»   » ಯಾರಿದು? 'ಮಜಾ ಟಾಕೀಸ್'ನಲ್ಲಿ ಪ್ರತ್ಯಕ್ಷವಾದ ಜೂನಿಯರ್ ಟಾಕಿಂಗ್ ಸ್ಟಾರ್!

ಯಾರಿದು? 'ಮಜಾ ಟಾಕೀಸ್'ನಲ್ಲಿ ಪ್ರತ್ಯಕ್ಷವಾದ ಜೂನಿಯರ್ ಟಾಕಿಂಗ್ ಸ್ಟಾರ್!

Posted By:
Subscribe to Filmibeat Kannada

ಸೃಜನ್ ಲೋಕೇಶ್ ಹೆಸರು ಕೇಳಿದ ತಕ್ಷಣ ಅವರ ಸಿನಿಮಾಗಳಿಗಿಂತ ಮೊದಲು ನೆನಪಿಗೆ ಬರುವುದೇ 'ಮಜಾ ಟಾಕೀಸ್'. ಮಾತಲ್ಲೇ ಮನೆ ಕಟ್ಟುವ ಟಾಕಿಂಗ್ ಸ್ಟಾರ್ ಸೃಜನ್ ಬೆಳ್ಳಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಜನಪ್ರಿಯ ಸೆಲೆಬ್ರಿಟಿ.

ಅಂದಹಾಗೆ ವೀಕೆಂಡ್ ಬಂತೆಂದರೆ ಸೃಜನ್ ಲೋಕೇಶ್ ರವರ ಪಂಚಿಂಗ್ ಡೈಲಾಗ್ ನಿರೂಪಣೆ ನೋಡಲೆಂದೇ ರಾತ್ರಿ 8 ಕ್ಕೆ ಸರಿಯಾಗಿ ಬಹುಸಂಖ್ಯಾತರು ಕಲರ್ಸ್ ಕನ್ನಡ ವಾಹಿನಿ ಟ್ಯೂನ್ ಮಾಡುತ್ತಾರೆ. ಆದರೀಗ ಸೃಜನ್ ಗಿಂತ ಒಂದು ಪಟ್ಟು ಹೆಚ್ಚಾಗಿಯೇ ಕಾಮಿಡಿಯಾಗಿ ಪಂಚಿಂಗ್ ಡೈಲಾಗ್ ಗಳನ್ನು ಹೇಳಿ, ಸೂಪರ್ ಸ್ಟೆಪ್‌ಗಳನ್ನು ಹಾಕುವ ಮೂಲಕ ಜೂನಿಯರ್ ಟಾಕಿಂಗ್ ಸ್ಟಾರ್ ನಂತೆ ಹುಡುಗನೊಬ್ಬ 'ಮಜಾ ಟಾಕೀಸ್'ನಲ್ಲಿ ನಿರೂಪಣೆ ಮಾಡಿದ್ದಾನೆ. ಈತನ ಹೋಸ್ಟಿಂಗ್ ಸ್ಟೈಲ್ ನೋಡಿದ 'ಮಜಾ ಟಾಕೀಸ್'ನಲ್ಲಿ ಕುಳಿತಿದ್ದ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದು ಮಾತ್ರವಲ್ಲದೇ ಆತನ ಪ್ರತಿಭೆಗೆ ನಿಂತು ಹ್ಯಾಟ್ಸಾಪ್ ಹೇಳಿದ್ದಾರೆ.

Super Hosting by a boy in 'Majaa Takies' like a Junior Talking Star

ಅಂದಹಾಗೆ ಈ ಜೂನಿಯರ್ ಟಾಕಿಂಗ್ ಸ್ಟಾರ್ ನಂತೆ ನಿರೂಪಣೆ ಮಾಡಿರುವ ಪ್ರೋಮೋವನ್ನು ಕಲರ್ಸ್ ಕನ್ನಡ ಫೇಸ್‌ಬುಕ್ ಪೇಜ್ ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಆ ವಿಡಿಯೋ ನೋಡಿದ ಹಲವರು ಪ್ರಶಂಸಿಸಿ ಕಾಮೆಂಟ್ ಮಾಡಿದ್ದಾರೆ. ಆ ಹುಡುಗ ಹೋಸ್ಟ್ ಮಾಡಿರುವ 'ಮಜಾ ಟಾಕೀಸ್' ಎಪಿಸೋಡ್ ಇಂದು(ಜುಲೈ 23)ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ನೋಡಿದವರೆಲ್ಲಾ ಅಬ್ಬಬ್ಬಾ.. ಎಂದು ಬಾಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಹೋಸ್ಟ್ ಮಾಡಿರುವ ಆ ವಿಡಿಯೋ ನೋಡಲು ಕ್ಲಿಕ್ ಮಾಡಿ

English summary
Super Hosting by a boy in 'Majaa Takies' like a Junior Talking Star'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada