For Quick Alerts
  ALLOW NOTIFICATIONS  
  For Daily Alerts

  'ಹುಚ್ಚ ವೆಂಕಟ್ ಗೆಲ್ಲುವ ಸಾಧ್ಯತೆ ಇತ್ತು': ಸುದೀಪ್ ಹೀಗೆ ಹೇಳಿದ್ಯಾಕೆ?

  |

  ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಆರಂಭವಾಗುತ್ತಿದೆ. ಈ ಸಲ ಯಾರ್ ಯಾರು ಮನೆಯೊಳಗೆ ಎಂಟ್ರಿ ಪಡೆದುಕೊಳ್ಳುತ್ತಾರೆ ಎಂಬ ಲೆಕ್ಕಾಚಾರ, ಚರ್ಚೆ ಜೋರಾಗಿ ನಡೆಯುತ್ತಿದೆ. ಬಿಗ್ ಬಾಸ್ ಹೊಸ ಸೀಸನ್ ಆರಂಭ ಹಿನ್ನೆಲೆ ಬೆಂಗಳೂರಿನಲ್ಲಿ ಸುದೀಪ್ ಮತ್ತು ಪರಮೇಶ್ವರ್ ಗುಂಡ್ಕಲ್ ಸುದ್ದಿಗೋಷ್ಠಿ ನಡೆಸಿದರು.

  ಬಿಗ್ ಬಾಸ್ ಕಾರ್ಯಕ್ರಮದ ಅನುಭವದ ಬಗ್ಗೆ ಮಾತನಾಡಿದ ಸುದೀಪ್ ''ಮೂರನೇ ಆವೃತ್ತಿಯಲ್ಲಿ ಹುಚ್ಚ ವೆಂಕಟ್ ಗೆಲ್ಲುವ ಸಾಧ್ಯತೆ ಇತ್ತು'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಬಿಗ್ ಸುದ್ದಿ: ಬಿಗ್ ಬಾಸ್ ಮನೆಗೆ ಮೊಟ್ಟ ಮೊದಲ ಸಲ ರಾಜಕಾರಣಿ ಎಂಟ್ರಿ?ಬಿಗ್ ಸುದ್ದಿ: ಬಿಗ್ ಬಾಸ್ ಮನೆಗೆ ಮೊಟ್ಟ ಮೊದಲ ಸಲ ರಾಜಕಾರಣಿ ಎಂಟ್ರಿ?

  ಒಬ್ಬ ನಿರೂಪಕನಾಗಿ ಒಂದೆರಡು ವಾರ ನೋಡಿದ್ಮೇಲೆ ಸ್ಪರ್ಧಿಗಳ ಮನಸ್ಥಿತಿ ಬಗ್ಗೆ ನಿರ್ಧರಿಸಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ''ಸಾಧ್ಯವಿಲ್ಲ, ಬಹಳ ಒಳ್ಳೆಯ ಹೆಸರು ಇರೋರು ಹಾಳಾಗಿರುವುದನ್ನು ನೋಡಿದ್ದೇನೆ, ಒಳ್ಳೆ ಅಭಿಪ್ರಾಯ ಇಲ್ಲದವರ ಮೇಲೆ ಸಿಕ್ಕಾಪಟ್ಟೆ ಪಾಸಿಟಿವ್ ರೆಸ್‌ಪಾನ್ಸ್ ಪಡೆದುಕೊಂಡಿದ್ದು ನೋಡಿದ್ದೇನೆ'' ಎಂದು ತಿಳಿಸಿದರು.

  ಇದೇ ಸಂದರ್ಭದಲ್ಲಿ ಹುಚ್ಚ ವೆಂಕಟ್ ಅವರನ್ನು ಉದಾಹರಣೆಯನ್ನಾಗಿ ನೀಡಿದ ಸುದೀಪ್ ''ಅಂದು ವೆಂಕಟ್, ಹಲ್ಲೆ ಮಾಡಿರಲಿಲ್ಲ ಅಂದಿದ್ದರೆ ಗೆಲ್ಲುವ ಸಾಧ್ಯತೆ ಇತ್ತು. ಅವರಿಗೆ ಬಹಳ ಚೆನ್ನಾಗಿ ವೋಟಿಂಗ್ ಬರ್ತಿತ್ತು. ಜನರಿಗೆ ಅವರು ಇಷ್ಟ ಆಗಿದ್ದರು. ಆದರೆ, ಪ್ರಚೋದನಕಾರಿಯಾಗಿ ನಡೆದ ಸನ್ನಿವೇಶಗಳಲ್ಲಿ ಆ ಘಟನೆ ಆಯಿತು. ಆ ಬಗ್ಗೆ ಬೇಸರ ಇದೆ'' ಎಂದು ಹೇಳಿದ್ದಾರೆ.

  ಕಾಕತಾಳೀಯ ಅಂದ್ರೆ ಹುಚ್ಚ ವೆಂಕಟ್ ಅವರು ಹಲ್ಲೆ ಮಾಡಿದ ಎಪಿಸೋಡ್‌ಗೂ ಮುಂಚೆ ಬೆಳಗ್ಗೆ ಸುದೀಪ್ ಅವರು ಗುಂಡ್ಕಲ್ ಬಳಿ ''ಪರಂ, ನನಗೆ ಯಾಕೋ ಈ ವ್ಯಕ್ತಿ ಗೆಲ್ಲಬಹುದು ಅಂತ ಹೇಳಿದ್ದರಂತೆ. ದುರಾದೃಷ್ಟವಶಾತ್ ಅದೇ ದಿನ ಆ ಘಟನೆ ನಡೆಯಿತು'' ಎಂದು ಸುದೀಪ್ ಹೇಳಿಕೊಂಡಿದ್ದಾರೆ.

  English summary
  Actor and Host Sudeep spoke about Bigg boss kannada season 3 contestant huccha venkat.
  Thursday, February 25, 2021, 20:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X