»   » ಚಂದನ್ ಶೆಟ್ಟಿ ಮನಸ್ಸಿನಲ್ಲಿದ್ದ ಬೇಸರವನ್ನ ಕಿತ್ತೆಸೆದ ಸುದೀಪ್.!

ಚಂದನ್ ಶೆಟ್ಟಿ ಮನಸ್ಸಿನಲ್ಲಿದ್ದ ಬೇಸರವನ್ನ ಕಿತ್ತೆಸೆದ ಸುದೀಪ್.!

Posted By:
Subscribe to Filmibeat Kannada
Bigg Boss Kannada Season 5 : ಚಂದನ್ ಶೆಟ್ಟಿಯ ಬೇಸರವನ್ನ ದೂರ ಮಾಡಿದ ಸುದೀಪ್ | Filmibeat Kannada

'ಬಿಗ್ ಬಾಸ್' ಮನೆಯಲ್ಲಿ Rap ಸಿಂಗರ್ ಚಂದನ್ ಶೆಟ್ಟಿ ತಮ್ಮ ಹಾಡುಗಳ ಮೂಲಕ ಸಖತ್ ಎಂಟರ್ ಟೈನ್ ಮಾಡ್ತಿದ್ದಾರೆ. ಚಂದನ್ ಅವರ ಡಿಫ್ರೆಂಟ್ ಹಾಡುಗಳನ್ನ ಕೇಳಿ ಮನೆ ಸದಸ್ಯರು ಕೂಡ ಅಷ್ಟೇ ಎಂಜಾಯ್ ಮಾಡ್ತಿದ್ದಾರೆ.

ಆದ್ರೆ, ಈ ಮಧ್ಯೆ ಚಂದನ್ ಶೆಟ್ಟಿ ''ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಸಿಗುತ್ತಿಲ್ಲ, ನನ್ನನ್ನ ಯಾರು ಗುರುತಿಸುತ್ತಿಲ್ಲ'' ಎಂಬ ಬೇಸರವನ್ನ 'ಬಿಗ್' ಮನೆಯಲ್ಲಿ ಹೊರ ಹಾಕಿದ್ದರು. ಇದು ಅವರ ಅಭಿಮಾನಿಗಳಿಗೆ ಬೇಜಾರು ಮಾಡಿಸಿತು.

ಇದೇ ವಿಷ್ಯವನ್ನ ಸುದೀಪ್ ಕೂಡ ಪ್ರಸ್ಥಾಪಿಸಿದರು. ಚಂದನ್ ಶೆಟ್ಟಿ ಅವರ ಮನಸ್ಸಿನಲ್ಲಿದ್ದ ಭಾವನೆಯನ್ನ ಹೊಗಲಾಡಿಸಿ, ಚಂದನ್ ಗೆ ನೀತಿ ಪಾಠ ಹೇಳಿದ್ರು. ಹಾಗಿದ್ರೆ, ಚಂದನ್ ಶೆಟ್ಟಿಗೆ ಸುದೀಪ್ ಏನಂದ್ರು? ಮುಂದೆ ಓದಿ.....

ಜನ ಗುರುತಿಸಿದ್ದಕ್ಕೆ ಚಂದನ್ ಒಳಗಿದ್ದೀರಾ

''ಚಂದನ್ ಶೆಟ್ಟಿ ಅವರೇ ನಿಮ್ಮನ್ನ ಯಾರು ಗುರುತಿಸಿಲ್ಲ ಎಂದು ಹೇಳಿದ್ರಿ. ನಿಮ್ಮನ್ನ ಗುರುತಿಸಿರುವುದಕ್ಕೆ ನೀವು ಚಂದನ್ ಆಗಿರುವುದು. ನೀವು ಒಳಗೆ ಹೋಗಿರುವುದು. ನೀವು ಮಾಡಿದ ವಿಡಿಯೋ ಹೇಗೆ ಹಿಟ್ ಆಯ್ತು. ನೀವು ಗುರುತಿಸಿದ ಮೇಲೂ ಹೀಗೆ ಹೇಳಿದ್ರು ತಪ್ಪು'' ಎಂದು ಸುದೀಪ್ ಮನವರಿಕೆ ಮಾಡಿದ್ರು.

'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

ಜನರೇ ಗುರುತಿಸಬೇಕು

ಇದಕ್ಕೆ ಪ್ರತಿಕ್ರಿಯಿಸಿದ ಚಂದನ್ ಶೆಟ್ಟಿ ''ಸರ್ ನಾನು ಹೇಳಿದ್ದು, ಕರ್ನಾಟಕ ಜನ ಗುರುತಿಸಿದ್ದಾರೆ. ಆದ್ರೆ, ಹೊಟ್ಟೆ ಪಾಡಿಗೆ'' ಅಂದ್ರು. ಅದಕ್ಕೆ ಉತ್ತರ ಕೊಟ್ಟು ಸುದೀಪ್ ''ಜನರೇ ಗುರುತಿಸಿಬೇಕು. ಬೇರೆಯವರು ಗುರುತಿಸಿ ಬದನೇಕಾಯಿ ಏನಾಗಬೇಕಿದೆ'' ಎಂದು ಹೇಳುವ ಮೂಲಕ ಚಂದನ್ ಶೆಟ್ಟಿಯ ಮನಸ್ಸಿನಲ್ಲಿದ್ದ ಭಾವನೆಯನ್ನ ಹೋಗಲಾಡಿಸಿದರು.

ಹಾಲಿಗಾಗಿ ಕೋಲಾಹಲ: ಹಾಲು ಮುಚ್ಚಿಟ್ಟ ಮಹಾನುಭಾವರಿಗೆ ಸುದೀಪ್ ಚಾಟಿಯೇಟು.!

ಜನರು ಒಪ್ಪಿರುವುದಕ್ಕೆ ನಾನು

''ಜನರು ಒಪ್ಪಿರುವುದಕ್ಕೆ ನಾನು. ನನ್ನ ಮೇಲೆ ಬಂದು ಬಂಡವಾಳ ಹಾಕ್ತಾರೆ. ಜನ ನನ್ನ ಒಪ್ಪಿರಲಿಲ್ಲ ಅಂದ್ರೆ, ನನ್ನ ಮೇಲೆ ಯಾಕೆ ಸಿನಿಮಾ ಮಾಡ್ತಿದ್ರು'' ಎಂದು ಚಂದನ್ ಗೆ ನಿದರ್ಶನ ನೀಡಿದರು.

''ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ಹಾಲು ಕದ್ದವು ಬದುಕ್ತಾವಾ.?!''

ನನ್ನ ಆಲೋಚನೆ ಬದಲಾಗುತ್ತೆ

ಸುದೀಪ್ ಅವರ ಹೇಳಿದ ಮಾತುಗಳನ್ನ ಕೇಳಿದ ಚಂದನ್ ಶೆಟ್ಟಿ ಮುಂದೆ ನನ್ನ ಆಲೋಚನೆ ಬದಲಾಗುತ್ತೆ ಎಂದು ಹೇಳಿದ್ದಾರೆ.

ಮಹಾಭಾರತ/ರಾಮಾಯಣದ ಯಾವ ಪಾತ್ರಗಳು 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸೂಕ್ತ.?

English summary
Bigg Boss Kannada 5: Week-3: Sudeep Speak About Rap Singer Chandan Shetty. ಬಿಗ್ ಬಾಸ್ ಕನ್ನಡ 5: ಮೂರನೇ ವಾರದ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರ ಬೇಸರದ ಬಗ್ಗೆ ಸುದೀಪ್ ಮಾತನಾಡಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X