For Quick Alerts
  ALLOW NOTIFICATIONS  
  For Daily Alerts

  ಸುದೀಪ್ ನನಗೆ ರೋಲ್ ಮಾಡೆಲ್ ಅಂದರು ಈ ನಟಿ. ಯಾರವರು ?

  By Naveen
  |

  ನಟ ಸುದೀಪ್ ಅಭಿನಯವನ್ನು ಬರೀ ಕನ್ನಡದ ಮಂದಿ ಮಾತ್ರವಲ್ಲ ಪರಭಾಷೆಯವರು ಸಹ ಕೊಂಡಾಡಿದ್ದಾರೆ. ಅದೇ ಕಾರಣದಿಂದ ಕನ್ನಡದ ಜೊತೆಗೆ ಸುದೀಪ್ ಬೇರೆ ಬೇರೆ ಭಾಷೆಯ ದೊಡ್ಡ ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಸುದೀಪ್ ಆಕ್ಟಿಂಗ್ ನಲ್ಲಿ ಅನೇಕರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಈಗ ಕನ್ನಡ ಒಬ್ಬ ನಟಿ ಕೂಡ ಅದನ್ನೇ ಹೇಳಿದ್ದಾರೆ.

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟಿ ರಾಗಿಣಿ ದ್ವಿವೇದಿ ಮತ್ತು ರಕ್ಷಿತಾ ಆಗಮಿಸಿದ್ದರು. ಈ ವೇಳೆ ಶಿವರಾಜ್ ಕುಮಾರ್ ''ನಿಮಗೆ ಆಕ್ಟಿಂಗ್ ನಲ್ಲಿ ರೋಲ್ ಮಾಡೆಲ್ ಯಾರು? ಎಂದು ರಾಗಿಣಿಗೆ ಹೇಳಿದರು. ಆಗ ರಾಗಿಣಿ ಸುದೀಪ್ ಹೆಸರು ತೆಗೆದುಕೊಂಡರು. ಜೊತೆಗೆ ಸುದೀಪ್ ಒಬ್ಬ ಅದ್ಬುತ ನಟ ಎಂದು ಹೇಳಿದರು. ಉಳಿದಂತೆ ಗ್ಲಾಮರ್ ಮತ್ತು ಫಿಗರ್ ನಲ್ಲಿ ರಾಗಿಣಿಗೆ ರಕ್ಷಿತಾ ಅವರೇ ರೋಲ್ ಮಾಡಲ್ ಅಂತೆ.

  ಇನ್ನು ಇದೇ ಕಾರ್ಯಕ್ರಮದ Rapid ಫೈಯರ್ ರೌಂಡ್ ನಲ್ಲಿ ಶಿವಣ್ಣ ''ಸುದೀಪ್, ಯಶ್, ಲೂಸ್ ಮಾದ ಯೋಗಿ ಈ ಮೂವರಲ್ಲಿ ನೀವು ಯಾರನ್ನು ಮದುವೆಯಾಗಲು ಇಷ್ಟ ಪಡುತ್ತೀರಾ..? ಯಾರ ಜೊತೆ ಡೇಟಿಂಗ್ ಮಾಡುತ್ತೀರಾ ಮತ್ತು ಯಾರನ್ನು ಕೊಲೆ ಮಾಡುತ್ತೀರಾ? ಅಂತ ಪ್ರಶ್ನೆ ಕೇಳಿದರು. ಆಗ ರಾಗಿಣಿ ''ನಾನು ಸುದೀಪ್ ಜೊತೆಗೆ ಮದುವೆ ಆಗುತ್ತೇನೆ ಅಂತ ಹೇಳಿದರು.

  ಅದೇ ಪ್ರಶ್ನೆ, ಅದೇ ಉತ್ತರ, ಮತ್ತೆ ಸುದೀಪ್ ಹೆಸರು ತೆಗೆದ ರಾಗಿಣಿ ಅದೇ ಪ್ರಶ್ನೆ, ಅದೇ ಉತ್ತರ, ಮತ್ತೆ ಸುದೀಪ್ ಹೆಸರು ತೆಗೆದ ರಾಗಿಣಿ

  ಅಂದಹಾಗೆ, ನಟ ಸುದೀಪ್ ಮತ್ತು ರಾಗಿಣಿ ಅವರ ಜೋಡಿ ತೆರೆ ಮೇಲೆ ತುಂಬ ಮುದ್ದು ಮುದ್ದಾಗಿ ಕಾಣುತ್ತದೆ. ಅಂದಹಾಗೆ, ಈ ಹಿಂದೆ 'ಕೆಂಪೇಗೌಡ' ಮತ್ತು 'ವೀರಮದಕರಿ' ಸಿನಿಮಾ ಮಾಡಿದ್ದ ಈ ಜೋಡಿ ಮತ್ತೆ ಹ್ಯಾಟ್ರಿಕ್ ಸಿನಿಮಾಗಾಗಿ ಒಂದಾಗುತ್ತಾರ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಇದೆ. ಎರಡು ಸೂಪರ್ ಹಿಟ್ ಸಿನಿಮಾ ನೀಡಿದ್ದ ಈ ಜೋಡಿ ಮತ್ತೆ ಸಿನಿಮಾ ಮಾಡಬೇಕು ಎನ್ನುವುದು ಎಲ್ಲರ ಆಸೆ.

  English summary
  Sudeep is my acting role model says Kannada actress Ragini Dwivedi in star suvarna channel's popular show 'No1 Yaari with Shivanna' program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X