»   » ದಾಖಲೆ ಬೆಲೆಗೆ ಮಾರಾಟವಾದ 'ಬಚ್ಚನ್' ಟಿವಿ ರೈಟ್ಸ್

ದಾಖಲೆ ಬೆಲೆಗೆ ಮಾರಾಟವಾದ 'ಬಚ್ಚನ್' ಟಿವಿ ರೈಟ್ಸ್

Posted By:
Subscribe to Filmibeat Kannada
Sudeep's Bachchan TV satellite rights sold for fancy price
ಮುಹೂರ್ತ ಹಂತದಿಂದಲೂ ಭಾರೀ ಸುದ್ದಿಯಲ್ಲಿರುವ ಸುದೀಪ್ ಅಭಿನಯದ ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರದ ಟಿವಿ ರೈಟ್ಸ್ ಹೆಸರಾಂತ ಟಿವಿ ವಾಹಿನಿಯ ಪಾಲಾಗಿದೆ.

ಸುದೀಪ್ ಅಭಿನಯದ ಇದುವರೆಗಿನ ಯಾವ ಚಿತ್ರಕ್ಕೂ ಬಾರದ ಟಿವಿ ರೈಟ್ಸ್ ಮೊತ್ತ 'ಬಚ್ಚನ್' ಚಿತ್ರಕ್ಕೆ ಬಂದಿದೆ. ಸುಮಾರು 3.33 ಕೋಟಿ ರೂಪಾಯಿಗೆ ಟಿವಿ ವಾಹಿನಿ ಚಿತ್ರದ ಸ್ಯಾಟಿಲೈಟ್ ಹಕ್ಕನ್ನು ಖರೀದಿಸಿದೆ ಎಂದು ಬೆಂಗಳೂರು ಮಿರರ್ ಪತ್ರಿಕೆ ವರದಿ ಮಾಡಿದೆ.

ಈಗ ಚಿತ್ರದ ಅಭೂತಪೂರ್ವ ಯಶಸ್ಸು ಸುದೀಪ್ ಚಿತ್ರದ ಸ್ಯಾಟಿಲೈಟ್ ಹಕ್ಕು ಇಷ್ಟು ಮೊತ್ತಕ್ಕೆ ಮಾರಾಟವಾಗಲು ಪ್ರಮುಖ ಕಾರಣ. ಟಿವಿ ರೈಟ್ಸ್ ಯಾವ ವಾಹಿನಿಯ ಪಾಲಾಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

ಬಚ್ಚನ್ ಚಿತ್ರದ ತಾರಾಗಣದಲ್ಲಿ ಸುದೀಪ್, ತುಲಿಪ್ ಜೋಶಿ, ಭಾವನ, ಪರುಲ್ ಯಾದವ್, ಆಶಿಶ್ ವಿದ್ಯಾರ್ಥಿ, ರವಿಶಂಕರ್, ಪ್ರದೀಪ್ ರಾವತ್ ಇದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದು, ತೆಲುಗು ಚಿತ್ರರಂಗದ ಹೆಸರಾಂತ ನಟ ಜಗಪತಿ ಬಾಬು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಚಿತ್ರಗಳಲ್ಲಿ ಒಂದೆರಡು ಬಾರಿ ನಟಿಸಿದ್ದ ಡೈಸಿ ಶಾ ಐಟಂ ಸಾಂಗಿನಲ್ಲಿ ಸುದೀಪ್ ಮತ್ತು ರವಿಶಂಕರ್ ಜೊತೆ ಹೆಜ್ಜೆ ಹಾಕಲಿದ್ದಾರೆ. ರವಿ ವರ್ಮಾ ಸಾಹಸ ನಿರ್ದೇಶನದ ಸ್ಟಂಟ್ ದೃಶ್ಯದ ಚಿತ್ರೀಕರಣದ ವೇಳೆ ಖಳನಟ ರವಿಶಂಕರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರಕ್ಕೆ ಸಂಭಾಷಣೆ ಬರೆದ ಪ್ರಸನ್ನ ಈ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ.

ಬಚ್ಚನ್ ಚಿತ್ರದ ಗ್ಯಾಲರಿ ಮತ್ತು ಫೋಟೋ ಫ್ಯೂಚರ್ ಲೇಖನ.

English summary
Sudeep's forthcoming film Bachchan has been sold to a leading television for a fancy price.Bangalore Mirror has reported that Sudeep's Bachchan has been acquired by a television channel for Rs 3.33 crore.
Please Wait while comments are loading...