»   » ನಂಬರ್ 1 ಯಾರಿ ವಿತ್ ಶಿವಣ್ಣ ಶೋ ಗೆ ಬಂದ ಸುದೀಪ್

ನಂಬರ್ 1 ಯಾರಿ ವಿತ್ ಶಿವಣ್ಣ ಶೋ ಗೆ ಬಂದ ಸುದೀಪ್

Posted By:
Subscribe to Filmibeat Kannada
ನಂಬರ್ 1 ಯಾರಿ ವಿತ್ ಶಿವಣ್ಣ ಶೋ ಗೆ ಬಂದ ಸುದೀಪ್ | Filmibeat Kannada

ಸದ್ಯ ಕನ್ನಡ ಪ್ರೇಕ್ಷಕರಿಗೆ ವಾರಾಂತ್ಯದಲ್ಲಿ ಮನೆಯಲ್ಲಿ ಕುಳಿತು ಮನೋರಂಜನೆ ಪಡೆಯೋದಕ್ಕೆ ಸಾಕಷ್ಟು ಅವಕಾಶಗಳಿವೆ. ಒಂದು ಕಡೆ ಪವರ್ ಸ್ಟಾರ್ ಎಂಟರ್ಟೈನ್ ಮಾಡಿದ್ರೆ ಮತ್ತೊಂದು ಕಡೆ ಹ್ಯಾಟ್ರಿಕ್ ಹೀರೋ ಸ್ನೇಹಿತರ ಜೊತೆ ಕೂತು ಹರಟೆ ಹೊಡೆಯುತ್ತಾ ನೋಡುಗರಿಗೆ ಮಜಾ ಕೊಡುತ್ತಾರೆ. ನಂಬರ್ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮ ದಿನದಿಂದ ದಿನಕ್ಕೆ ತುಂಬಾನೇ ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ.

ಪ್ರತಿ ವಾರ ನಂಬರ್ 1 ಯಾರಿ ಕಾರ್ಯಕ್ರಮ ನೋಡಲು ಪ್ರೇಕ್ಷಕರಿಗೆ ಕಾರಣಗಳು ಸಿಗುತ್ತಲೇ ಇರುತ್ತದೆ. ಇನ್ನು ಮೂರು ವಾರಗಳ ನಂತರ ಪ್ರಸಾರ ಆಗುವ ನಂಬರ್ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮವನ್ನ ನೀವು ಮಿಸ್ ಮಾಡಿಕೊಳ್ಳುವ ಆಗಿಲ್ಲ. ಯಾಕಂದ್ರೆ ಸ್ಟಾರ್ ಸುವರ್ಣ ವಾಹಿನಿಯವರು ನಿಮಗಾಗಿ ಇಬ್ಬರು ಸ್ಪೆಷಲ್ ಗೆಸ್ಟ್ ಗಳನ್ನ ಕರೆತಂದಿದ್ದಾರೆ.

ಸಿನಿಮಾರಂಗದಲ್ಲಿ ಸಾಕಷ್ಟು ಜನರು ಶೋನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಸ್ಪೆಷಲ್ ಎನ್ನಿಸುವ ವ್ಯಕ್ತಿ ಯಾರು ಎನ್ನುವ ಯೋಚನೆ ಈಗಾಗಲೇ ನಿಮ್ಮ ತಲೆಯಲ್ಲಿ ಮೂಡಿರುತ್ತೆ. ಇತ್ತೀಚಿನ ದಿನಗಳಲ್ಲಿ ಶಿವಣ್ಣ ಹಾರ್ಟ್ ಫೆವರೆಟ್ ಆಗಿರುವ ಕಿಚ್ಚ ಸುದೀಪ್ ನಂಬರ್ 1 ಯಾರಿ ಶೋನಲ್ಲಿ ಭಾಗಿ ಆಗಲಿದ್ದಾರೆ. ಹಾಗಾದರೆ ಕಿಚ್ಚ ಜೊತೆ ಕಾರ್ಯಕ್ರಮದಲ್ಲಿ ಯಾರು ಇರುತ್ತಾರೆ? ಸುದೀಪ್ ಕಾರ್ಯಕ್ರಮ ಪ್ರಸಾರ ಆಗುವ ದಿನಾಂಕ ಯಾವುದು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನಂಬರ್ 1 ಯಾರಿ ಕಾರ್ಯಕ್ರಮದಲ್ಲಿ ಕಿಚ್ಚ

ನಂಬರ್ 1 ಯಾರಿ ಶೋ ಆರಂಭ ಆದಾಗಿನಿಂದಲೂ ಸುದೀಪ್ ಕಾರ್ಯಕ್ರಮದಲ್ಲಿ ಭಾಗಿ ಆದರೆ ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯವನ್ನ ಅಭಿಮಾನಿಗಳು ವ್ಯಕ್ತ ಪಡಿಸಿದ್ದರು. ಅದರಂತೆ ಈ ಕಾಂಬಿನೇಶನ್ ಬೆಳ್ಳಿತೆರೆಗೂ ಮುಂಚೆಯೇ ಕಿರುತೆರೆಯಲ್ಲಿ ಬರಲಿದೆ.

ಕಿಚ್ಚನ ಜೊತೆಯಾದ ಯಾರಿ ಯಾರು?

ನಂಬರ್ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಸುದೀಪ್ ಜೊತೆ ಅವರ ಆಪ್ತ ಸ್ನೇಹಿತರಾಗಿ ನಿರ್ದೇಶಕ ಜೋಗಿ ಪ್ರೇಮ್ ಕೂಡ ಭಾಗಿ ಆಗುತ್ತಿದ್ದಾರೆ. ಸುದೀಪ್ -ಪ್ರೇಮ್ ಸಾಕಷ್ಟು ದಿನಗಳಿಂದ ಸ್ನೇಹಿತರಾಗಿದ್ದು ಇಬ್ಬರು ಯಾರಿಗಳು ಒಂದೇ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಪ್ರಸಾರ

ಸುದೀಪ್ 'ನಂಬರ್ 1 ಯಾರಿ' ಕಾರ್ಯಕ್ರಮದಲ್ಲಿ ಹೇಗೆ ಮಾತನಾಡಿದರು. ಶೋ ಹೇಗಿತ್ತು? ಪ್ರೇಮ್, ಸುದೀಪ್ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಇದರ ಬಗ್ಗೆ ಸಂಪೂರ್ಣವಾಗಿ ಕಣ್ಣುತುಂಬಿಕೊಳ್ಳಲು ನೀವು ಏಪ್ರಿಲ್ 8 ರ ವರೆಗೂ ಕಾಯಬೇಕು. ಏಪ್ರಿಲ್ 8 ರಂದು ಕಾರ್ಯಕ್ರಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಮೊಟ್ಟ ಮೊದಲ ಬಾರಿಗೆ ಸಂದರ್ಶನ

ಶಿವರಾಜ್ ಕುಮಾರ್ ಈ ಹಿಂದೆ ಸುದೀಪ್ ನಡಸಿಕೊಡುವ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ ಶಿವಣ್ಣ ನಿರೂಪಣೆ ಮಾಡುವಂತಹ ಶೋನಲ್ಲಿ ಭಾಗಿ ಆಗುತ್ತಿದ್ದಾರೆ.

ದಿ ವಿಲನ್ ಸಿನಿಮಾ ಟೀಂ

ಶಿವಣ್ಣನ ಶೋ ನಲ್ಲಿ ಸುದೀಪ್ ಹಾಗೂ ಪ್ರೇಮ್ ಭಾಗಿ ಆಗುವುದರ ಮೂಲಕ 'ನಂಬರ್ 1 ಯಾರಿ' ಕಾರ್ಯಕ್ರಮದಲ್ಲಿ 'ದಿ ವಿಲನ್' ಸಿನಿಮಾ ಚಿತ್ರತಂಡ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಮೂಲಕ ಅಭಿಮಾನಿಗಳಿಗೆ ಏನಾದರೂ ವಿಶೇಷತೆಯನ್ನ ನೀಡುತ್ತಾರಾ ಎನ್ನುವುದನ್ನ ಕಾದು ನೋಡಬೇಕು.

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆದ ರಮೇಶ್

English summary
Kannada actor Sudeep participate in number 1 Yaari with Shivanna program. Director Jogi Prem is also involved in Sudeep. This program will air on April 8 on Star Suvarna kannada

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X