ ಹರಿಹರನ್ ಮಾತನಾಡಿದ್ದಾರೆ.

''ಕಾಸ್ಟಿಂಗ್ ಕೌಚ್ ಖಂಡಿತ ಇದೆ. ಅದು ನಡೆಯುತ್ತಲೇ ಇದೆ. ಇದರ ವಿರುದ್ಧ ದನಿ ಎತ್ತಲೇಬೇಕು. ಬೇರೆ ದಾರಿ ಇಲ್ಲ. ನೀವು ಸಿನಿಮಾಗಳಿಗೆ ಆಯ್ಕೆ ಆಗುತ್ತಿದ್ದರೆ, ನಿಮ್ಮ ಟ್ಯಾಲೆಂಟ್, ಪರ್ಫಾಮೆನ್ಸ್ ಅಥವಾ ಲಕ್ ನಿಂದ ಮಾತ್ರ ಆಗಬೇಕು. ಅದು ಬಿಟ್ಟು, ಮುಚ್ಚಿರುವ ಬಾಗಿಲುಗಳ ಹಿಂದಿನ ಪರ್ಫಾಮೆನ್ಸ್ ಆಧಾರದಲ್ಲಿ ಸಿನಿಮಾಗಳಲ್ಲಿ ಚಾನ್ಸ್ ಸಿಗಬಾರದು'' ಎಂದು ಶ್ರುತಿ ಹರಿಹರನ್ ಅಭಿಪ್ರಾಯ ಪಟ್ಟಿದ್ದಾರೆ.

English summary
Kannada Actress Sruthi Hariharan speaks about Casting Couch
Please Wait while comments are loading...