For Quick Alerts
  ALLOW NOTIFICATIONS  
  For Daily Alerts

  Comedy Gang Reality Show ನಟಿ ಶೃತಿ ಹರಿಹರನ್‌ಗೆ ಕಾಮಿಡಿ ಗ್ಯಾಂಗ್‌ನಲ್ಲಿ ಏನು ಕೆಲಸ?

  By ಪ್ರಿಯಾ ದೊರೆ
  |

  ಇತ್ತೀಚೆಗೆ ಕಿರುತೆರೆ ವಾಹಿನಿಗಳಲ್ಲಿ ಹೊಸ ಹೊಸ ಬಗೆಯ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ರಿಯಾಲಿಟಿ ಶೋಗಳಲ್ಲಿ ಕಾಮಿಡಿ ಶೋಗಳು ವೀಕ್ಷಕರ ಮೆಚ್ಚಿನ ಕಾರ್ಯಕ್ರಮವಾಗಿದೆ. ಶನಿವಾರ, ಭಾನುವಾರ ಬಂದರೆ ಸಾಕು ಪ್ರೇಕ್ಷಕರು ಕಾಮಿಡಿ ಶೋ ನೋಡಿ ನಕ್ಕು ವಾರದ ಟೆನ್ಷನ್ ಅನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

  ಇದೀಗ ಹೊಸ ಕಾಮಿಡಿ ಶೋ ಒಂದು ಶುರುವಾಗುತ್ತಿದೆ. ವಿಭಿನ್ನ ಹಾಗೂ ವಿನೂತನ, ಮನೋರಂಜನಾ ಕಾರ್ಯಕ್ರಮಗಳನ್ನು ನೀಡುತ್ತಿರುವ ಸ್ಟಾರ್ ಸುವರ್ಣ ಚಾನೆಲ್, ಇದೀಗ ಹೊಸ ನಗಿಸೋ ಶೋ ಅನ್ನು ಶುರು ಮಾಡುತ್ತಿದೆ. ಇದು ಹೊಸ ಕಲಾವಿದರಿಗೆ ಒಂದು ಅದ್ಭುತ ವೇದಿಕೆಯಾಗಲಿದೆ. ಈ ಕಾರ್ಯಕ್ರಮದ ಮೂಲಕ ಹೊಸ ಪ್ರತಿಭೆಗಳನ್ನು ಪರಿಚಯಿಸಿ ಅವರಿಗೆ ಈ ಶೋ ತಕ್ಕ ಅವಕಾಶವನ್ನು ಕಲ್ಪಿಸಿಕೊಡಲಿದೆ.

  Silli Lalli Serial: ಸೀರಿಯಲ್ ಮುಗಿದರೂ ಮುಗಿಯದ ʻಸಿಲ್ಲಿ-ಲಲ್ಲಿ' ಬಾಂಧವ್ಯ Silli Lalli Serial: ಸೀರಿಯಲ್ ಮುಗಿದರೂ ಮುಗಿಯದ ʻಸಿಲ್ಲಿ-ಲಲ್ಲಿ' ಬಾಂಧವ್ಯ

  ಈ ಕಲಾವಿದರ ನೈಪುಣ್ಯತೆಯನ್ನು ಜಡ್ಜ್ ಮಾಡಲು ಮೂವರು ಜಡ್ಜ್ ಗಳು ಇರಲಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಮೂಡಿ ಬರಲಿರುವ ಈ ಹಾಸ್ಯಮಯ ಕಾರ್ಯಕ್ರಮದ ಜಡ್ಜ್ ಗಳು ಯಾರು ಯಾರು..? ಯಾವುದು ಆ ಕಾಮಿಡಿ ಶೋ..? ಸ್ಫರ್ಧಿಗಳು ಯಾರು..? ಎಂಬುದನ್ನು ಮುಂದೆ ಓದಿ...

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರಲಿರುವ ಈ ಹೊಸ ಕಾಮಿಡಿ ಶೋ ಹೆಸರು ಕಾಮಿಡಿ ಗ್ಯಾಂಗ್. ಕಾಮಿಡಿ ಗ್ಯಾಗ್ ನಲ್ಲಿ ಮೂವರು ಜಡ್ಜ್ ಗಳು ಇರಲಿದ್ದಾರೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹಾಗೂ ಹಾಸ್ಯ ನಟ ಕುರಿ ಪ್ರತಾಪ್ ಕಾಮಿಡಿ ಗ್ಯಾಂಗ್ ತೀರ್ಪುಗಾರರಾಗಿದ್ದಾರೆ. ಇವರಿಬ್ಬರೇ ಅಲ್ಲದೇ, ನಟಿ ಶೃತಿ ಹರಿಹರನ್ ಕೂಡ ಜಡ್ಜ್ ಆಗಿರಲಿದ್ದಾರೆ. ಈ ಮೂಲಕ ಶೃತಿ ಹರಿಹರನ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಕಾಮಿಡಿ ಗ್ಯಾಂಗ್ ಶೋ ಅನ್ನು ಶಿವರಾಜ್ ಕೆ.ಆರ್.ಪೇಟೆ ನಿರೂಪಣೆ ಮಾಡಲಿದ್ದಾರೆ.

  Megha Shetty: 'ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘಾ ಶೆಟ್ಟಿ ಹಿನ್ನೆಲೆ ಏನು?Megha Shetty: 'ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘಾ ಶೆಟ್ಟಿ ಹಿನ್ನೆಲೆ ಏನು?

  ಕಾಮಿಡಿ ಗ್ಯಾಂಗ್ ನಲ್ಲಿ ಹಿತೇಶ್, ಮಡೆನೂರು ಮನು, ನಯನಾ, ಸೂರ್ಯ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ಇವರೆಲ್ಲರ ಜೊತೆಗೆ ಆರು ಟೀಂಗಳು ಪ್ರೇಕ್ಷಕರನ್ನು ನಗಿಸೋಕೆ ಬರುತ್ತಿದೆ. ಇದರಲ್ಲಿ ನಗಿಸೋಕೆ ನಾವು ರೆಡಿ, ನಗುವುದಕ್ಕೆ ನೀವು ರೆಡಿ ನಾ, ಎಂದು ಶ್ರುತಿ ಹರಿಹರನ್ ಪ್ರೋಮೊದಲ್ಲಿ ಹೇಳಿದ್ದಾರೆ.

  ಲೂಸಿಯಾ ಬೆಡಗಿ ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ಸಿಕ್ಕಾಬಟ್ಟೆ ಬ್ಯುಸಿಯಾಗಿದ್ದರು. ಮೀಟೂ ಪ್ರಕರಣದ ನಂತರ ಸಿನಿರಂಗದಿಂದ ಕೊಂಚ ದೂರ ಉಳಿದಿದ್ದ ಶೃತಿ ಹರಿಹರನ್ ಇತ್ತೀಚೆಗೆ ಮತ್ತೆ ಸಿನಿಮಾದಲ್ಲಿ ನಟಿಸಲು ಶುರು ಮಾಡಿದ್ದರು. ಅದಾಗಲೇ ಹಲವು ಸಿನಿಮಾಗಳು ಶೃತಿ ಹರಿಹರನ್ ಕೈಯಲ್ಲಿದ್ದು, ಕೆಲವು ರಿಲೀಸ್ ಗೆ ಸಜ್ಜಾಗಿವೆ. ಇದೀಗ ಶೃತಿ ಹರಿಹರನ್ ಕಿರುತೆರೆಗೂ ಪಾದಾರ್ಪಣೆ ಮಾಡಿದ್ದು, ಕಾಮಿಡಿ ಗ್ಯಾಂಗ್ ಶೋನಲ್ಲಿ ಮೌಲ್ಯ ಮಾಪನ ಮಾಡಲಿದ್ದಾರೆ.

  English summary
  Sruthi Hariharan To Be Judge For New Reality Show Called Comedy Gang.
  Wednesday, March 23, 2022, 10:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X