Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಸುದೀಪ್ ಸಂಭಾವನೆ ಎಷ್ಟು?
Recommended Video
ಬಿಗ್ ಬಾಸ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕ ಅಂದ್ರೆ ಬಾಲಿವುಡ್ ನಟ ಸಲ್ಮಾನ್ ಖಾನ್. 13ನೇ ಆವೃತ್ತಿ ನಡೆಸಿಕೊಡುತ್ತಿರುವ ಸಲ್ಲು ಭಾಯ್ ಒಂದು ವಾರಕ್ಕೆ 31 ಕೋಟಿ ಚಾರ್ಜ್ ಮಾಡ್ತಾರಂತೆ. ಅಂದ್ರೆ, ಒಟ್ಟು ಹದಿಮೂರು ವಾರ ಸಲ್ಲು ನಿರೂಪಣೆ ಮಾಡುತ್ತಿದ್ದು, ಒಟ್ಟಾರೆ ಸೀಸನ್ ಗೆ 400 ಕೋಟಿ ಸಂಭಾವನೆ ಪಡೆಯುತ್ತಾರಂತೆ.
ಕನ್ನಡದಲ್ಲಿ ಬಿಗ್ ಬಾಸ್ ನಿರೂಪಣೆ ಮಾಡುವ ಸುದೀಪ್ ಕೂಡ ದುಬಾರಿ ಮೊತ್ತವನ್ನ ಸಂಭಾವನೆಯಾಗಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಅಧಿಕೃತವಾಗಿ ಎಲ್ಲಿಯೂ ನಿಖರವಾದ ಮಾಹಿತಿ ಕುರಿತು ಚರ್ಚೆ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ.
ಬಿಗ್
ಬಾಸ್-13
ಶೋನಿಂದ
ಸಲ್ಮಾನ್
ಗೆ
ಸಿಗುವ
ಸಂಭಾವನೆ
400
ಕೋಟಿ.!
ಆದರೂ, ಬಿಗ್ ಬಾಸ್ ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಅವರು ಐದು ಆವೃತ್ತಿಗಳಿಗೆ ಒಪ್ಪಂದ ಮಾಡಿಕೊಂಡು, ನಿರೂಪಣೆ ಮಾಡುತ್ತಿದ್ದಾರಂತೆ. ಹಾಗಾದ್ರೆ, ಒಂದು ಆವೃತ್ತಿಗೆ ಸುದೀಪ್ ಪಡೆಯುವ ಸಂಭಾವನೆ ಎಷ್ಟು? 7ನೇ ಆವೃತ್ತಿಯಲ್ಲಿ ಸುದೀಪ್ ರೆಮ್ಯೂನರೇಷನ್ ಎಷ್ಟು? ಮುಂದೆ ಓದಿ....

ಐದು ವರ್ಷಕ್ಕೆ ಅಗ್ರಿಮೆಂಟ್
ಕಿಚ್ಚ ಸುದೀಪ್ ಮತ್ತು ಬಿಗ್ ಬಾಸ್ ನಡುವೆ ಐದು ವರ್ಷಗಳ ಅಂಗ್ರಿಮೆಂಟ್ ಆಗಿದೆ. ಐದು ಆವೃತ್ತಿಗಳಿಗೆ ನಿರೂಪಣೆಗಾಗಿ ಸುದೀಪ್ ದೊಡ್ಡ ಮೊತ್ತವನ್ನ ಪಡೆದುಕೊಂಡಿದ್ದಾರಂತೆ. ಮೂಲಗಳ ಪ್ರಕಾರ ಐದು ಆವೃತ್ತಿಗಾಗಿ ಸುದೀಪ್ 20 ಕೋಟಿ ಸಂಭಾವನೆ ಸ್ವೀಕರಸಿದ್ದಾರೆ ಎನ್ನಲಾಗಿದೆ.
ಬಿಗ್
ಬಾಸ್
ಕನ್ನಡ
ಶೋ
ಕುರಿತು
ಸ್ಪಷ್ಟನೆ
ನೀಡಿದ
ನಟಿ
ಪಾರೂಲ್

ಒಂದು ಆವೃತ್ತಿಗೆ ಎಷ್ಟು?
ವಾರದಲ್ಲಿ ಎರಡು ಸಂಚಿಕೆಯನ್ನ ಸುದೀಪ್ ನಡೆಸಿಕೊಡುತ್ತಾರೆ. ಶನಿವಾರ 'ಕಿಚ್ಚನ ಜೊತೆ ವಾರದ ಕಥೆ' ಹಾಗೂ ಭಾನುವಾರ 'ಸಂಡೆ ಸ್ಪೆಷಲ್ ವಿತ್ ಸುದೀಪ್' ಎಪಿಸೋಡ್ ಮಾಡಿಕೊಡುತ್ತಾರೆ. ಐದು ಆವೃತ್ತಿಗೆ 20 ಕೋಟಿ ಅಂದ್ರೆ ಒಂದು ಆವೃತ್ತಿಗೆ 4 ಕೋಟಿ ಚಾರ್ಜ್ ಮಾಡ್ತಾರೆ ಎಂದು ಹೇಳಲಾಗುತ್ತೆ.
'ಬಿಗ್
ಬಾಸ್'
ಮನೆಗೆ
ಹೋಗುವ
ಸ್ಪರ್ಧಿಗಳ
ಪಟ್ಟಿ
ಇದೇನಾ?

ಯಾವಾಗ ಡೀಲ್ ಮುಗಿಯುತ್ತೆ?
ಕಳೆದ ಆರು ಆವೃತ್ತಿಗಳನ್ನ ನಿರೂಪಣೆ ಮಾಡಿರುವ ಸುದೀಪ್ ಈಗ 7ನೇ ಆವೃತ್ತಿಗೆ ಸಜ್ಜಾಗಿದ್ದಾರೆ. 2015 ರಿಂದ ಐದು ವರ್ಷಗಳ ಡೀಲ್ ಆಗಿದ್ದು, 2020ರ ವರೆಗೂ ಬಿಗ್ ಬಾಸ್ ಗೆ ಸುದೀಪ್ ಕಾಲ್ ಶೀಟ್ ಕೊಟ್ಟಿದ್ದಾರಂತೆ. ಹಾಗ್ನೋಡಿದ್ರೆ, 2020ರ ಆವೃತ್ತಿ ಬಳಿಕ ಸುದೀಪ್ ಸಂಭಾವನೆ ಮತ್ತಷ್ಟು ಹೆಚ್ಚಾಗಬಹುದು.

ಸುದೀಪ್ ಬಿಟ್ಟರೇ ಆಯ್ಕೆ ಕಾಣುತ್ತಿಲ್ಲ
ಕಿಚ್ಚ ಸುದೀಪ್ ಅವರನ್ನ ಬಿಟ್ಟರೇ ಬಿಗ್ ಬಾಸ್ ನಿರೂಪಕ ಸ್ಥಾನಕ್ಕೆ ಕನ್ನಡದಲ್ಲಿ ಬೇರೆ ಯಾರೂ ಆಯ್ಕೆ ಕಾಣುತ್ತಿಲ್ಲ. ಸುದೀಪ್ ಅವರಿಗೂ ಬಿಗ್ ಬಾಸ್ ಕುರಿತು ಒಲುವು ಹೆಚ್ಚಿದೆ. ಎಲ್ಲ ಭಾಷೆಯ ಬಿಗ್ ಬಾಸ್ ನಿರೂಪಕರ ಪೈಕಿ ಸುದೀಪ್ ಅತ್ಯುತ್ತಮ ನಿರೂಪಕ ಎಂದು ಹೇಳಲಾಗುತ್ತೆ. ಹಾಗಾಗಿ, ಸುದೀಪ್ ಅವರ ಬೇಡಿಕೆ ಎಷ್ಟಿದ್ದರೂ ವಾಹಿನಿ ಅವರು ನೀಡಲು ಸಿದ್ಧರಿದ್ದಾರೆ ಎನ್ನಲಾಗಿದೆ.
'ಬಿಗ್
ಬಾಸ್
ಕನ್ನಡ
7'ನಲ್ಲಿ
ಕಾಮನ್
ಮ್ಯಾನ್
ಗಳಿಗೆ
ಅವಕಾಶ
ನೀಡಿಲ್ಲ,
ಏಕೆ?

ಕಿಚ್ಚನ ಕೈಯಲ್ಲಿ ಸಾಲು ಸಾಲು ಸಿನಿಮಾ
ಕನ್ನಡದ ಬಹುಬೇಡಿಕೆಯ ನಟರಲ್ಲಿ ಸುದೀಪ್ ಮೊದಲ ಸಾಲಿನಲ್ಲಿ ಇರ್ತಾರೆ. ಕನ್ನಡ, ತೆಲುಗು ಹಾಗೂ ಇತರೆ ಭಾಷೆಯಲ್ಲಿ ನಟಿಸುವ ಸುದೀಪ್ ಕೈತುಂಬ ಸಿನಿಮಾಗಳನ್ನ ಇಟ್ಟುಕೊಂಡಿದ್ದಾರೆ. ಹೀಗೆ ಎಷ್ಟೇ ಬ್ಯುಸಿ ಇದ್ದರೂ ಬಿಗ್ ಬಾಸ್ ಗಾಗಿ ಸಮಯ ಬಿಡುವು ಮಾಡಿಕೊಳ್ಳುತ್ತಾರೆ ಸುದೀಪ್. ಈಗಲೂ ಕೋಟಿಗೊಬ್ಬ 3, ದಬಾಂಗ್ 3 ಚಿತ್ರಗಳಲ್ಲಿ ನಟಿಸುತ್ತಿದ್ದು, ಬಿಲ್ಲಾ ರಂಗ ಬಾಷಾ ಚಿತ್ರವನ್ನ ಘೋಷಣೆ ಮಾಡಿದ್ದಾರೆ.