For Quick Alerts
  ALLOW NOTIFICATIONS  
  For Daily Alerts

  ರವಿಚಂದ್ರನ್ ಎದುರಲ್ಲಿ ಅವರದ್ದೇ ಹಾಡು ಹೇಳಿದ ಸುದೀಪ್

  |
  ವೇದಿಕೆ ಮೇಲೆ ಸುದೀಪ್ ಗುಟ್ಟು ಬಿಚ್ಚಿಟ್ಟ ರವಿಚಂದ್ರನ್ | FILMIBEAT KANNADA

  ಕಿಚ್ಚ ಸುದೀಪ್ ಅವರನ್ನ ಅಭಿನಯ ಚಕ್ರವರ್ತಿ ಎನ್ನುತ್ತಾರೆ. ಈ ಟೈಟಲ್ ಗೆ ತಕ್ಕ ಅಭಿನಯ ನೋಡಿದ್ದೀವಿ. ಹಾಗೆ, ನಟನೆ ಜೊತೆ ಸುದೀಪ್ ಗಾಯಕರೂ ಹೌದು. ಹಲವು ಹಾಡುಗಳು ಅವರ ಕಂಠದಲ್ಲಿ ಮೂಡಿಬಂದಿದೆ.

  ಅಲ್ಲೊಂದು ಇಲ್ಲೊಂದು ವೇದಿಕೆಯಲ್ಲಿ ಲೈವ್ ಹಾಡು ಕೂಡ ಕೇಳಿರಬಹುದು. ಇದೀಗ, ಸುದೀಪ್ ಅವರ ಲೈವ್ ಹಾಡು ಕೇಳುವ ಅವಕಾಶ ಮತ್ತೆ ಸಿಕ್ಕಿದೆ. ಯುಗಾದಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಪಡ್ಡೆಹುಲಿ' ಚಿತ್ರದ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಶೋನಲ್ಲಿ ಸುದೀಪ್ ಹಾಡು ಹೇಳಿದ್ದಾರೆ.

  ಯುಗಾದಿ ಹಬ್ಬಕ್ಕೆ ಸುದೀಪ್ ಪತ್ನಿ ಕೊಡ್ತಾರಂತೆ ಸ್ಪೆಷಲ್ ಗಿಫ್ಟ್

  ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಾಡನ್ನ, ಅವರ ಎದುರಲ್ಲೇ ಹಾಡಿರುವುದು ವಿಶೇಷ. ರವಿಚಂದ್ರನ್ ಅಭಿನಯದ ಕಲಾವಿದ ಸಿನಿಮಾದ 'ಪ್ರೇಮಾ.....ಪ್ರೇಮಾ.....' ಹಾಡಿನ ಎರಡು ಸಾಲನ್ನ ಸುದೀಪ್ ಹೇಳಿದ್ರು. ಇದನ್ನ ವೇದಿಕೆಯಲ್ಲಿ ನಿಂತು ಕೇಳಿ ಕ್ರೇಜಿಸ್ಟಾರ್ ಖುಷಿಯಾದರು.

  ಈ ಹಿಂದೆ 'ಜಿಮ್ಮಿಗಲ್ಲು' ಚಿತ್ರದ 'ತುತ್ತಾ ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ' ಹಾಡನ್ನ ಹಲವು ವೇದಿಕೆಯಲ್ಲಿ, ಹಲವು ಬಾರಿ ಹಾಡಿದ್ದಾರೆ. ಇದು ಸುದೀಪ್ ಅವರ ನೆಚ್ಚಿನ ಗೀತೆ ಕೂಡ ಹೌದು.

  ದರ್ಶನ್ ಚಿತ್ರದ ವಿಲನ್ ಈಗ ಸುದೀಪ್ ಗೂ ವಿಲನ್.! ಯಾರದು?

  ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯದ ಪಡ್ಡೆಹುಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಯುಗಾದಿ ಹಬ್ಬದ ವಿಶೇಷವಾಗಿ ಸ್ಪೆಷಲ್ ಸಂಚಿಕೆ ಪ್ರಸಾರ ಮಾಡಲಾಗಿದೆ. ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

  English summary
  kiccha sudeep sings crazy star ravichandran's kalavida movie song in colors kannada event. the programme will telecasting this weekend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X