»   » ಸುಧೀಂದ್ರ ಕಂಚಿತೋಟ : ಸುವರ್ಣ ಟಿವಿ ಪ್ರೊಗ್ರಾಂ ಹೆಡ್

ಸುಧೀಂದ್ರ ಕಂಚಿತೋಟ : ಸುವರ್ಣ ಟಿವಿ ಪ್ರೊಗ್ರಾಂ ಹೆಡ್

Posted By:
Subscribe to Filmibeat Kannada

ಕನ್ನಡದ ಜನಪ್ರಿಯ ಸುವರ್ಣ ವಾಹಿನಿಗೆ ಹೊಸ ಪ್ರೊಗ್ರಾಮಿಂಗ್ ಹೆಡ್ ಆಗಿ ಸುಧೀಂದ್ರ ಕಂಚಿತೋಟ ಆಯ್ಕೆಯಾಗಿದ್ದಾರೆ. ಈ ವರೆಗೆ ಧಾರಾವಾಹಿ ವಿಭಾಗದ ಮುಖ್ಯಸ್ಥರಾಗಿದ್ದ ಅವರನ್ನು ಇದೇ ಆಗಸ್ಟ್ ತಿಂಗಳಿಂದ ಪೂರ್ಣ ಪ್ರಮಾಣದ ಪ್ರೊಗ್ರಾಮಿಂಗ್ ಹೆಡ್ ಆಗಿ ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಒನ್ ಇಂಡಿಯಾಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ: ಸುಧೀಂದ್ರ ಅವರೇ ಕಂಗ್ರಾಟ್ಸ್. ಹೇಗೆನ್ನಿಸುತ್ತಿದೆ?
ಸುಧೀಂದ್ರ : ತುಂಬಾ ಖುಷಿ ಆಗ್ತಿದೆ ಅನ್ನೋದಕ್ಕಿಂತ ಜವಾಬ್ದಾರಿ ಹೆಚ್ಚಾಗಿದೆ. ಸುವರ್ಣ ಸದಾ ಹೊಸತನಕ್ಕೆ, ಹೊಸ ಹೊಸ ರಿಯಾಲಿಟಿ ಶೋಗಳಿಗೆ ಹೆಸರುವಾಸಿ. ಜೊತೆಗೆ ಸೀರಿಯಲ್ ಪ್ರಪಂಚದಲ್ಲಿ ದೊಡ್ಡ ಮಟ್ಟದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಥ ಸಂದರ್ಭದಲ್ಲಿ ನನ್ನ ಮೇಲೆ ಈ ಮಟ್ಟದ ಜವಾಬ್ದಾರಿ ಹೊರಿಸಿರುವ ನಮ್ಮ ಚಾನೆಲ್ ಮುಖ್ಯಸ್ಥರಾದ ಅನೂಪ್ ಚಂದ್ರಶೇಖರ್ ಅವರಿಗೆ ಧನ್ಯವಾದ ಹೇಳಲೇಬೇಕು. ಅವರು ಈಗ ಸೌತ್ ಇಂಡಿಯಾದ ವಿಜಯ್ ಟಿವಿ (ತಮಿಳು), ಏಷ್ಯಾನೆಟ್ (ಮಲಯಾಳಂ) ಹಾಗೂ ಸುವರ್ಣ ವಾಹಿನಿಗೆ ಹೆಡ್ ಆಗಿದ್ದಾರೆ.

ಪ್ರ: ಹೊಸ ಮೂರು ಸೀರಿಯಲ್ ಲಾಂಚ್ ಮಾಡ್ತಾ ಇದ್ದೀರಾ? ಅದರ ಬಗ್ಗೆ
ಸುಧೀಂದ್ರ: ಹೌದು.. ಪ್ರಿಯದರ್ಶಿನಿ, ಅರಗಿಣಿ ಹಾಗೂ ಮಿಲನ ಎಂಬ ಮೂರು ಮೆಘಾ ಧಾರಾವಾಹಿಗಳನ್ನು ಇದೇ ಆಗಸ್ಟ್ 5 ರಿಂದ ಲಾಂಚ್ ಮಾಡುತ್ತಿದ್ದೇವೆ. ಕನ್ನಡದ ಕೊಟ್ಯಾಧಿಪತಿ ಸೀಸನ್ 2 ಮುಕ್ತಾಯವಾದ ಸಂದರ್ಭದಲ್ಲಿ ಆ ಜಾಗಕ್ಕೆ ಈ ಮೂರು ಧಾರಾವಾಹಿಯನ್ನು ರಿಪ್ಲೇಸ್ ಮಾಡುತ್ತಿದ್ದೇವೆ.

Sudheendra Kanchitota new programme head of Suvarna TV Kannada

ಪ್ರ: ನಾನ್ ಫಿಕ್ಷನ್ ಬಗ್ಗೆ ಹೇಳಿ?
ಸುಧೀಂದ್ರ : ಈಗತಾನೇ ಸುವರ್ಣ ಸೂಪರ್ ಜೋಡಿ ಮುಗಿಸುವ ಹಂತದಲ್ಲಿದ್ದೇವೆ. ಇದೇ ವಾರಾಂತ್ಯದಲ್ಲಿ ಅದರ ಗ್ರಾಂಡ್ ಫಿನಾಲೆ ಇದೆ. ಸೂಪರ್ ಜೋಡಿ ಯಾರಾಗುತ್ತಾರೆ ಎನ್ನುವುದಕ್ಕೆ ಉತ್ತರ ಬೇಕಾದರೆ ಪ್ರತೀ ರಾತ್ರಿ 8ಕ್ಕೆ ಸುವರ್ಣ ವಾಹಿನಿಯನ್ನು ಮಿಸ್ ಮಾಡದೇ ನೋಡಲೇಬೇಕು.

ಪ್ರ: ನಿಮ್ಮ ಅನುಭವದ ಬಗ್ಗೆ ಹೇಳಿ.
ಸುಧೀಂದ್ರ : ಆರು ವರ್ಷದಿಂದ ಸುವರ್ಣ ವಾಹಿನಿಯಲ್ಲಿದ್ದೇನೆ. ಅದಕ್ಕೂ ಮುಂಚೆ ವಿಜಯ ಕರ್ನಾಟಕದಲ್ಲಿದ್ದೆ. ವಿಶ್ವೇಶ್ವರ ಭಟ್ಟರ ಶಿಷ್ಯರಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಅಲ್ಲಿಂದ ಸುವರ್ಣ ವಾಹಿನಿಗೆ ಶಿಫ್ಟ್ ಆದ ನಂತರ ಅನೂಪ್ ಚಂದ್ರಶೇಖರ್ ಅವರು ನಮ್ಮನ್ನೆಲ್ಲಾ ಪ್ರೋತ್ಸಾಹಿಸಿ ಚಾನೆಲ್ ಹಾಗೂ ತಮ್ಮ ಸಹೋದ್ಯೋಗಿಗಳನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಆರು ವರ್ಷದಲ್ಲಿ ಸಾಕಷ್ಟು ಶ್ರಮ ವಹಿಸಿ ವಾಹಿನಿಗಾಗಿ ದುಡಿದಿದ್ದೇನೆ, ದುಡಿಯುತ್ತಲೇ ಇದ್ದೇನೆ. ನಾವು ಸುವರ್ಣ ವಾಹಿನಿಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ಪ್ರ: ಸೀರಿಯಲ್ ವಿಭಾಗ ಹೇಗಿದೆ?
ಸುಧೀಂದ್ರ : ಎಲ್ಲಾ ಆಲ್ ಮೋಸ್ಟ್ ಸೀರಿಯಲ್ ಗಳೂ ಸೂಪರ್ ಹಿಟ್. ಅಮೃತವರ್ಷಿಣಿ ಯಂತೂ ರಾಜ್ಯದ ಮೂಲೆ ಮೂಲೆಯಯಲ್ಲೂ ಗೆಲುವು ದಾಖಲಿಸಿದೆ. ಅಂತೆಯೇ ಎಲ್ಲಾ ವರ್ಗದ ಜನರಿಗೂ ಒಂದೊಂದು ಕೆಟಗರಿ ಸೀರಿಯಲ್ ಇರುವುದರಿಂದ ಸುವರ್ಣ ಸದಾ ಎಲ್ಲರಿಗೂ ಅಚ್ಚುಮೆಚ್ಚು!

ಪ್ರ: ಮುಂದಿನ ಯೋಜನೆಗಳು?
ಸುಧೀಂದ್ರ : ಒಂದಷ್ಟು ಹೊಸ ಹೊಸ ರೀಯಾಲಿಟಿ ಶೋಗಳ ಬಗ್ಗೆ ಪ್ಲಾನ್ ಮಾಡುತ್ತಿದ್ದೇವೆ. ಜೊತೆಗೆ ಸುವರ್ಣ ಪ್ಲಸ್ ಎಂಬ ಹೊಸ ಚಾನೆಲ್ ಕೂಡ ಇತ್ತೀಚೆಗೆ ಲಾಂಚ್ ಆಗಿದೆ. ಅಲ್ಲಿಯೂ ಸಹ ಸಾಕಷ್ಟು ಜವಾಬ್ದಾರಿ ನನ್ನ ಮೇಲಿದೆ. ಇವೆಲ್ಲವೂ ಒಂದರ್ಥದಲ್ಲಿ ಟೀಮ್ ವರ್ಕ್. ಎಲ್ಲಾ ಸಕ್ಸಸ್ ಹಿಂದೆ ಅನೂಪ್ ಚಂದ್ರಶೇಖರನ್ ಎಂಬ ಅದಮ್ಯ ಶಕ್ತಿ ಇದೆ ಎಂಬ ಧೈರ್ಯ ಹಾಗೂ ವಿಶ್ವಾಸ ಸದಾ ಇರುವುದರಿಂದ ಎಲ್ಲಾ ವಿಷಯದಲ್ಲೂ ಗೆಲುವು ನಮ್ಮದಾಗುತ್ತದೆ ಎಂಬ ನಂಬಿಕೆಯಿದೆ.

English summary
Sudheendra Kanchitota elevated as full time programming head of Suvarna TV, Kannada Entertainment Channel. In an interview to Oneindia Kannada, Sudheendra shares his dreams and plans to take the channel to the next level.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada