For Quick Alerts
  ALLOW NOTIFICATIONS  
  For Daily Alerts

  ಅದ್ಧೂರಿಯಾಗಿ ಪ್ರಾರಂಭಗೊಂಡ ಇಸ್ಮಾರ್ಟ್ ಜೋಡಿ: ಹೇಗಿತ್ತು ಮೊದಲ ಎಪಿಸೋಡ್!

  By ಪ್ರಿಯಾ ದೊರೆ
  |

  ಸ್ಟಾರ್ ಸುವರ್ಣ ವಾಹಿನಿಯ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಅದ್ಧೂರಿಯಾಗಿ ಪ್ರಾರಂಭಗೊಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ತಮ್ಮ ನಿರೂಪಣೆ ಮೂಲಕ ರಿಯಾಲಿಟಿ ಶೋ ನಡೆಸಿಕೊಟ್ಟರು.

  ಮೊದಲ ಎಪಿಸೋಡ್‌ನಲ್ಲಿ ದಂಪತಿಗಳನ್ನು ವೇದಿಕೆ ಮೇಲೆ ಬರಮಾಡಿಕೊಂಡ ಗಣೇಶ್, ಮೊದಲ ದಿನವೇ ಆಡಿಸಿ, ನಲಿಸಿ ಸಂಭ್ರಮಿಸಿದರು. 10 ರೋಮ್ಯಾಂಟಿಕ್ ಜೋಡಿಗಳ ಜೊತೆಗೆ ಇನ್ಮುಂದೆ ಮನರಂಜನೆಯ ಹಬ್ಬವನ್ನು ಗಣೇಶ್ ಪ್ರೇಕ್ಷಕರಿಗೆ ನೀಡಲಿದ್ದಾರೆ.

  ಇಸ್ಮಾರ್ಟ್ ಜೋಡಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಪ್ರಾರಂಭಿಸಿದ್ದು, ಕಳೆದ ಒಂದು ತಿಂಗಳಿನಿಂದ ಶೋ ನೋಡಲು ಕಾಯುತ್ತಿದ್ದ ಪ್ರೇಕ್ಷಕರಿಗೆ ರಸದೌಣ ಉಣಬಡಿಸಿದ್ದಾರೆ. ಅದ್ಧೂರಿ ಸೆಟ್‌ನಲ್ಲಿ ಜೋಡಿಗಳು ಮಿರಮಿರನೇ ಮಿಂಚುತ್ತಿದ್ದರು. ಜೋಡಿಗಳ ಕಾಸ್ಟ್ಯೂಮ್, ಡ್ಯಾನ್ಸ್, ಆಟ ಎಲ್ಲವೂ ಪ್ರೇಕ್ಷಕರಿಗೆ ಮನರಂಜನೆ ನೀಡಿತು.

  ಪತ್ನಿ ಜೊತೆ ಬಂದ ಹರ ಹರ ಮಹಾದೇವ

  ಹರ ಹರ ಮಹದೇವ್ ಸೀರಿಯಲ್ ಮೂಲಕ ಮನೆ ಮಾತಾದ ನಟ ವಿನಯ್ ಗೌಡ, ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋಗೆ ಬಂದಿದ್ದಾರೆ. ಮನೆಯೊಡತಿ ಅಕ್ಷತಾ ಜೊತೆಗೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಬ್ಬರನ್ನು ಒಬ್ಬರು ಬಿಟ್ಟಿರಲಾರದ ಈ ಜೋಡಿ 2008ರಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆಯಾಗಿ ಸುಂದರ ಸಂಸಾರ ನಡೆಸುತ್ತಿರುವ ಈ ದಂಪತಿ ಈಗ ರಿಯಾಲಿಟಿ ಶೋಗೆ ಅದ್ಧೂರಿಯಾಗಿ ಎಂಟ್ರಿಕೊಟ್ಟಿದ್ದಾರೆ. ಈ ಜೋಡಿ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ ಏನೆಲ್ಲಾ ಮಸ್ತಿ ಮಾಡಲಿದೆ ಎಂದು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

  ನಗಿಸುತ್ತಲೇ ಎಂಟ್ರಿ ಕೊಟ್ಟ ಲೂಯೀಸ್ ದಂಪತಿ!

  ಹಾಸ್ಯ ಮಾಡುತ್ತಲೇ ಎಲ್ಲರನ್ನು ನಗಿಸುತ್ತಿರುವ ಕಾಮಿಡಿಯನ್ ರಿಚರ್ಡ್ ಲೂಯೀಸ್ ಅವರು ಯಾರಿಗೆ ಗೊತ್ತಿಲ್ಲ. ಇವರ ಮಗಳು ತಮ್ಮ ತಂದೆ-ತಾಯಿ ಪರಿಚಯ ಮಾಡಿ ವೇದಿಕೆ ಕರೆದಿದ್ದಾರೆ. ಆದರೆ, ಅಮ್ಮ ಹಾಗೂ ಅಪ್ಪನ ರಿಯಲ್ ಲೈಫ್ ವೇದಿಕೆ ಮೇಲೆ ಬಹಿರಂಗಪಡಿಸಿದ್ದು, ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಸಿಂಪಲ್ ಆಗಿ ವೇದಿಕೆಗೆ ಎಂಟ್ರಿ ಕೊಟ್ಟ ರಿಚರ್ಡ್ ಲೂಯಿಸ್ ಹಾಗೂ ಪತ್ನಿ ಹ್ಯಾರಿಯೇಟ್ ತಮ್ಮ ಲವ್ ಸ್ಟೋರಿ ಹೇಳಿಕೊಂಡಿದ್ದಾರೆ.

  https://www.instagram.com/tv/CgFIboBhjDP/?utm_source=ig_web_copy_link

  ಆರ್‌ಜೆ ದಂಪತಿಗಳ ಕಾರು ಬಾರು!

  ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಬಂದಿದ್ದ ಪುನೀತಾ ಆಚಾರ್ಯ ಈಗ ಸ್ಟಾರ್ ಸುವರ್ಣಗೆ ಎಂಟ್ರಿಕೊಟ್ಟಿದ್ದಾರೆ. ಆರ್‌ಜೆ ಜೋಡಿಗಳಾದ ಪುನೀತಾ ಆಚಾರ್ಯ ಹಾಗೂ ಶ್ರೀರಾಮ್ ಸುಳ್ಯ ಇಸ್ಮಾರ್ಟ್ ಜೋಡಿ ವೇದಿಕೆಯಲ್ಲಿ ಮಿಂಚಿದ್ದಾರೆ. ಪುನೀತಾ ಆಚಾರ್ಯ ಭರತನಾಟ್ಯ, ಕುಚುಪುಡಿ, ಕಥಕ್, ಯಕ್ಷಗಾನ ಕಲಾವಿದೆ. ಇಸ್ಮಾರ್ಟ್ ಜೋಡಿ ವೇದಿಕೆಗೆ ಎಂಟ್ರಿ ಕೊಡುವಾಗಲೂ ಕಥಕ್ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಪುನೀತಾ ಮಾತುಗಳಿಗೆ ಗಣೇಶ್ ಅವರು ಫುಲ್ ಫಿದಾ ಆಗಿದ್ದಾರೆ.

  ರೀಲ್ಸ್ ಮಾಡುವ ರಿಯಲ್ ಜೋಡಿಗಳು!

  ರಿಯಾಲಿಟಿ ಶೋಗಳಲ್ಲಿ ಸೋಶಿಯಲ್ ಮೀಡಿಯಾದಿಂದ ಫೇಮಸ್ ಆದ ಒಬ್ಬರಾದರೂ ಇರಲೇಬೇಕು. ಈಗ ಇಸ್ಮಾರ್ಟ್ ಜೋಡಿ ಕಾರ್ಯಕ್ರಮಕ್ಕೆ ಹೆಜ್ಜೆ ಇಟ್ಟಿದೆ ಮೌಲ್ಯ ಹಾಗೂ ಪ್ರತೀಕ್ ಜೋಡಿ. ಇವರು ಮೊದಲ ಬಾರಿಗೆ ರಿಯಾಲಿಟಿ ಶೋಗೆ ಬಂದಿದ್ದು, ಇಷ್ಟು ದಿನ ರೀಲ್ಸ್ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ಮಾಡುತ್ತಿದ್ದ ಈ ಜೋಡಿ ಇನ್ಮುಂದೆ ರಿಯಲ್ ಆಗಿ ರೀಲ್ಸ್ ಮಾಡಬೇಕಿದೆ. ಇನ್ನುಳಿದ ಜೋಡಿಗಳನ್ನು ಇಂದಿನ ಎಪಿಸೋಡ್ ನಲ್ಲಿ ಪರಿಚಯಿಸಲಾಗುತ್ತೆ. ಇದನ್ನು ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.

  English summary
  Star Suvarna Reality Show Ismart Jodi First Episode Was Kick Started, Know More
  Sunday, July 17, 2022, 20:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X