ತೆಲುಗು ಬಿಗ್‌ಬಾಸ್ ವೇದಿಕೆ ಮೇಲೆ ಕನ್ನಡ ಮಾತನಾಡಿದ ಸುದೀಪ್

ಬಿಗ್‌ಬಾಸ್ ಶೋ ಈ ವರ್ಷ ಪ್ರಸಾರವಾಗುವುದಿಲ್ಲ ಎಂಬುದು ಬಹುತೇಕ ಖಾತ್ರಿ. ಬಿಗ್‌ಬಾಸ್ ರಿಯಾಲಿಟಿ ಶೋ ಜೊತೆಗೆ ಸುದೀಪ್ ಅವರ ಅದ್ಭುತ ನಿರೂಪಣೆಯನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಆದರೆ ಬಿಗ್‌ಬಾಸ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಇದೆ. ಅದೆಂದರೆ ನಟ ಸುದೀಪ್ ಬಿಗ್‌ಬಾಸ್ ವೇದಿಕೆ ಏರಿ ನಿರೂಪಣೆ ಮಾಡಿದ್ದಾರೆ.

ಹೌದು, ಸುದೀಪ್ ಅವರು ತೆಲುಗು ಬಿಗ್‌ಬಾಸ್ ಶೋ ನಲ್ಲಿ ಭಾಗವಹಿಸಿದ್ದು, ತೆಲುಗು ಬಿಗ್‌ಬಾಸ್ ಶೋ ಅನ್ನು ನಿರೂಪಿಸಿದ್ದಾರೆ. ಬಹುದಿನಗಳಿಂದ ಸುದೀಪ್ ಅವರನ್ನು ಬಿಗ್‌ಬಾಸ್ ವೇದಿಕೆ ಮೇಲೆ ನೋಡದೆ ನಿರಾಸೆ ಅನುಭವಿಸಿದ್ದ ಅಭಿಮಾನಿಗಳಿಗೆ ಸುದೀಪ್ ಅನ್ನು ತೆಲುಗು ಬಿಗ್‌ಬಾಸ್ ವೇದಿಕೆ ಮೇಲೆ ನೋಡಿ ಖುಷಿಯಾಗಿದೆ.

Sudeep Talks Kannada In Telugu Bigg Boss Show

ಸುದೀಪ್ ಅವರು ತೆಲುಗು ಬಿಗ್‌ಬಾಸ್ ಶೋ ನಿರೂಪಣೆ ಮಾಡಿರುವ ಎಪಿಸೋಡ್ ಈಗಾಗಲೇ ಚಿತ್ರೀಕರಣವಾಗಿದ್ದು, ಶೋ ನ ಪ್ರೋಮೊ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪ್ರೊಮೊನಲ್ಲಿಯೇ ಗೊತ್ತಾಗುತ್ತಿರುವಂತೆ ಬಿಗ್‌ಬಾಸ್ ವೇದಿಕೆ ಮೇಲೆ ಸುದೀಪ್, ಕನ್ನಡದಲ್ಲಿ ಮಾತನಾಡಿದ್ದಾರೆ. ಸುದೀಪ್ ಅವರ ಬಿಗ್‌ಬಾಸ್ ಪ್ರೊಮೊ ವಿಡಿಯೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಪೈಲ್ವಾನ್ ಹಾಡಿನೊಂದಿಗೆ, ಕಪ್ಪು ಬಣ್ಣದ ಉಡುಗೆ ತೊಟ್ಟು ಸುದೀಪ್ ಶೋ ಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಗಳೊಂದಿಗೆ ತಮಾಷೆ ಮಾಡುವ, ಕಾಲೆಳೆಯುವ ಪ್ರಶ್ನೆಗಳನ್ನು ಕೇಳುವ ಸುದೀಪ್, ಶೋ ನಲ್ಲಿ ಕನ್ನಡದಲ್ಲಿಯೂ ಮಾತನಾಡಿದ್ದಾರೆ.

ಸುದೀಪ್ ಹಾಗು ಅಕ್ಕಿನೇನಿ ನಾಗಾರ್ಜುನ ಇಬ್ಬರೂ ಸಹ ಎಪಿಸೋಡ್ ಅನ್ನು ನಿರೂಪಣೆ ಮಾಡಿದ್ದಾರೆ. ನಾಗಾರ್ಜುನ ಅವರು, ಬಿಗ್‌ಬಾಸ್ ಸ್ಪರ್ಧಿಗಳ ಪರಿಚಯವನ್ನು ಸುದೀಪ್ ಅವರಿಗೆ ಮಾಡಿಕೊಟ್ಟಿದ್ದಾರೆ.

ಕನ್ನಡದಲ್ಲಿಯೂ ಬಿಗ್‌ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ. ಮೊದಲ ಹಂತದ ಮಾತುಕತೆ ಸುದೀಪ್ ಜೊತೆಗೆ ಈಗಾಗಲೇ ಮುಗಿದಿದೆ. ಮುಂದಿನ ಜನವರಿ ತಿಂಗಳಲ್ಲಿ ಬಿಗ್‌ಬಾಸ್ ಪ್ರಸಾರವಾಗುವ ಸಾಧ್ಯತೆ ಇದೆ.

More from Filmibeat

English summary
Actor Sudeep hosted Telugu Bigg Boss show as a guest host. He talks in Kannada for a while in the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X