»   » ಕನ್ನಡದ ಈ ನಟಿ ಸುದೀಪ್ ರವರ ಕ್ರೇಜಿ ಫ್ಯಾನ್ ಅಂತೆ.!

ಕನ್ನಡದ ಈ ನಟಿ ಸುದೀಪ್ ರವರ ಕ್ರೇಜಿ ಫ್ಯಾನ್ ಅಂತೆ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ರವರ ಆ ಸ್ಟೈಲ್, ಲುಕ್ ನೋಡ್ತಿದ್ರೆ.... ಯಾವ ಹುಡುಗಿ ತಾನೇ ಕ್ಲೀನ್ ಬೌಲ್ಡ್ ಆಗಲ್ಲ ಹೇಳಿ....

ಸುದೀಪ್ ರವರ ಮ್ಯಾನರಿಸಂ ನೋಡಿ ಫಿದಾ ಆಗಿರುವ ಅಸಂಖ್ಯಾತ ಹುಡುಗಿಯರ ಪೈಕಿ ಕನ್ನಡ ನಟಿ ಭಾವನಾ ರಾವ್ ಕೂಡ ಒಬ್ಬರು. 'ಕಿಚ್ಚ ಸುದೀಪ್ ಅಂದ್ರೆ ನನಗೆ ಅಚ್ಚುಮೆಚ್ಚು. ನಾನು ಅವರ ದೊಡ್ಡ ಫ್ಯಾನ್' ಎಂದು ಸ್ವತಃ ಭಾವನಾ ರಾವ್ ಹೇಳಿಕೊಂಡಿದ್ದಾರೆ. ಅದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ...

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾವನಾ ರಾವ್

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಸ್ಪರ್ಶ' ರೇಖಾ, ಗಾಯಕ ರಾಜೇಶ್ ಕೃಷ್ಣನ್ ಜೊತೆ 'ಗಾಳಿಪಟ' ಭಾವನಾ ಕೂಡ ಭಾಗವಹಿಸಿದ್ರು.

ಒಂದ್ವೇಳೆ ಭಾವನಾ ಹೀರೋ ಆದರೆ....

''ಒಂದು ರಾತ್ರಿ ನೀವು ಕನ್ನಡದ ಹೀರೋ ಆದರೆ, ಯಾವ ಹೀರೋ ಆಗ್ತೀರಾ.?'' ಅಂತ ನಿರೂಪಕ ಅಕುಲ್ ಬಾಲಾಜಿ ಕೇಳಿದಾಗ, ಹಿಂದೆ ಮುಂದೆ ಯೋಚನೆ ಮಾಡದೆ ಭಾವನಾ ಥಟ್ ಅಂತ ಕೊಟ್ಟ ಉತ್ತರ 'ಸುದೀಪ್'. ಯಾಕಂದ್ರೆ, ಸುದೀಪ್ ಅಂದ್ರೆ ಅವರಿಗೆ ಅಷ್ಟು ಇಷ್ಟ.

ಯಾರ ಜೊತೆ ನಟಿಸಬೇಕು.?

''ಈ ಸ್ಟಾರ್ಸ್ ಜೊತೆ ಆಕ್ಟ್ ಮಾಡುವ ಚಾನ್ಸ್ ಬಂದರೆ, ಯಾರನ್ನ ಆಯ್ಕೆ ಮಾಡಿಕೊಳ್ಳುತ್ತೀರಾ'' ಎಂದು ಭಾವನಾ ರವರನ್ನ ಅಕುಲ್ ಬಾಲಾಜಿ ಕೇಳಿದರು. ಜೊತೆಗೆ, ''ದರ್ಶನ್, ಉಪೇಂದ್ರ, ಸುದೀಪ್, ಯಶ್'' ಅಂತ ನಾಲ್ಕು ಆಯ್ಕೆಗಳನ್ನ ನೀಡಿದರು.

ಭಾವನಾ ಆಯ್ಕೆ....

ನಾಲ್ಕು ಹೀರೋಗಳ ಪೈಕಿ ಭಾವನಾ ರವರ ಅಯ್ಕೆ 'ಸುದೀಪ್' ಆಗಿತ್ತು. ಅದಕ್ಕೆ ಭಾವನಾ ಕೊಟ್ಟ ಕಾರಣ, ''ನನ್ನ ಫೇವರಿಟ್ ಹೀರೋ ಅಂದ್ರೆ ಸುದೀಪ್. 'ಹುಚ್ಚ' ಸಿನಿಮಾ ನೋಡಿದಾಗಿನಿಂದಲೂ, ನಾನು ಅವರನ್ನ ತುಂಬಾ ಅಡ್ಮೈರ್ ಮಾಡುತ್ತಿದ್ದೇನೆ. ನಾನು ಅವರ ದೊಡ್ಡ ಫ್ಯಾನ್. ಉಸಿರೇ ಉಸಿರೇ ಹಾಡು ನೋಡಿದ್ಮೇಲೆ ನಾನು ಅವರಿಗೆ ಫ್ಲಾಟ್ ಆಗ್ಬಿಟ್ಟೆ'' ಎಂದರು ಭಾವನಾ ರಾವ್.

English summary
Sudeep is my Favourite Actor says Kannada Actress Bhavana Rao in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada