Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಪ್ಪಲಿ ಎಸೆದರೂ ದೇವದಾಸಿಯರ ಬದುಕು ಬದಲಿಸಿದ ಸುಧಾಮೂರ್ತಿ
''60 : 40 ಸೈಟ್ ನಲ್ಲಿ ಮನೆ ಕಟ್ಟಿ ಆರಾಮಾಗಿ ಇರುವುದು ಜೀವನ ಅಲ್ಲ. ಅದರ ಆಚೆಗೆ ಒಂದು ಜೀವನ ಇದೆ. ನಿಮ್ಮ ಸಮಾಜದಲ್ಲಿ ಇರುವ ಸಮಸ್ಯೆಗಳು, ನಿಮ್ಮ ಸಮಸ್ಯೆಗಳು. ನಿಮಗಿಂತ ಕೆಳಗೆ ಇರುವವರಿಗೆ ಸಹಾಯ ಮಾಡುವುದು ನಿಮ್ಮ ಗುರಿ.'' ಹೀಗೆ ಹೇಳುತ್ತ ತಮ್ಮ ಅದ್ಬುತ ವ್ಯಕ್ತಿತ್ವದ ಮೂಲಕ ಮತ್ತಷ್ಟು ಜನರಿಗೆ ಸ್ಫೂರ್ತಿ ನೀಡಿದ್ದಾರೆ ಸುಧಾಮೂರ್ತಿ.
ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಸುಧಾಮೂರ್ತಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ದೇವದಾಸಿಯರ ಬದುಕನ್ನು ಬದಲಿಸಿ, ಅವರ ಮಕ್ಕಳಿಗೆ ಹೊಸ ಜೀವನ ನೀಡಿದ್ದಾರೆ.
ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ
3 ಸಾವಿರಕ್ಕೂ ಹೆಚ್ಚು ದೇವದಾಸಿಯರನ್ನು ಆ ವ್ಯವಸ್ಥೆಯಿಂದ ಸುಧಾಮೂರ್ತಿ ಮತ್ತು ತಂಡ ಹೊರ ತಂದಿದೆ. 12 ಸಾವಿರಕ್ಕೂ ಹೆಚ್ಚು ದೇವದಾಸಿ ಮಕ್ಕಳಿಗೆ ಓದಲು ಸಹಾಯ ಮಾಡಿದ್ದಾರೆ. ಇದರಲ್ಲಿ ಅನೇಕರು ಓದಿ ಟೀಚರ್, ಡಾಕ್ಟರ್, ಪೊಲೀಸ್ ಹೀಗೆ ಸ್ವತಃ ನೌಕರಿ ಮಾಡುತ್ತಿದ್ದಾರೆ. ಅಲ್ಲಿದೆ ಇಡೀ ರಾಯಚೂರು ಜಿಲ್ಲೆಯಲ್ಲಿ ಈಗ ದೇವದಾಸಿ ಪದ್ಧತಿ ಇಲ್ಲ.
ದೇವದಾಸಿ ಮತ್ತು ಸೆಕ್ಸ್ ವರ್ಕರ್ಸ್ ಗಳ ಬದುಕು ಬದಲಿಸಬೇಕು ಎನ್ನುವ ನಿರ್ಧಾರ ಮಾಡಿದ ಸುಧಾಮೂರ್ತಿ ಹೇಗೆ ಅದನ್ನು ಸಾಧಿಸಿ ತೋರಿಸಿದ್ದಾರೆ...

ಕಾಮಾಟಿಪುರದ ಹೆಣ್ಣು ಮಕ್ಕಳನ್ನು ನೋಡಿ ದಿಗ್ಬ್ರಮೆ
ಒಮ್ಮೆ ಸುಧಾಮೂರ್ತಿ ಅವರು ಬಾಂಬೆಗೆ ಹೋಗಿದ್ದರಂತೆ. ಎಲ್ಲರೂ ಕಾಮಾಟಿಪುರ ಬಗ್ಗೆ ಅಷ್ಟೊಂದು ಮಾತನಾಡುತ್ತಾರೆ ಅದನ್ನು ಒಬ್ಬ ನೋಡಬೇಕು ಎಂದು ಅಲ್ಲಿಗೆ ಹೋದರಂತೆ. ಆ ಸ್ಥಳ, ಅಲ್ಲಿನ ಹೆಣ್ಣು ಮಕ್ಕಳ ವೇಷ ಭೂಷಣ, ಅವರ ಜೀವನದ ಸ್ಥಿತಿ ನೋಡಿ ದಿಗ್ಬ್ರಮೆಗೊಂಡರಂತೆ. ಅವರ ಪರಿಸ್ಥಿತಿ ನೆನೆದು ಮೂರು ತಿಂಗಳು ಸರಿಯಾಗಿ ನಿದ್ದೆ ಮಾಡಲಿಲ್ಲವಂತೆ. ಆಗಲೇ ಇಂತಹವರಿಗೆ ಏನಾದರೂ ಮಾಡಬೇಕು ಎನ್ನುವ ಗಟ್ಟಿ ನಿರ್ಧಾರ ಸುಧಾಮೂರ್ತಿ ಮಾಡಿದರು.

ದೇವದಾಸಿ ಮತ್ತು ಸೆಕ್ಸ್ ವರ್ಕರ್ಸ್ ಗಳ ಮನ ಪರಿವರ್ತನೆ
ಇದೇ ವೇಳೆ ಇನ್ಫೋಸಿಸ್ ಪ್ರತಿಷ್ಠಾನ ಶುರು ಆಯ್ತು. ಸುಧಾ ಮೂರ್ತಿ ಅವರಿಗೆ ಯಾವ ಕೆಲ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಆಗ ದೇವದಾಸಿ ಮತ್ತು ಸೆಕ್ಸ್ ವರ್ಕರ್ಸ್ ಗಳ ಬದುಕನ್ನು ಬದಲಿಸ ಬೇಕು ಎನ್ನುವ ಆಲೋಚನೆ ಬಂತು. ಆಗ ಹುಬ್ಬಳ್ಳಿಯ ಬಳಿ ಇರುವ ಸೌದತ್ತಿಗೆ ಹೋಗಿ ಅಲ್ಲಿನ ದೇವದಾಸಿಯರ ಜೀವನ ಬದಲಿಸಬೇಕು ಎನ್ನುವ ಪ್ರಯತ್ನ ಶುರು ಮಾಡಿದರು.
ಹೆಣ್ಣು ಮಕ್ಕಳ ಪಾಲಿಗೆ ನಿಜವಾದ 'ದಾರಿದೀಪ' ಈ ಸುಧಾಮೂರ್ತಿ

ಸುಧಾಮೂರ್ತಿ ಮೇಲೆ ಚಪ್ಪಲಿ ಎಸೆದ ದೇವದಾಸಿಯರು
25 ವರ್ಷಗಳ ಹಿಂದೆ ಸುಧಾಮೂರ್ತಿ ಟೀ ಶಾರ್ಟ್ ಪ್ಯಾಂಟ್ ಹಾಕಿಕೊಳ್ಳುತ್ತಿದ್ದರು. ಆಗ ನೋಟ್ ಬುಕ್ ಹಿಡಿದು ದೇವದಾಸಿರ ಬಳಿ ಹೋಗಿ 'ನಾನು ಸುಧಾಮೂರ್ತಿ ಅಂತ. ನಿಮಗೆ ಸಹಾಯ ಮಾಡುತ್ತೇನೆ. ಏಡ್ಸ್ ಎನ್ನುವ ಕಾಯಿಲೆ ಬಂದಿದೆ. ಇದನ್ನು ಹೇಗೆ ತಡೆಗಟ್ಟಬೇಕು ಎಂದು ಹೇಳುತ್ತೇನೆ' ಎಂದರಂತೆ. ಇದರಿಂದ ಕೋಪಗೊಂಡ ದೇವದಾಸಿಯರು ನೀನೇನು ನಮಗೆ ಸಹಾಯ ಮಾಡುವುದು ಎಂದು ಸುಧಾಮೂರ್ತಿ ಮೇಲೆ ಚಪ್ಪಲಿ ಎಸೆದು ಎಂದರಂತೆ.

ಚಪ್ಪಲಿಯಿಂದ ಟೊಮೇಟೊಗೆ ಪ್ರಮೋಷನ್
ದೇವದಾಸಿಯರು ಚಪ್ಪಲಿ ಎಸೆದರು ಎಂದು ಸುಧಾಮೂರ್ತಿ ಮನೆಗೆ ಬಂದು ಅತ್ತರಂತೆ. ಆದರೆ, ಮತ್ತೆ 15 ದಿನ ಬಿಟ್ಟು ಅಲ್ಲಿಗೆ ಹೋಗಿ ಪ್ರಯತ್ನ ಮುಂದುವರೆಸಿದ್ದಾರೆ. ಆಗ ಅವರು ಟೊಮೇಟೊವನ್ನು ಎಸೆದರಂತೆ. ಇದರಿಂದ ಬೇಸರವಾದ ಸುಧಾಮೂರ್ತಿ ಮತ್ತೆ ಅಳಲು ಶುರು ಮಾಡಿದರು. ನಾನು ಅವರಿಗೆ ಸಹಾಯ ಮಾಡಲು ಹೋದರೆ ನನಗೆ ಹೀಗೆ ಮಾಡುತ್ತಿದ್ದರೆ ಎಂದು ಅಪ್ಪನ ಬಳಿ ನೋವು ಹೇಳಿಕೊಂಡರು.

ತಂದೆ ನೀಡಿದ ಸಲಹೆ ಕೆಲಸಕ್ಕೆ ಬಂತು
ಆಗ ಸುಧಾಮೂರ್ತಿ ತಂದೆ ನಿನಗೆ ಚಪ್ಪಲಿಯಿಂದ ಟೊಮೇಟೊಗೆ ಪ್ರಮೋಷನ್ ಆಗಿದೆ ಖುಷಿಪಡು ಎಂದರಂತೆ. ನೀನು ಮಾಡುವ ಉದ್ದೇಶ ಒಳ್ಳೆಯದು, ಆದರೆ ಅದರ ಆಳ ಅಗಲ ನಿನಗೆ ಗೊತ್ತಿಲ್ಲ. ನಿನ್ನನ್ನು ನೋಡಿದರೆ ಸಾಮಾಜಿಕ ಕಾರ್ಯಕರ್ತೆ ಎನಿಸುವುದೇ ಇಲ್ಲ. ನಿನ್ನ ಡ್ರೆಸ್ ನೋಡಿ. ನೀನು ಅಂತಹವರ ಜೊತೆಗೆ ಕೆಲಸ ಮಾಡಬೇಕು ಎನ್ನುವಾಗ ನೀನು ಅತ್ಯಂತ ಸರಳವಾಗಿ ಇರಬೇಕು. ಜನ ಸಾಮಾನ್ಯರ ಜೊತೆಗೆ ಸೇರಬೇಕು ಅಂದರೆ ನೀನು ಹಾಗೆಯೇ ಇರಬೇಕು ಎಂದು ಸಲಹೆ ನೀಡಿದರಂತೆ.

3 ಸಾವಿರಕ್ಕೂ ಅಧಿಕ ದೇವದಾಸಿರಿಗೆ ಹೊಸ ಜೀವನ
ಬಳಿಕ 200 ರೂಪಾಯಿ ಸೀರೆ ಉಟ್ಟುಕೊಂಡು, ಕುಂಕುಮ ಇಟ್ಟುಕೊಂಡು ಹೋದರು. ಹೀಗೆ ಅವರ ಜೊತೆಗೆ ಒಡನಾಟ ಶುರುವಾಗಿದೆ. ಬಳಿಕ ಅಭಯ್ ಎನ್ನುವ ಒಬ್ಬ ಹುಡುಗ ದಿಲ್ಲಿಯಿಂದ ಹುಬ್ಬಳಿಗೆ ಬಂದು ಸುಧಾಮೂರ್ತಿ ಜೊತೆಗೆ ಕೆಲಸ ಮಾಡಿದ್ದರಂತೆ. ಹೀಗೆ ಶುರುವಾಗಿ ಈಗ 18 - 20 ವರ್ಷಗಳಲ್ಲಿ 3 ಸಾವಿರಕ್ಕೂ ಅಧಿಕ ದೇವದಾಸಿಯನ್ನು ಸಾಮಾನ್ಯ ಜೀನವಕ್ಕೆ ಕರೆದುಕೊಂಡು ಬಂದಿದ್ದಾರೆ.

ದೇವದಾಸಿಯರ ಮಕ್ಕಳಿಗೆ ಓದಲು ಸಹಾಯ
ಆ ನಂತರ ಒಂದು ಬ್ಯಾಂಕ್ ತೆಗೆದು, ಅದರಲ್ಲಿ ದೇವದಾಸಿಯರಿಗೆ ಕೆಲಸ ನೀಡಿದ್ದಾರಂತೆ. ಜೊತೆಗೆ 12000ಕ್ಕೂ ಹೆಚ್ಚು ಮಕ್ಕಳಿಗೆ ಓದಲು ಸಹಾಯ ಮಾಡಿದ್ದಾರೆ. ಅವರ ಮಕ್ಕಳು ಓದಿ ಡಾಕ್ಟರ್, ಟೀಚರ್, ಪೊಲೀಸ್ ಹೀಗೆ ಕೆಲಸ ಮಾಡುತ್ತಿದ್ದಾರೆ. ಅಂದು ಸುಧಾಮೂರ್ತಿ ಶುರು ಮಾಡಿದ ಕೆಲಸದಿಂದ ಈಗ ಇಡೀ ರಾಯಚೂರು ಜಿಲ್ಲೆಯಲ್ಲಿ ಎಲ್ಲಿಯೂ ದೇವದಾಸಿ ಪದ್ದತಿ ನಿವಾರಣೆಯಾಗಿದೆ.