»   » ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ !

ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ !

By: BK
Subscribe to Filmibeat Kannada

''ಬಿಗ್ ಬಾಸ್ ಕನ್ನಡ 4'' ಕಾರ್ಯಕ್ರಮದಲ್ಲಿ ಭುವನ್ ಪೊನ್ನಣ್ಣ ಹಾಗೂ ಸಂಜನಾ ಮಧ್ಯೆ ಸಂಥಿಂಗ್ ನಡೆಯುತ್ತಿದೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, 'ಬಿಗ್ ಬಾಸ್' ಮನೆಯಲ್ಲೂ ಇವರಿಬ್ಬರ ಬಗ್ಗೆ ಸಖತ್ ಚರ್ಚೆಗಳು ಆಗಿರುವುದನ್ನ ನಾವು ಗಮನಿಸಿದ್ದೀವಿ.

ಭುವನ್ ಹಾಗೂ ಸಂಜನಾ ನಡುವಿನ ಸಂಬಂಧ ಎಂತಹದ್ದು. ಇವರಿಬ್ಬರು ಸ್ನೇಹಿತರ ಅಥವಾ ಪ್ರೇಮಿಗಳ ಎಂಬ ಪ್ರಶ್ನೆ ಈಗ ಎಲ್ಲರನ್ನ ಕಾಡುತ್ತಿದೆ. ಈ ವಾರ ಈ ಪ್ರಶ್ನೆ ಕಿಚ್ಚ ಸುದೀಪ್ ಅವರನ್ನ ಕಾಡಿತ್ತು. ಅದಕ್ಕೆ ಸಂಜನಾ ಹಾಗೂ ಭುವನ್ ಅವರನ್ನ ನೇರವಾಗಿಯೇ ಕೇಳಿಬಿಟ್ಟರು.[ 'ಬಿಗ್ ಬಾಸ್' ಮನೆಯಲ್ಲಿ ಸಂಜನಾ ಸ್ವಯಂವರ: ಭುವನ್ ಗದ್ದಲ.!]

ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ

ಇಷ್ಟು ದಿನ ಬಾತ್ ರೂಂ, ಕಿಚ್ಚನ್, ಬೆಡ್ ರೂಂ ನಲ್ಲಿ ಚರ್ಚೆಯಾಗುತ್ತಿದ್ದ ಸಂಜನಾ-ಭುವನ್ ಅವರ ಲವ್ ಸ್ಟೋರಿ, ಈ ವಾರ ಸುದೀಪ್ ಅವರ ಎದುರು ಚರ್ಚೆಯಾಯಿತು. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ 'YES/NO' ಸಂಧರ್ಭದಲ್ಲಿ ಸುದೀಪ್ ಈ ಪ್ರಶ್ನೆಯನ್ನ ಮುಂದಿಟ್ಟರು.[ಈ ಬಾರಿ ಎಕ್ಸ್ ಕ್ಯೂಸ್ ಇಲ್ಲ, ಸಂಜನಾ ಶಿಕ್ಷೆ ಅನುಭವಿಸಲೇ ಬೇಕು.!

ಸುದೀಪ್ ಕೇಳಿದ ಪ್ರಶ್ನೆ

ಇದು ಕೇಳಲೇಬೇಕಾದ ಪ್ರಶ್ನೆ, ಈ ಪ್ರಶ್ನೆಗೆ ಬೇಡಿಕೆ ಹೆಚ್ಚಿದೆ ಎಂದ ಸುದೀಪ್, ''ಸಂಜನಾ ಅವರಿಗೆ ಭುವನ್ ಅವರ ಮೇಲೆ ನಿಜವಾಗಲೂ ಲವ್ ಆಗಿದೆ''...? 'YES/NO' ಎಂದು ಕೇಳಿದರು.

ಒಬ್ಬರನ್ನ ಬಿಟ್ಟು ಎಲ್ಲರೂ 'NO'

ಕಿಚ್ಚನ ಈ ಪ್ರಶ್ನೆಗೆ, ಒಬ್ಬರನ್ನ ಬಿಟ್ಟು ಮನೆಯ ಎಲ್ಲ ಸದಸ್ಯರು 'ನೋ' ಎಂದು ಹೇಳಿದರು.

ಸಂಜನಾ ಕೊಟ್ಟ ಉತ್ತರ

ಕಿಚ್ಚನ ಈ ಪ್ರಶ್ನೆಗೆ, ಸ್ವತಃ ಸಂಜನಾ ಹಾಗೂ ಭುವನ್ ಕೂಡ 'NO' ಅಂತಾನೇ ಉತ್ತರ ಕೊಟ್ಟರು.

'YES' ಎಂದ ಕೀರ್ತಿ ಹೇಳಿದ್ದೇನು?

''ಕಳೆದ ವಾರ ಟಾಸ್ಕ್ ಮಾಡಬೇಕಾರೇ ಸಂಜನಾ ಅವರೇ ಬಾಯ್ಬಿಟ್ಟು ಹೇಳಿದರು. ಅಂದ್ರೆ, ಮನೆಯಲ್ಲಿ ನೋಡ್ತಿದ್ದಾರೆ. ನಾನು ನೋಡಿದಾಗೆ ಒಳ್ಳೆ ಹುಡುಗ, ನಾನು ಅಂದುಕೊಂಡಿದ್ದೀನಿ. ಮುಂದೇನಾಗುತ್ತೋ ಗೊತ್ತಿಲ್ಲ. ಹೊರಗಡೆ ಹೋದ್ಮೇಲೆ ಮನೆಯವರ ಹತ್ರ ಮಾತಾಡ್ತೀನಿ. ಬಟ್, ಇಲ್ಲಿ ತನಕ ಡಿಸೈಡ್ ಮಾಡಿಲ್ಲ ಅಂದಿದ್ರು. ಹಾಗಾಗಿ ಸಂಜನಾ ಸೀರಿಯಸ್ ಆಗಿರಬಹುದು''- ಕೀರ್ತಿ

'NO' ಎಂದ ಸಂಜನಾ ಹೇಳಿದ್ದೇನು?

ನಾನು ಹೇಳಿದ್ದು, ಅದನ್ನ ಮನೆಯವರಿಗೆ ಬಿಟ್ಟೀದ್ದೀನಿ. ನಮ್ ಮನೆಯವರು ತುಂಬಾ ಫ್ರೆಂಡ್ಲಿ. ಆಗಾಗ ಕೇಳ್ತಾ ಇರ್ತಾರೆ. ಆ ತರ ಏನಾದರೂ ಇದಿಯಾ ಅಂತ. ನೀನು ಆಯ್ಕೆ ಮಾಡ್ಕೊಬಹುದು ಅಂತ ಫ್ರೀಡಂ ಕೊಟ್ಟಿದ್ದಾರೆ. ಇಲ್ಲಿಯವರೆಗೂ ಏನೂ ಇಲ್ಲ. ಇಲ್ಲಿ ನೋಡಿದ ಪ್ರಕಾರ, ಭುವನ್ ನೈಸ್ ಗೈ. ಆ ತರ ಅರ್ಥದಲ್ಲಿ ಹೇಳಿದ್ದು. ''ಎಸ್, ಐ ಲವ್ ಹಿಮ್ ಅಂತ ಹೇಳಿಲ್ಲ''

ಮುಂದೆ ಏನಾಗುತ್ತೋ ಗೊತ್ತಿಲ್ಲ

ಸದ್ಯ, ಇಲ್ಲಿಯವರೆಗೂ ಸಂಜನಾ ಹಾಗೂ ಭುವನ್ ಅವರ ನಡುವಿನ ಸಂಬಂಧ ಪ್ರೇಮನಾ ಅಥವಾ ಸ್ನೇಹನಾ ಅಂತ ಗೊತ್ತಿಲ್ಲ. ಆದ್ರೆ, ಕಿಚ್ಚನ ಎದುರು ಇಷ್ಟೊಂದು ಚರ್ಚೆಯಾದ ನಂತರ ಇದು ಬೇರೆ ಏನಾದರೂ ರೂಪ ಪಡೆದುಕೊಳ್ಳುತ್ತಾ ಅಂತ ಮತ್ತಷ್ಟು ದಿನ ಕಾದು ನೋಡಬೇಕಿದೆ.

English summary
Kiccha Sudeep Talk About Sanjana and Bhuvan's Relationship in Bigg Boss House, in ''varada kathe Kicchana jothe'' Episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada