»   » ಮದುವೆ ಸಂಭ್ರಮದಲ್ಲಿ ಭಾಗಿಯಾದ 'ರಿಂಗ್ ರೋಡ್' ಜೋಡಿ

ಮದುವೆ ಸಂಭ್ರಮದಲ್ಲಿ ಭಾಗಿಯಾದ 'ರಿಂಗ್ ರೋಡ್' ಜೋಡಿ

Posted By:
Subscribe to Filmibeat Kannada

ಖಾಸಗಿ ಚಾನಲ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಜೋಡಿ' ಕಾರ್ಯಕ್ರಮ ಎಲ್ಲಾ ಜೋಡಿಗಳಿಗೆ ಹಂತ ಹಂತವಾಗಿ ಡಿಫರೆಂಟ್ ಟಾಸ್ಕ್‌ಗಳನ್ನು ನೀಡುತ್ತಾ ಬಂದಿದೆ. ಇದೀಗ ಈ ಕಲರ್ ಫುಲ್ ಶೋ ನಲ್ಲಿ ಇಂದಿನ ಸಂಚಿಕೆ ಕೊಂಚ ವಿಭಿನ್ನವಾಗಿದೆ.

ಅಂದಹಾಗೆ ಇಂದಿನ ಈ ಸಂಚಿಕೆಯ ವಿಶೇಷ ಏನಪ್ಪಾ ಅಂದ್ರೆ ಕಾರ್ಯಕ್ರಮಕ್ಕೆ ಸೆಲೆಬ್ರಿಟಿ ಜಡ್ಜ್ ಆಗಿ 'ರಿಂಗ್ ರೋಡ್' ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸಿದ್ದ ನಟಿ ಖುಷಿ ಹಾಗೂ ನಟಿ ನಿಖಿತಾ ತುಕ್ರಾಲ್ ಭಾಗವಹಿಸಿದ್ದಾರೆ.['ಸೂಪರ್ ಜೋಡಿ'ಯಲ್ಲಿ ಅಕುಲ್ ಬಾಲಾಜಿ ಹಾಡಿನ ಮೋಡಿ]

'Super Jode' reality show Celebrity Judge Nikita and Kushi in Suvarna Channel

ಇನ್ನು ಇಂದಿನ ವಿಭಿನ್ನ ಸಂಚಿಕೆಯಲ್ಲಿ 'ಸೂಪರ್ ಜೋಡಿ'ಗಳಿಗೆ, ಮದುವೆಯನ್ನು ವಿವಿಧ ರೀತಿಯಲ್ಲಿ ಆಚರಿಸಿಕೊಳ್ಳುವ ಟಾಸ್ಕ್ ಈ ಸೂಪರ್ ದಂಪತಿಗಳಿಗಿದೆ. ಅದರಂತೆಯೇ ದಂಪತಿಗಳು ನಾನಾ ರೀತಿಯ ಮದುವೆಯ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ.

'ಸೂಪರ್' ಜೋಡಿ'ಯಲ್ಲಿ ಭಾಗವಹಿಸಿದ ಜೋಡಿಗಳಲ್ಲಿ ಒಂದು ಜೋಡಿ ಮಕ್ಕಳಾಟಿಕೆಯ ರೀತಿ ಮದುವೆ ಸಂಭ್ರಮವನ್ನು ಆಚರಿಸಿಕೊಂಡರೆ, ಮತ್ತೊಂದು ಜೋಡಿ ಚೀನಿ ಸ್ಟೈಲ್ ನಲ್ಲಿ, ಇನ್ನೊಂದು ಜೋಡಿ ಡ್ರಾಕುಲಾ ಡ್ರೆಸ್ ಹಾಕಿಕೊಂಡಿದ್ದರೆ, ಇನ್ನು ಕೆಲವು ಜೋಡಿ ಕಾಡು ಜನರ ಸಂಸ್ಕೃತಿಯಂತೆ, ಸ್ಪೈಡರ್ ಮ್ಯಾನ್, ಸೂಪರ್ ವುಮೆನ್, ಹಾಗೂ ರೆಟ್ರೋ ಮಾದರಿಯಲ್ಲಿ ತಮ್ಮ ತಮ್ಮ ಮದುವೆಯ ಸಡಗರವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.[ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ']

'Super Jode' reality show Celebrity Judge Nikita and Kushi in Suvarna Channel

ಈ ವೈಶಿಷ್ಠ್ಯಮಯವಾದ ಕಾರ್ಯಕ್ರಮದಲ್ಲಿ ಸ್ಪರ್ಧೆಗೆ ನಿರ್ಣಾಯಕರಾಗಿ ಭಾಗವಹಿಸಿದ್ದಕ್ಕೆ 'ರಿಂಗ್ ರೋಡ್' ನಟಿಯರು ಸಂತಸ ವ್ಯಕ್ತಪಡಿಸುವುದರೊಂದಿಗೆ ಅವರೂ ಈ ಶೋ ನಲ್ಲಿ ಪಾರ್ಟಿಸಿಪೆಂಟ್ ಆಗಿರಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಜೊತೆಗೆ ಈ ಕಾನ್ಸೆಪ್ಟ್ ಗೆ ತಕ್ಕಂತೆ ನಟಿ ನಿಖಿತಾ ಅವರು ನಿರೂಪಕ ಅಕುಲ್ ಬಾಲಾಜಿ ಅವರ ಜೊತೆ 'ವಂಶಿ' ಚಿತ್ರದ ಜೊತೆ ಜೊತೆಯಲಿ ಹಾಡಿಗೆ ಸಖತ್ ಸ್ಟೆಪ್‌ ಹಾಕಿ ಎಲ್ಲಾ 'ಸೂಪರ್ ಜೋಡಿ' ಗಳ ಮನರಂಜಿಸಿದ್ದಾರೆ.

ಒಟ್ನಲ್ಲಿ ಈ ವರ್ಣರಂಜಿತ 'ಸೂಪರ ಜೋಡಿ'ಯ ಸೂಪರ್ ಸಂಚಿಕೆ ಇಂದು ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ.

English summary
Sandalwood Actress Nikita Thukral and Actress Kushi appears as celebrity judge in Suvarna Channels 'Super Jodi' reality show. The show will be air on 27th October at 7.30 pm. This reality show invites like-minded couples, who go through the toughest challenges to test their strengths, weaknesses, and emotional bond.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada