Just In
Don't Miss!
- Sports
ಔಟ್ ನಿರಾಕರಿಸಿದ ಯೂಸುಫ್ ಪಠಾಣ್, ಸಿಟ್ಟಾದ ಅಜಿಂಕ್ಯ ರಹಾನೆ: ವೀಡಿಯೋ
- News
ಪೌರತ್ವ ತಿದ್ದುಪಡಿ ಮಸೂದೆ: "ನಮ್ಮ ರಾಜ್ಯದಲ್ಲಿ ನಿಮ್ಮ ಆಟ ನಡೆಯಲ್ಲ"!
- Finance
ಭಾರತದ ಚಿಲ್ಲರೆ ಹಣದುಬ್ಬರ ಮೂರು ವರ್ಷದ ಗರಿಷ್ಠ ಮಟ್ಟ 5.54%
- Automobiles
ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು
- Lifestyle
ಜ್ಯೋತಿಶಾಸ್ತ್ರದ ಪ್ರಕಾರ 2020ರಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹೇಗಿರಲಿದೆ
- Technology
ಹಲವು ಇಮೇಲ್ ಗಳನ್ನು ಒಂದೇ ಇಮೇಲ್ ನಲ್ಲಿ ಸೇರಿಸಿ ಸೆಂಡ್ ಮಾಡಲು ಅವಕಾಶ ನೀಡುವ ಜಿಮೇಲ್
- Education
IBPS SO Admit Card 2019: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಪ್ರಕಟ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಛೇ.. ಸುಧಾ ಮೂರ್ತಿಗೆ ಕೈಕೊಟ್ಟ 'ಈ' ಪ್ರಶ್ನೆ.! ಮನೆಯಲ್ಲಿ ನಂಗೆ ಏಟು ಬೀಳೋದು ಗ್ಯಾರೆಂಟಿ ಎಂದ ಅಮಿತಾಬ್.!
ಭಾರತೀಯ ಕಿರುತೆರೆ ಲೋಕದ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್ ಪತಿ'. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ನೋಡಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವ ಶೋ ಇದು. ಹೆಚ್ಚು ಟಿ.ಆರ್.ಪಿ ಹೊಂದಿರುವ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮ ಇಲ್ಲಿಯವರೆಗೂ 11 ಆವೃತ್ತಿಗಳನ್ನು ಪೂರೈಸಿದೆ.
ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮದ 11ನೇ ಆವೃತ್ತಿಯ ಫಿನಾಲೆ ಸಂಚಿಕೆಯಲ್ಲಿ ಹೆಮ್ಮೆಯ ಕನ್ನಡತಿ ಇನ್ಫೋಸಿಸ್ ಫೌಂಡೇಶನ್ ನ ಸಂಸ್ಥಾಪಕಿ ಸುಧಾ ಮೂರ್ತಿ ಭಾಗವಹಿಸಿದ್ದರು.
'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮದಲ್ಲಿ ಸರಾಗವಾಗಿ ಹಿಂದಿ ಮಾತನಾಡುತ್ತ 25 ಲಕ್ಷ ಗೆದ್ದು, 50 ಲಕ್ಷದ ಪ್ರಶ್ನೆಯನ್ನ ಸುಧಾ ಮೂರ್ತಿ ನೋಡಿದರು. ಆ ಪ್ರಶ್ನೆಗೆ ಸುಧಾ ಮೂರ್ತಿ ರವರಿಗೆ ಸರಿಯಾದ ಉತ್ತರ ಗೊತ್ತಿರಲಿಲ್ಲ. ಹೀಗಾಗಿ, ಅವರು ಆಟ ಕ್ವಿಟ್ ಮಾಡಿದರು. ಕೊನೆಗೆ ಸುಧಾ ಮೂರ್ತಿ ಊಹಿಸಿದ ಉತ್ತರವೂ ತಪ್ಪಾಗಿತ್ತು.
ಕಾಕತಾಳೀಯ ಅಂದ್ರೆ, ಆ ಪ್ರಶ್ನೆ ಬಿಗ್ ಬಿ ಪತ್ನಿ ಜಯಾ ಬಚ್ಚನ್ ಕುರಿತಾದ ಪ್ರಶ್ನೆಯಾಗಿತ್ತು. ಅದಕ್ಕೆ ಸುಧಾ ಮೂರ್ತಿ ಉತ್ತರ ಕೊಡದ ಕಾರಣ ಬೇಸರಗೊಂಡ ಅಮಿತಾಬ್ ಬಚ್ಚನ್, ''ಮನೆ ತಲುಪಿದ ಮೇಲೆ ಗ್ಯಾರೆಂಟಿ ನನಗೆ ಏಟು ಬೀಳುತ್ತೆ'' ಎಂದರು. ಮುಂದೆ ಓದಿರಿ...

ಸುಧಾ ಮೂರ್ತಿ ಕಾಲಿಗೆ ನಮಸ್ಕರಿಸಿದ ಅಮಿತಾಬ್ ಬಚ್ಚನ್
ಹಾಗ್ನೋಡಿದ್ರೆ, ಬಿಗ್ ಬಿ ಅಮಿತಾಬ್ ಬಚ್ಚನ್ ಗೆ 77 ವರ್ಷ ವಯಸ್ಸು. ಇನ್ನೂ ಸುಧಾ ಮೂರ್ತಿ ಅವರಿಗೆ 69 ವರ್ಷ. ಬಿಗ್ ಬಿ ಕಾಲಿಗೆ ನಮಸ್ಕರಿಸಲು ಸುಧಾ ಮೂರ್ತಿ ಮುಂದಾದಾಗ, ವಯಸ್ಸಿನಲ್ಲಿ ತಮಗಿಂತ ಕಿರಿಯವರಾಗಿದ್ದರೂ, ಸುಧಾ ಮೂರ್ತಿ ಕಾಲಿಗೆ ನಮಸ್ಕರಿಸಿ, ಅವರನ್ನ 'ಕೌನ್ ಬನೇಗಾ ಕರೋಡ್ ಪತಿ' ವೇದಿಕೆಗೆ ಅಮಿತಾಬ್ ಬಚ್ಚನ್ ಸ್ವಾಗತಿಸಿದರು.
ಸುಧಾ ಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಿಗ್ ಬಿ

ವಿದ್ಯಾರ್ಥಿ ಜೀವನದ ಬಗ್ಗೆ ಸುಧಾ ಮೂರ್ತಿ ಮಾತು
ಸಾವಿರಾರು ಲೈಬ್ರರಿಗಳು, ನೂರಾರು ಶಾಲೆಗಳು, ಟಾಯ್ಲೆಟ್ ಗಳನ್ನು ನಿರ್ಮಿಸಿರುವ ಸುಧಾ ಮೂರ್ತಿ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಬಗ್ಗೆ ಮಾತನಾಡಿದರು. ಇಂಜಿನಿಯರಿಂಗ್ ಓದಬೇಕೆಂದುಕೊಂಡಿದ್ದ ಸುಧಾ ಮೂರ್ತಿ ಆಸೆಯನ್ನ ತಂದೆ ತಿರಸ್ಕರಿಸಿದ್ದರು. ಆದರೂ, ಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜಿಗೆ ಸುಧಾ ಮೂರ್ತಿ ಸೇರಿದರು. ಆ ಕಾಲೇಜಿನಲ್ಲಿ ಇದ್ದ 599 ವಿದ್ಯಾರ್ಥಿಗಳ ಮಧ್ಯೆ ಸುಧಾ ಮೂರ್ತಿ ಒಬ್ಬರೇ ವಿದ್ಯಾರ್ಥಿನಿ.
'ಕೌನ್ ಬನೇಗ ಕರೋಡ್ ಪತಿ'ಯಲ್ಲಿ ಸುಧಾ ಮೂರ್ತಿ: ಅಮಿತಾಬ್ ಗೆ ಸಿಕ್ತು ವಿಶೇಷ ಉಡುಗೊರೆ

ಷರತ್ತು ವಿಧಿಸಿದ್ದ ಪ್ರಾಂಶುಪಾಲರು
ಇಂಜಿನಿಯರಿಂಗ್ ಕಾಲೇಜಿನಲ್ಲಿ ಏಕೈಕ ವಿದ್ಯಾರ್ಥಿನಿ ಆಗಿದ್ದ ಸುಧಾ ಮೂರ್ತಿಗೆ ಪ್ರಾಂಶುಪಾಲರು ಮೂರು ಷರತ್ತುಗಳನ್ನು ವಿಧಿಸಿದ್ದರಂತೆ. ಒಂದು.. ಆಕೆ ಪ್ರತಿದಿನ ಸೀರೆಯುಟ್ಟು ಬರಬೇಕು. ಎರಡು.. ಕಾಲೇಜಿನ ಕ್ಯಾಂಟೀನ್ ಗೆ ಹೋಗಬಾರದು. ಮೂರು.. ಹುಡುಗರ ಜೊತೆ ಮಾತನಾಡಬಾರದು. ಈ ಮೂರು ಷರತ್ತುಗಳನ್ನು ಪಾಲಿಸಿದ ಸುಧಾ ಮೂರ್ತಿ ಟಾಪರ್ ಆದರು.
ಅನ್ನ, ನೀರು ಕೊಡದೆ 4 ದಿನ ನಾರಾಯಣಮೂರ್ತಿಗೆ ಹಿಂಸೆ ನೀಡಿದ್ದ ಪ್ಯಾರೀಸ್ ಸಿಬ್ಬಂದಿ

ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಇರಲಿಲ್ಲ.!
ಸುಧಾ ಮೂರ್ತಿ ಶಿಕ್ಷಣ ಪಡೆದ ಕಾಲೇಜಿನಲ್ಲಿ ಶೌಚಾಲಯದ ವ್ಯವಸ್ಥೆ ಇರಲಿಲ್ಲವಂತೆ. ಹೆಣ್ಣು ಮಕ್ಕಳ ಕಷ್ಟವನ್ನು ಅರಿತಿರುವ ಸುಧಾ ಮೂರ್ತಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಇಲ್ಲಿಯವರೆಗೂ ಹಲವು ಕಡೆ ಶೌಚಾಲಯಗಳನ್ನು ನಿರ್ಮಿಸಿದ್ದಾರೆ.
ನಾರಾಯಣ ಮೂರ್ತಿ ಅವರನ್ನ ರಿಜೆಕ್ಟ್ ಮಾಡಿದ್ದರು ವಿಪ್ರೋ ಸಂಸ್ಥಾಪಕ ಪ್ರೇಮ್ ಜಿ

ಹತ್ತು ಸಾವಿರದಿಂದ ಪ್ರಾರಂಭವಾದ ಇನ್ಫೋಸಿಸ್
ಆಗಿನ ಕಾಲಕ್ಕೆ ತಮಗೆ ಬರುವ ಸಂಬಳದಿಂದ ಸುಧಾ ಮೂರ್ತಿ ಹತ್ತು ಸಾವಿರ ರೂಪಾಯಿ ಕೂಡಿಟ್ಟಿದ್ದರು. ಇನ್ಫೋಸಿಸ್ ಸ್ಥಾಪಿಸಲು ನಾರಾಯಣ ಮೂರ್ತಿ ಮುಂದಾದಾಗ ಬಂಡವಾಳ ರೂಪದಲ್ಲಿ ಆ ಹತ್ತು ಸಾವಿರ ರೂಪಾಯಿಯನ್ನ ಸುಧಾ ಮೂರ್ತಿ ನೀಡಿದ್ದರಂತೆ.

ಸಿನಿಮಾಗಳನ್ನೂ ನೋಡುವ ಸುಧಾ ಮೂರ್ತಿ
ಸಾಮಾಜಿಕ ಕಳಕಳಿ ಹೊಂದಿರುವ ಸುಧಾ ಮೂರ್ತಿ ನಾಲ್ಕು ಬಾರಿ ಹಿಂದಿಯ 'ಮೊಘಲ್-ಏ-ಆಝಾಂ' ಚಿತ್ರವನ್ನ ನೋಡಿದ್ದರಂತೆ. ಈ ವಿಚಾರ ಕೇಳಿ ಅಮಿತಾಬ್ ಬಚ್ಚನ್ ಖುಷಿ ಪಟ್ಟರು.

ಜೆ.ಆರ್.ಡಿ ಟಾಟಾಗೆ ಪತ್ರ ಬರೆದಿದ್ದ ಸುಧಾ ಮೂರ್ತಿ
1974, ಮಾರ್ಚ್ ನಲ್ಲಿ ಸುಧಾ ಮೂರ್ತಿ ಎಂ.ಟೆಕ್ ಓದುತ್ತಿದ್ದರು. ಆಗ ಟೆಲ್ಕೋ ಕಂಪನಿಯಲ್ಲಿ ಉದ್ಯೋಗಾವಕಾಶವಿದ್ದ ಕುರಿತು ನೋಟೀಸ್ ಬಂದಿತ್ತು. ಆ ನೋಟೀಸ್ ನಲ್ಲಿ ಕೆಲಸಕ್ಕೆ ವಿದ್ಯಾರ್ಥಿನಿಯರು ಅಪ್ಲೈ ಮಾಡುವ ಹಾಗಿಲ್ಲ ಎಂದು ಬರೆಯಲಾಗಿತ್ತು. ಇದನ್ನ ಕಂಡ ಸುಧಾ ಮೂರ್ತಿ ನೇರವಾಗಿ ಜೆ.ಆರ್.ಡಿ ಟಾಟಾಗೆ ಪತ್ರ ಬರೆದಿದ್ದರು. ಆ ಪತ್ರ ಓದಿದ ಜೆ.ಆರ್.ಡಿ ಟಾಟಾ ಟೆಲ್ಕೋ ಕಂಪನಿಯಲ್ಲಿ ಸುಧಾ ಮೂರ್ತಿಗೆ ಕೆಲಸ ಕೊಟ್ಟರು. ಆ ಮೂಲಕ ಟೆಲ್ಕೋ ಕಂಪನಿಯಲ್ಲಿ ಸುಧಾ ಮೂರ್ತಿ ಮೊಟ್ಟ ಮೊದಲ ಮಹಿಳಾ ಉದ್ಯೋಗಿ ಆದರು.

ಉತ್ತಮವಾಗಿ ಆಟ ಆಡಿದ ಸುಧಾ ಮೂರ್ತಿ
ತಮ್ಮ ಜೀವನದ ಸ್ವಾರಸ್ಯಕರ ಘಟನೆಗಳನ್ನು ಹೇಳುತ್ತಾ, ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಸುಧಾ ಮೂರ್ತಿ 'ಕೌನ್ ಬನೇಗಾ ಕರೋಡ್ ಪತಿ'ಯಲ್ಲಿ ಉತ್ತಮವಾಗಿ ಆಟ ಆಡಿದರು. 25 ಲಕ್ಷದವರೆಗೂ ಸರಾಗವಾಗಿ ಆಡಿದ ಸುಧಾ ಮೂರ್ತಿ ಸ್ಪೀಡ್ ಗೆ ಬ್ರೇಕರ್ ಹಾಕಿದ್ದು 50 ಲಕ್ಷದ ಪ್ರಶ್ನೆ.!

50 ಲಕ್ಷದ ಪ್ರಶ್ನೆ ಯಾವುದು.?
''ಸತತ ಎರಡು ವರ್ಷಗಳ ಕಾಲ ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ತಾರೆ ಯಾರು.?'' ಎಂಬುದು 50 ಲಕ್ಷದ ಪ್ರಶ್ನೆ ಆಗಿತ್ತು. ಇದಕ್ಕೆ ಶರ್ಮಿಳಾ ಠಾಗೋರ್, ಕಂಗನಾ ರಣಾವತ್, ಕಾಜೋಲ್ ಮತ್ತು ಜಯಾ ಬಚ್ಚನ್ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಈ ಪ್ರಶ್ನೆಗೆ ಸುಧಾ ಮೂರ್ತಿಗೆ ಉತ್ತರ ಗೊತ್ತಿರಲಿಲ್ಲ. ಹೀಗಾಗಿ ಆಟವನ್ನು ಅವರು ಕ್ವಿಟ್ ಮಾಡಿದರು.

ಉತ್ತರ ಏನು.?
ಆಟ ಕ್ವಿಟ್ ಮಾಡಿದ ಸುಧಾ ಮೂರ್ತಿ ಕೊನೆಗೆ 'ಕಾಜೋಲ್' ಇರಬಹುದು ಎಂದು ಊಹಿಸಿದರು. ನೋಡಿದ್ರೆ, ಸರಿಯಾದ ಉತ್ತರ 'ಜಯಾ ಬಚ್ಚನ್' ಆಗಿತ್ತು. ಇದರಿಂದ ಸ್ವಲ್ಪ ಬೇಸರಗೊಂಡ ಅಮಿತಾಬ್ ಬಚ್ಚನ್ ''ಮನೆ ತಲುಪಿದ ಮೇಲೆ ಗ್ಯಾರೆಂಟಿ ನನಗೆ ಏಟು ಬೀಳುತ್ತೆ'' ಎಂದರು. ಅಲ್ಲಿಗೆ, 'ಕೌನ್ ಬನೇಗಾ ಕರೋಡ್ ಪತಿ-11' ಫಿನಾಲೆ ಸಂಚಿಕೆಯಲ್ಲಿ ಸುಧಾ ಮೂರ್ತಿ 25 ಲಕ್ಷ ಗೆದ್ದರು. ಜೊತೆಗೆ ವೀಕ್ಷಕರಿಗೆ ತಮ್ಮ ಜೀವನದ ಸಂಗತಿಗಳನ್ನು ತಿಳಿಸಿ ಸ್ಫೂರ್ತಿ ತುಂಬಿದರು.