»   » ಸ್ಟಾರ್ ಸಿಂಗರ್ ಗ್ರ್ಯಾಂಡ್ ಫಿನಾಲೆಯಲ್ಲಿ ಎಸ್ ಜಾನಕಿ

ಸ್ಟಾರ್ ಸಿಂಗರ್ ಗ್ರ್ಯಾಂಡ್ ಫಿನಾಲೆಯಲ್ಲಿ ಎಸ್ ಜಾನಕಿ

Posted By:
Subscribe to Filmibeat Kannada

ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಹೊಸ ಹೊಸ ಗಾಯನ ಪ್ರತಿಭೆಗಳನ್ನು ಬೆಳಕಿಗೆ ತಂದಂತಹ ವಿಭಿನ್ನ ಮ್ಯೂಸಿಕ್ ರಿಯಾಲಿಟಿ ಶೋ 'ಐಡಿಯಾ ಸ್ಟಾರ್ ಸಿಂಗರ್'. ಸ್ಟಾರ್ ನೆಟ್ ವರ್ಕ್ ನ ಕನ್ನಡ ಮನರಂಜನಾ ಸುವರ್ಣ ವಾಹಿನಿಯ ಈ ಶೋ ಅಂತಿಮ ಘಟ್ಟ ತಲುಪಿದೆ.

'ಐಡಿಯಾ ಸ್ಟಾರ್ ಸಿಂಗರ್ ಗ್ರ್ಯಾಂಡ್ ಫಿನಾಲೆ' ಸಂಚಿಕೆಯು ಇದೇ ಭಾನುವಾರ ಜೂನ್ 8 ರಂದು ಸಂಜೆ 6 ರಿಂದ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸ್ಟಾರ್ ಸಿಂಗರ್ ಹೆಸರೇ ಹೇಳುವಂತೆ ಸಂಗೀತದಲ್ಲಿ ಸಾಧನೆ ಮಾಡುವ ಹಾದಿಯಲ್ಲಿದ್ದು ಈ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಹಾಡಿದ ಪ್ರತಿಭೆಗೆ ನೀಡುವ ಮುಕುಟವೇ ಸ್ಟಾರ್ ಸಿಂಗರ್! [ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ]

ಇಂಥಹ ಅದ್ಭುತ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುವ ಯುವ ಗಾಯಕರಿಗೆ ಪ್ರಶಸ್ತಿಯ ಟ್ರೋಫಿಯನ್ನು ನೀಡಲು ಕಾರ್ಯಕ್ರಮಕ್ಕೆ ಮಹಾನ್ ವ್ಯಕ್ತಿ, ನಮ್ಮ ದೇಶದ ಹೆಮ್ಮೆ, ಗಾನಕೋಗಿಲೆ ಎಸ್. ಜಾನಕಿಯವರು!

ಅನುಭವಗಳನ್ನು ಮೆಲುಕು ಹಾಕಿದ ಎಸ್ ಜಾನಕಿ

ಸ್ಟಾರ್ ಸಿಂಗರ್ ಗ್ರ್ಯಾಂಡ್ ಫಿನಾಲೆಗೆ ಆಗಮಿಸಿ ಗೆದ್ದ ಪ್ರತಿಭೆಗೆ ಪ್ರಶಸ್ತಿ ನೀಡಿ ತಮ್ಮ ಅನುಭವ, ಕನ್ನಡ ಚಿತ್ರರಂಗದಲ್ಲಿ ತಾವು ಹರಿಸಿದ ಗಾನಸುಧೆಯನ್ನು ಮತ್ತೊಮ್ಮೆ ಮೆಲುಕು ಹಾಕಿದರಲ್ಲದೇ ಮಗುವಿನಂತೆಯೂ ಮುಗ್ಧೆಯಾಗಿ ತಮ್ಮ ಕಂಠಸಿರಿಯನ್ನು ಪ್ರೇಕ್ಷಕರ ಮುಂದೆ ಹರಿಸಿದ್ದು ವಿಶೇಷ.

ಜಪಾನಿ ಭಾಷೆಯಲ್ಲಿ ಹಾಡಿ ರಂಜಿಸಿದ ಜಾನಕಿ

ಸಂಗೀತ ಲೋಕದಲ್ಲಿ ದಿಗ್ಗಜ ಸ್ಥಾನಕ್ಕೇರಿದ ಇವರು ಬಹುಭಾಷಾ ಗಾಯಕಿ ಎಂಬುದಕ್ಕೆ ಸಾಕ್ಷಿಯಾಗಿದ್ದು ಜಪಾನಿ ಭಾಷೆಯಲ್ಲಿ ಸುಶ್ರಾವ್ಯವಾಗಿ ಹಾಡಿ ಇದೇ ಸ್ಟಾರ್ ಸಿಂಗರ್ ಸೆಟ್ ನಲ್ಲಿ ಪ್ರಸ್ತುತಪಡಿಸಿ ನೆರೆದ ಪ್ರೇಕ್ಷಕರ ಕರ್ಣಾನಂದ ಪಡೆಯುವಂತಾಗಿತ್ತು ಎಂದರೂ ಅತಿಶಯೋಕ್ತಿಯಾಗಲಾರದು.

ಮೂವರು ಸ್ಪರ್ಧಿಗಳ ನಡುವೆ ಬಿರುಸಿನ ಸ್ಪರ್ಧೆ

ಈ ಸಂಗೀತ ಕಾರ್ಯಕ್ರಮ 16 ಜನ ಸ್ಪರ್ಧಿಗಳೊಂದಿಗೆ ಶುರುವಾಗಿತ್ತು ಹಾಗೂ ಒಂದು ಸ್ಪರ್ಧಿಯ ವೈಲ್ಡ್ ಕಾರ್ಡ್ ಎಂಟ್ರಿಯಾಗಿತ್ತು. ಒಟ್ಟು 17 ಗಾಯಕರಲ್ಲಿ ಗ್ರ್ಯಾಂಡ್ ಫಿನಾಲೆ ತಲುಪಿದ ಟಾಪ್ ಸ್ಪರ್ಧಿಗಳು ಕೇವಲ 3 ಜನ ಮಾತ್ರ ಅಂದರೆ ಮಸಾಲ ಮಂಜು, ಗಣೇಶ ಮತ್ತು ಅಶ್ವಿನ್ ಪ್ರಭು.

ಗೆದ್ದವರಿಗೆ ರು.5 ಲಕ್ಷ ನಗದು ಪುರಸ್ಕಾರ

ಈ ಟಾಪ್ 3 ಸ್ಪರ್ಧಿಗಳಿಗೆ ಗ್ರ್ಯಾಂಡ್ ಫಿನಾಲೆಯಲ್ಲಿ ನಿಡಿದ್ದು 3 ವಿಭಿನ್ನ ಚಾಲೆಂಜಿಂಗ್ ಸುತ್ತುಗಳು. ಇವುಗಳಲ್ಲಿ ಅತ್ಯುತ್ತಮವಾಗಿ ಹಾಡಿದ ಪ್ರತಿಭೆಯ ಕೈಸೇರಲಿದೆ ಸ್ಟಾರ್ ಸಿಂಗರ್ ಟ್ರೋಫಿ ಹಾಗೂ ರು.5 ಲಕ್ಷ ನಗದು ಪುರಸ್ಕಾರ!

ಕಾರ್ಯಕ್ರಮದ ಗುರು ವಿಜಯ್ ಪ್ರಕಾಶ್

ಈ ಸಂಗೀತ ಪಯಣದ ಯಶಸ್ಸಿಗೆ ಸ್ಪರ್ಧಿಗಳೊಂದಿಗೆ ಸಾಥ್ ಕೊಟ್ಟವರು ಕಾರ್ಯಕ್ರಮದ ಗುರು ಮತ್ತು ತೀರ್ಪಗಾರರಾಗಿದ್ದ ವಿಜಯ್ ಪ್ರಕಾಶ್. ವಾಯ್ಸ್ ಟ್ರೇನರ್ ಆಗಿ ತಮ್ಮ ಪಾತ್ರ ನಿರ್ವಹಿಸಿದ ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ಹಾಗೂ ಇಡೀ ಕಾರ್ಯಕ್ರಮವನ್ನು ಸುಲಲಿತವಾಗಿ ಮತ್ತು ರಂಜನೀಯವಾಗಿ ನಡೆಸಿಕೊಟ್ಟ ನಮ್ಮೆಲ್ಲ ಪ್ರೀತಿಯ ನಿರೂಪಕರಾದ ಕಾವ್ಯ ಶಾಸ್ತ್ರೀ ಮತ್ತು ನಿರಂಜನ್ ಗೌಡ.

ಇದೇ ಭಾನುವಾರ ಸಂಜೆ 6 ಗಂಟೆಗೆ

ಈ ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಅಂತಿಮ ಹಂತ ತಲುಪಿದ ಟಾಪ್ 3 ಕಂಟೆಸ್ಟೆಂಟ್ ಗಳಲ್ಲಿ ಯಾರು ಪ್ರಶಸ್ತಿ ಬಾಚಿಕೊಳ್ಳುತ್ತಾರೆಂಬುದು ಅತ್ಯಂತ ಕುತೂಹಲಕಾರಿ ಸಂಗತಿ. ತಪ್ಪದೇ ವೀಕ್ಷಿಸಿ ಇದೇ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸುವರ್ಣವಾಹಿನಿಯಲ್ಲಿ.

English summary
Suvarna Channel popular music reality show all set to air 'Idea Star Singer Grand Finale'. The grand finale episode will telecast on 8th June Saturday 6PM. Three contestants Masala Manju, Ganeshand Ashwin Prabhu are in finals.
Please Wait while comments are loading...