For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಜೊತೆ ಆಕ್ಟ್ ಮಾಡಬಾರದೆಂದು ನಿರ್ಧರಿಸಿದ್ದರಂತೆ ಸುಮಲತಾ

  |
  Weekend With Ramesh Season 4: ಸುಮಲತಾ, ಅಂಬಿ ಅಭಿನಯದ ಮೊದಲ ಸಿನೆಮಾ ಆಹುತಿ | FILMIBEAT KANNADA

  1980ರಲ್ಲಿ ಡಾ ರಾಜ್ ಕುಮಾರ್ ಅಭಿನಯದ 'ರವಿಚಂದ್ರ' ಸಿನಿಮಾ ಮೂಲಕ ಕನ್ನಡ ಸಿನಿ ಇಂಡಸ್ಟ್ರಿ ಪ್ರವೇಶ ಮಾಡಿದ ಸುಮಲತಾ ಎರಡನೇ ಸಿನಿಮಾದಲ್ಲೇ ಅಂಬರೀಶ್ ಜೊತೆ ನಟಿಸುವ ಅವಕಾಶ ಪಡೆದರು. ಅಂಬಿ ಜೊತೆ ಸಿನಿಮಾ ಮಾಡಲು ಒಪ್ಪಿಗೆ ನೀಡಿ ಕಾಲ್ ಶೀಟ್ ಕೊಟ್ಟಿದ್ದ ಸುಮಲತಾ, ನಂತರ ಅಂಬಿ ಜೊತೆ ಆಕ್ಟ್ ಮಾಡಬಾರದು ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರಂತೆ.

  ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದ ಸುಮಲತಾ ಅವರು ವಿಷ್ಣು ಜೊತೆ ಸಿನಿಮಾ ಮಾಡಬೇಕು ಎಂದು ಕಾಯ್ತಿದ್ದರಂತೆ. ಆದರೆ, ಡೇಟ್ ಸಮಸ್ಯೆಯಿಂದ ಬಂದ ಸಿನಿಮಾಗಳನ್ನ ಮಾಡಲು ಆಗಲಿಲ್ಲ. ಈ ಗ್ಯಾಪ್ ನಲ್ಲಿ ಬಂದ ಚಿತ್ರವೇ ಆಹುತಿ.

  ಆಗಿನ ಕಾಲಕ್ಕೆ ದೊಡ್ಡ 'ಸ್ಟಾರ್' ಆಗಿದ್ದರು ಸುಮಲತಾ ಅಂಬರೀಶ್ ತಂದೆ ಆಗಿನ ಕಾಲಕ್ಕೆ ದೊಡ್ಡ 'ಸ್ಟಾರ್' ಆಗಿದ್ದರು ಸುಮಲತಾ ಅಂಬರೀಶ್ ತಂದೆ

  ಅದು 1985ರಲ್ಲಿ ಬಂದ ಚಿತ್ರ. ಅಂಬರೀಶ್ ನಾಯಕ. ಅಂಬಿ ಜೊತೆ ಸುಮಲತಾ ಅವರ ಮೊದಲ ಸಿನಿಮಾ. ಅಂಬರೀಶ್ ಅವರ ಬಗ್ಗೆ ಕೇಳಿದ ಬಂದ ಕೆಲವು ಸುದ್ದಿಗಳಿಂದ ಸುಮಲತಾ ಹಾಗೂ ಅವರ ತಾಯಿ ಭಯಗೊಂಡಿದ್ದರಂತೆ. ಈ ಸಿನಿಮಾದಲ್ಲಿ ನಟಿಸುತ್ತಿದ್ದ ಸುಮಲತಾ, ಸಡನ್ ಆಗಿ ನಟಿಸಲ್ಲ ಎಂದು ಅಮ್ಮನ ಬಳಿ ಹೇಳಿದ್ರಂತೆ. ಯಾಕೆ? ಮುಂದೆ ಓದಿ....

  ಅಂಬಿ ಬಗ್ಗೆ ಕೇಳಿದ್ದ ಕಥೆಗಳು ಕಾರಣ

  ಅಂಬಿ ಬಗ್ಗೆ ಕೇಳಿದ್ದ ಕಥೆಗಳು ಕಾರಣ

  ಸುಮಲತಾ ಮತ್ತು ಸುಹಾಸಿನಿ ಒಳ್ಳೆಯ ಸ್ನೇಹಿತರು. ಸುಮಲತಾ ಬಳಿ ಅಂಬರೀಶ್ ಬಗ್ಗೆ ಸುಹಾಸಿನಿ ಕೆಲವು ಕಥೆಗಳು ಹೇಳಿದ್ದರಂತೆ. ಅವರು ಹಾಗೆ, ಅವರು ಹೀಗೆ ಎಂದು ಸುಹಾಸಿನಿ ಹೇಳಿದ್ದನ್ನ ಕೇಳಿ ಸುಮಲತಾಗೆ ಭಯ ಆಯ್ತಂತೆ. ಆಗ ಅಮ್ಮನ ಬಳಿ ಹೋಗಿ ' ಅಮ್ಮ ನಾನು ಅಂಬರೀಶ್ ಜೊತೆ ಆಕ್ಟ್ ಮಾಡಲ್ಲ' ಎಂದರಂತೆ. ಅದಕ್ಕೆ ಅಮ್ಮ 'ಏನ್ ಹೇಳ್ತಿದ್ದಿಯಾ, ಕಮಿಟ್ ಮೆಂಟ್ ಆಗಿದೆ, ಡೇಟ್ ಫಿಕ್ಸ್ ಆಗಿದೆ, ಅಡ್ವಾನ್ಸ್ ಎಲ್ಲ ಕೊಟ್ಟಿದ್ದಾರೆ. ಏನೂ ಆಗಲ್ಲ, ನಾನು ಅಲ್ಲೇ ಇರ್ತೀನಿ ಅಲ್ವಾ' ಎಂದು ಹೇಳಿದ್ರು.

  ಅಂಬರೀಶ್-ಸುಮಲತಾ ನಡುವೆ ಪ್ರೀತಿ ಮೂಡಿದ್ಹೇಗೆ.? 'ರೆಬೆಲ್ ಇನ್ ಟ್ರಬಲ್' ಕಥೆ ಇಲ್ಲಿದೆ.. ಅಂಬರೀಶ್-ಸುಮಲತಾ ನಡುವೆ ಪ್ರೀತಿ ಮೂಡಿದ್ಹೇಗೆ.? 'ರೆಬೆಲ್ ಇನ್ ಟ್ರಬಲ್' ಕಥೆ ಇಲ್ಲಿದೆ..

  ಅವರು ಜೊತೆ ಮಾತನಾಡಬೇಡ

  ಅವರು ಜೊತೆ ಮಾತನಾಡಬೇಡ

  ಸುಮಲತಾ ಅವರ ಮೇಕಪ್ ಮ್ಯಾನ್ ಆಗಿದ್ದ ಹಿರಿಯ ಮೇಕಪ್ ಮ್ಯಾನ್ ಕೃಷ್ಣನ್ ಅವರು ಸುಮಲತಾ ಅವರಿಗೆ ಒಂದು ಸಲಹೆ ನೀಡಿದ್ರಂತೆ. ''ಶೂಟಿಂಗ್ ಮುಗಿದ ಮೇಲೆ ಅವರು ಬಂದು ಮಾತನಾಡಿಸುತ್ತಾರೆ ನೀನು ಮಾತನಾಡಬಾರದು, ಜೋರಾಗಿ ನಗಿಸುತ್ತಾರೆ ನಗಬಾರದು. ಪಕ್ಕದಲ್ಲೇ ಚೇರ್ ಹಾಕ್ಕೊಂಡು ಕುಳಿತುಕೊಳ್ಳುತ್ತಾರೆ. ನೀನು ಅಲ್ಲಿಂದ ಬೇರೆ ಕಡೆಗೆ ಹೋಗ್ಬೇಕು' ಎಂದು ಹೇಳಿದ್ರು.

  ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು

  ಮೊದಲ ಭೇಟಿಯಲ್ಲಿ ಗೊತ್ತಾಯ್ತು

  ಮೊದಲ ಭೇಟಿಯಲ್ಲಿ ಗೊತ್ತಾಯ್ತು

  ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಾಂಗ್ ಶೂಟಿಂಗ್ ಅದು. ಮೊದಲ ದಿನ ಭೇಟಿಯಾಗಿ, ಅವರು ಮಾತನಾಡುವುದು, ಅವರ ನಡವಳಿಕೆ, ಅವರ ವ್ಯಕ್ತಿತ್ವ ನೋಡಿದ್ಮೇಲೆ 'ಛೇ ಅವರು ತುಂಬಾ ಒಳ್ಳೆಯವರು' ಎಂಬ ಭಾವನೆ ಬಂದು ಬಿಡ್ತು.

  ಕಣ್ಣೀರಿಟ್ಟು, ಕೈಮುಗಿದು, ಅಭಿಮಾನಿಗಳೇ 'ದೇವರು' ಎಂದು ಗದ್ಗದಿತರಾದ ಅಂಬಿಕಣ್ಣೀರಿಟ್ಟು, ಕೈಮುಗಿದು, ಅಭಿಮಾನಿಗಳೇ 'ದೇವರು' ಎಂದು ಗದ್ಗದಿತರಾದ ಅಂಬಿ

  ಪಕ್ಕದಲ್ಲಿ ಚೇರ್ ಹಾಕ್ಕೊಂಡು ಬಂದ್ರು

  ಪಕ್ಕದಲ್ಲಿ ಚೇರ್ ಹಾಕ್ಕೊಂಡು ಬಂದ್ರು

  ''ಎರಡು ಮೂರು ದಿನ ಶೂಟಿಂಗ್ ಆಗಿತ್ತು. ಶೂಟ್ ಮುಗಿದ ಮೇಲೆ ನಾನು ಬುಕ್ ಓದುತ್ತಾ ಕೂತಿದ್ದೆ. ಅವರು ಎರಡು ದಿನ ನೋಡಿದ್ರು. ಆಮೇಲೆ ನನ್ನ ಪಕ್ಕದಲ್ಲಿ ಬಂದು ಚೇರ್ ಹಾಕ್ಕೊಂಡು ಕೂತರು. ''ಬುಕ್ ಓದುವುದು ತಪ್ಪು, ಶೂಟಿಂಗ್ ಸಮಯದಲ್ಲಿ ಬುಕ್ ಎಲ್ಲ ಓದಬಾರದು. ಎಲ್ಲರ ಜೊತೆ ಮಾತನಾಡಬೇಕು' ಎಂದು ಹೇಳಿದ್ರು. ಆಮೇಲೆ ಏನ್ ಮಾಡ್ಬೇಕು ಎಂದು ಕೇಳಿದಾಗ ''ಕಾರ್ಡ್ಸ್ ಆಡಬೇಕು'' ಎಂದರು. ಹೀಗೆ ಅಲ್ಲಿಂದ ಪರಿಚಯ ಬೆಳೆಯಿತು'' ಎಂದು ಸುಮಲತಾ ತಿಳಿಸಿದರು.

  English summary
  Weekend with ramesh 4: Kannada actress Sumalatha did not like to act with amabrish in her first film ahuthi. what is the reason behind that decision? check it...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X