Don't Miss!
- News
Peshawar Mosque Blast: ಪೇಶಾವರ ಮಸೀದಿಯಲ್ಲಿ ಆತ್ಮಾಹುತಿ ಬಾಂಬರ್ನ ತುಂಡಾದ ತಲೆ ಪತ್ತೆ!
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮಾತುಕತೆ ವಿನಯ್ ಜೊತೆ' ಹೊಸ ಟಾಕ್ ಶೋ
ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಬಣ್ಣದ ಬದುಕು, ಅವರ ವೈಯಕ್ತಿಕ ಜೀವನ, ದಿನಚರಿ, ಸಿನಿಮಾ ವೃತ್ತಿಯಲ್ಲಿ ಅವರು ಎದುರಿಸಿದ ಸಮಸ್ಯೆಗಳು ಸೇರಿದಂತೆ ಅವರ ಜೀವನದ ಅನೇಕ ಅಂಶಗಳ ಮೇಲೆ ಬೆಳಕು ಚೆಲ್ಲುವ ಹಲವು ಶೋ ಗಳನ್ನು ಕನ್ನಡ ವಾಹಿನಿಗಳು ಈಗಾಗಲೇ ತಂದಿವೆ. ಉದಾಹರಣೆಗೆ ಜೀ ಕನ್ನಡ ವಾಹಿನಿ ಯಲ್ಲಿ ಪ್ರಸಾರ ವಾದ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ. ಈಗ ಇಂತಹ ಸಾಲಿಗೆ ಹೊಸ ಟಾಕ್ ಶೋ ಒಂದು ಸೇರ್ಪಡೆ ಆಗಿದೆ.[ಸ್ಟಾರ್ ಸುವರ್ಣ 'ಸೂಪರ್ ಜೋಡಿ-2: ಈ ಬಾರಿ ಯಾರೆಲ್ಲ ಇದ್ದಾರೆ?]
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಟಾಕ್ ಶೋ ಒಂದು ಆರಂಭವಾಗಿದ್ದು, ಅದರ ಹೆಸರು 'ಮಾತುಕತೆ ವಿನಯ್ ಜೊತೆ'. ಈ ಕಾರ್ಯಕ್ರಮ ನಡೆಸಿಕೊಡುವ ಆ ವಿನಯ್ ಯಾರು, ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಮಾತುಕತೆ ವಿನಯ್ ಜೊತೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಮಾತುಕತೆ ವಿನಯ್ ಜೊತೆ' ಕಾರ್ಯಕ್ರಮವನ್ನು ವಿನಯ್ ಎಂಬುವವರು ನಡೆಸಿಕೊಡುತ್ತಿದ್ದಾರೆ. ಯಾರು ಈ ವಿನಯ್? ತಿಳಿಯಲು ಮುಂದೆ ಓದಿ..

ಮಾತುಕತೆಯ ವಿನಯ್
ವಿನಯ್ ಅವರು ಸಿನಿಮಾ ರಂಗದವರು ಅಲ್ಲ. ಹಾಗೆ ಯಾವುದೇ ಮನರಂಜನಾ ಕ್ಷೇತ್ರಕ್ಕೂ ಸೇರಿದವರಲ್ಲ. ಸಿಂಗಾಪುರ್ ನಲ್ಲಿ ಬ್ಯಾಂಕ್ ಉದ್ಯೋಗಿ ಆಗಿದ್ದ ವಿನಯ್ ಅವರು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕೆಂದು ಈ ಶೋ ಮಾಡಲು ನಿರ್ಧರಿಸಿದರಂತೆ. ಮೊದಲಿಗೆ ಯೂಟ್ಯೂಬ್ ನಲ್ಲಿ ಈ ಟಾಕ್ ಶೋ ಆರಂಭಿಸಿದ್ದರಂತೆ. ಪ್ರಸ್ತುತ ಸುವರ್ಣ ವಾಹಿನಿಗೆ ಈ ಶೋ ನಡೆಸಿಕೊಡುತ್ತಿದ್ದಾರೆ.

ಟಾಕ್ ಶೋ ನಲ್ಲಿ ಹೆಲ್ತ್ ಟಿಪ್ಸ್
ಸ್ಟಾರ್ ಸುವರ್ಣ ವಾಹಿನಿಯಲ್ಲಿನ 'ಮಾತುಕತೆ ವಿನಯ್ ಜೊತೆ' ಶೋ ಸ್ವಲ್ಪ ಡಿಫರೆಂಟ್ ಆಗಿದೆ. ಯಾಕಂದ್ರೆ ಇದೊಂದು ಟಾಕ್ ಆದರೂ ಸಹ ಸೆಲೆಬ್ರಿಟಿಗಳ ಜೊತೆ ಮಾತನಾಡುತ್ತ ಅವರಿಂದ ಹೆಲ್ತ್ ಟಿಪ್ಸ್ ಕೊಡಿಸಲಾಗುತ್ತಿದೆಯಂತೆ. ಸೆಲೆಬ್ರಿಟಿಗಳು ಕೊಡುವ ಹೆಲ್ತ್ ಟಿಪ್ಸ್ ಜನರಿಗೆ ಬಹುಬೇಗ ತಲುಪುತ್ತದೆ ಎಂಬ ಕಾರಣಕ್ಕಾಗಿ ವಿನಯ್ ಈ ಶೋ ಆರಂಭಿಸಿದರಂತೆ.

ಮಾತುಕತೆಯಲ್ಲಿ ಶಿವಣ್ಣ ಮತ್ತು ರಕ್ಷಿತ್ ಶೆಟ್ಟಿ
ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಇತರೆ 24 ಕ್ಕೂ ಹೆಚ್ಚು ಸೆಲೆಬ್ರಿಟಿಗಳು 'ಮಾತುಕತೆ ವಿನಯ್ ಜೊತೆ' ಟಾಕ್ ಶೋ ನಲ್ಲಿ ಭಾಗಿಯಾಗಿದ್ದಾರೆ. ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಟಾಕ್ ಶೋ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.[ಫೋಟೋಗಳು:ಮಾತುಕತೆ ವಿನಯ್ ಜೊತೆ]