For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ವಿರುದ್ಧದ ಹೋರಾಟಕ್ಕೆ 30 ಕೋಟಿ ದೇಣಿಗೆ ಘೋಷಿಸಿದ ಸನ್‌ ಟಿವಿ

  |

  ಭಾರತದಲ್ಲಿ ಕೊರೊನಾ ವೈರಸ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ದೇಶದಲ್ಲಿ ಒಂದು ದಿನಕ್ಕೆ ಸುಮಾರು 4 ಲಕ್ಷದವರೆಗೂ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ನಡುವೆ ಆಕ್ಸಿಜನ್ ಸಮಸ್ಯೆ, ಬೆಡ್ ಸಮಸ್ಯೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ಅನೇಕ ಸಾವು-ನೋವು ಸಂಭವಿಸಿದೆ.

  ಕೊರೊನಾ ವಿರುದ್ಧದ ಹೋರಾಟದಲ್ಲಿ ಸೆಲೆಬ್ರಿಟಿಗಳು, ಸಂಘ-ಸಂಸ್ಥೆಗಳು ಖಾಸಗಿಯಾಗಿ ಜನರಿಗೆ ಸಹಾಯ ಮಾಡುತ್ತಿವೆ. ಇದೀಗ, ಸನ್ ಟಿವಿ ನೆಟ್‌ವರ್ಕ್ ಕೊರೊನಾ ವಿರುದ್ಧ ಹೋರಾಡಲು 30 ಕೋಟಿ ದೇಣಿಗೆ ನೀಡುವುದಾಗಿ ಪ್ರಕಟಿಸಿದೆ.

  ಸಂಕಷ್ಟದಲ್ಲಿರುವ ಕಾರ್ಮಿಕ, ಕಲಾವಿದ, ತಂತ್ರಜ್ಞರ ನೆರವಿಗೆ ಧಾವಿಸಿದ ಉಪೇಂದ್ರ ಸಂಕಷ್ಟದಲ್ಲಿರುವ ಕಾರ್ಮಿಕ, ಕಲಾವಿದ, ತಂತ್ರಜ್ಞರ ನೆರವಿಗೆ ಧಾವಿಸಿದ ಉಪೇಂದ್ರ

  ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸುವುದಾಗಿ ಹಾಗೂ ಈ ಹಣ ಬಳಕೆ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

  ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಇತರೆ ಭಾಷೆಯಲ್ಲಿ ಸನ್‌ ನೆಟ್‌ವರ್ಕ್ ವಾಹಿನಿಗಳನ್ನು ಹೊಂದಿದೆ. ಕಲಾನಿಧಿ ಮಾರನ್ ಸನ್ ನೆಟ್‌ವರ್ಕ್ ಸಂಸ್ಥೆಯ ಮಾಲೀಕರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಮೊಮ್ಮಗ.

  ಪ್ರಸ್ತುತ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದಿಂದ ಸ್ಟಾಲಿನ್ ಮುಖ್ಯಮಂತ್ರಿಯಾಗಿದ್ದಾರೆ. ಕಲಾನಿಧಿ ಮಾರನ್ ಸಹ ಇದೇ ಕುಟುಂಬದವರು. ಕಳೆದ ವರ್ಷದ ಕೊರೊನಾ ವಿರುದ್ಧದ ಹೋರಾಟಕ್ಕೆ 10 ಕೋಟಿ ದೇಣಿಗೆ ಘೋಷಿಸಿತ್ತು ಸನ್‌ ನೆಟ್‌ವರ್ಕ್.

  English summary
  Sun TV is donating 30 crores to provide relief to those affected by the second wave of the Covid-19 pandemic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X