Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್-ಯಶ್ ಸ್ಟಾರ್ ಆಗಿ ಬಂದಿಲ್ಲ : ಮಂಡ್ಯ ಚುನಾವಣೆಯ ರಹಸ್ಯ ಬಿಚ್ಚಿಟ್ಟ ಸುಮಲತಾ
ಮಂಡ್ಯದ ನೂತನ ಸಂಸದೆಯಾಗಿ ಸುಮಲತಾ ಅಂಬರೀಶ್ ಆಯ್ಕೆಯಾಗಿದ್ದಾರೆ. ನಿಖಿಲ್ ಕುಮಾರ್ ಸ್ವಾಮಿ ವಿರುದ್ಧ ಅಭೂತ ಪೂರ್ವ ಗೆಲುವು ದಾಖಲಿಸಿದ ಸುಮಲತಾ ಅಂಬರೀಶ್ ತನ್ನ ಗೆಲುವುಗೆ ಕಾರಣರಾದವರನ್ನು ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ.
ಮಂಡ್ಯದಲ್ಲಿ ಸುಮಲತಾ ಗೆದ್ದು ಬೀಗಲು ಕಾರಣರಾದ ಪ್ರಮುಕರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್. ಸುಮಲತಾ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯೆ ನಿಂತು, ಅವರಿಗೆ ಸಾಥ್ ಕೊಟ್ಟು ಮಂಡ್ಯದಲ್ಲಿ ಗೆಲುವು ದಾಖಲಿಸಲು ಜೊಡೆತ್ತುಗಳು ಪಾತ್ರ ಪ್ರಮುಕ.
ಸಾವಿರ ಸಿನಿಮಾ ಮಾಡಿರುವ ಹೊನ್ನವಳ್ಳಿ ಕೃಷ್ಣಗೆ 'ವೀಕೆಂಡ್ ವಿತ್ ರಮೇಶ್'ನಲ್ಲಿ ಜಾಗ ಇಲ್ಲವೇ?
ಕಳೆದ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕುಳಿತಿದ್ದ ಸುಮಲತಾ ಮಂಡ್ಯ ಚುನಾಮಣೆಯ ಒಂದಿಷ್ಟು ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ದರ್ಶನ್ ಮತ್ತು ಯಶ್ ಇಬ್ಬರು ಸ್ಟಾರ್ಸ್ ಆಗಿ ಬಂದಿಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ತುಂಬಾ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮುಂದೆ ಓದಿ..

ದರ್ಶನ್-ಯಶ್ ಸ್ಟಾರ್ಸ್ ಆಗಿ ಬಂದಿಲ್ಲ
ಮಂಡ್ಯ ಚುವಾವಣೆಯ ಪ್ರಮುಕ ಭಾಗವಾಗಿದ್ದವರು ಅಂದ್ರೆ ದರ್ಶನ್ ಮತ್ತು ಯಶ್. ಇಬ್ಬರು ನಟರು ಹಗಲು ರಾತ್ರಿ ಎನ್ನದೆ ಕಷ್ಟ-ಪಟ್ಟು ಸುಮಲತಾ ಪರ ಪ್ರಚಾರ ಮಾಡಿದ್ದಾರೆ. ಸ್ಟಾರ್ ಗಿರಿಯನ್ನು ಪಕ್ಕಕ್ಕೆ ಇಟ್ಟು ಮಂಡ್ಯ ಅಕಾಡಕ್ಕೆ ದುಮುಕ್ಕಿದ್ದರು. "ಇಬ್ಬರು ಸ್ಟಾರ್ ಆಗಿ ಬಂದಿಲ್ಲ. ಸ್ಟಾರ್ ಯಾರು ಆ ರಿಸ್ಕ್ ತೆಗೆದುಕೊಂಡು ಬರಲ್ಲ. 15 ದಿನ ಬಿಸಿಲಿನಲ್ಲಿ ನಿಂತು ಪ್ರಚಾರ ಮಾಡಲ್ಲ. ನನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದಾರೆ" ಎಂದು ಸುಮಲತಾ ಹೇಳಿದ್ದಾರೆ.
ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು

ಕೊಟ್ಟ ಮಾತನ್ನು ಉಳಿಸಿಕೊಂಡ್ರು
"ದರ್ಶನ್ ಮತ್ತು ಯಶ್ ಇಬ್ಬರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಖತ್ ರಿಸ್ಕ್ ತೆಗೆದುಕೊಂಡಿದ್ದಾರೆ. ಚುನಾವಣೆಗೆ ನಿಲ್ಲಲು ಮಂಡ್ಯದ ಜನ ತುಂಬ ಒತ್ತಾಯ ಮಾಡುತ್ತಿದ್ದರು. ಇದನ್ನ ಮೊದಲ ಬಾರಿಗೆ ರಾಕ್ ಲೈನ್ ವೆಂಕಟೇಶ್ ಅವರ ಬಳಿ ಚರ್ಚಿಸಿದೆ. ನಿಮ್ಮ ಬೆಂಬಲಕ್ಕೆ ಸದಾ ನಿಲ್ಲುವುದಾಗಿ ಹೇಳಿದ್ರು. ಆ ನಂತರ ದರ್ಶನ್ ಮತ್ತು ಯಶ್ ಅವರನ್ನು ಕರೆಸಿ ಕೇಳಿದಾಗ ಚುನಾವಣೆಯ ವಿಚಾರ ಹೇಳಿದಾಗ, ನಿಮ್ಮ ನಿರ್ಧಾರಕ್ಕೆ ನಾವು ಬದ್ದರಾಗಿ ಇರುತ್ತೇವೆ, ನಿಮ್ಮ ಜೊತೆ ನಾವಿರುತ್ತೇವೆ, ಏನೆ ಬಂದ್ರು ಎದುರಿಸುತ್ತೇವೆ, ನೀವು ಚುನಾವಣೆಗೆ ನಿಂತುಕೊಳ್ಳಿ" ಎಂದು ಹೇಳಿದ್ರಂತೆ. ಈಮಾತನ್ನು ಉಳಿಸಿಕೊಂಡಿದ್ದಾರೆ.
ಟಿ ಎಸ್ ನಾಗಾಭರಣ ಸಂಚಿಕೆಯ 'ವೀಕೆಂಡ್ ವಿತ್ ರಮೇಶ್' ಪ್ರೊಮೋ ನೋಡಿ

ಥ್ಯಾಂಕ್ಸ್ ಮತ್ತು ಸ್ವೀಟ್ ಸಣ್ಣ ಪದ
ಯಶ್ ಮತ್ತು ದರ್ಶನ್ ಇಬ್ಬರಿಗು ಥ್ಯಾಂಕ್ಸ್ ಮತ್ತು ಸ್ವೀಟ್ ಅಂದ್ರೆ ತುಂಬಾ ಚಿಕ್ಕದಾಗುತ್ತೆ.ಆದ್ರೆ ಅವರಿಬ್ಬರು ಇಲ್ಲ ಅಂದಿದ್ರೆ ನನಗೆ ಧೈರ್ಯಾನೆ ಬರುತ್ತಿರಲ್ಲಿಲ್ಲ. ಎಂದು ಸುಮಲತಾ ಹೇಳಿದ್ದಾರೆ. ಜೊತೆಗೆ ಥ್ಯಾಂಕ್ಸ್ ಹೇಳಿದ್ರೆ ಬೈತಾರೆ ಹಾಗಾಗಿ ಥ್ಯಾಂಕ್ಸ್ ಹೇಳೋಕೆ ಹೊಗಲ್ಲ. ಆದ್ರೆ ಯವತ್ತು ನಾನು ಅವರನ್ನು ಮರೆಯೊಲ್ಲ. ಎಂದು ದರ್ಶನ್ ಮತ್ತು ಯಶ್ ಬಗ್ಗೆ ಹೇಳಿದ್ದಾರೆ.

ತುಂಬಾ ರಿಸ್ಕ್ ತೆಗೆದುಕೊಂಡಿದ್ದಾರೆ
ದರ್ಶನ್ ಮತ್ತು ಯಶ್ ಇಬ್ಬರು ತುಂಬಾನೆ ರಿಸ್ಕ್ ತೆಗೆದುಕೊಂಡಿದ್ದಾರೆ. ಗೆಸ್ಟ್ ಅಪೀಯರೆನ್ಸ್ ತರ ಬಂದಿಲ್ಲ. ರೂಲಿಂಗ್ ಪಾರ್ಟಿಯನ್ನೆ ಎದುರು ಹಾಕಿಕೊಂಡು 15 ದಿನಗಳ ಕಾಲ ಬಿಸಿಲಿನಲ್ಲಿ ನಿಂತು ಪ್ರಚಾರ ಮಾಡಿದ್ದಾರೆ. ಅವರೆ ಎಲೆಕ್ಷನ್ ಗೆ ನಿಂತಿದ್ದಾರೆ ಎನ್ನುವ ಹಾಗೆ ಪ್ರಚಾರ ಮಾಡಿದ್ದಾರೆ. ಜೊತೆಗೆ ನಿಂತಿದ್ದಾರೆ. ಸ್ವಂತ ಮಕ್ಕಳಾಗಿದ್ರು ಇಷ್ಟು ರಿಸ್ಕ್ ತೆಗೆದುಕೊಳ್ಳುತ್ತಿರಲ್ಲಿವೇನೊ. ಆದ್ರೆ ದರ್ಶನ್ ಮತ್ತು ಯಶ್ ಇಬ್ಬರು ತುಂಬಾನೆ ಕಷ್ಟಪಟ್ಟಿದ್ದಾರೆ ಎಂದು ಸುಮಲತಾ ಹೇಳಿದ್ದಾರೆ.