»   » ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ'

ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ'

Posted By:
Subscribe to Filmibeat Kannada

ಸುವರ್ಣ ವಾಹಿನಿ ಪ್ರತಿ ಹಂತದಲ್ಲಿಯೂ ಹೊಸತನವನ್ನು ವೀಕ್ಷಕರಿಗೋಸ್ಕರ ನೀಡುತ್ತಾ ಬಂದಿದೆ. ಅಂತಹುದರಲ್ಲಿ 'ಸೂಪರ್ ಜೋಡಿ' ಹೊಸ ರಿಯಾಲಿಟಿ ಶೋ. ಪ್ರಸ್ತುತ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಸಿದ ದಂಪತಿಗಳಿಗೆ ಇದೊಂದು ದೊಡ್ಡ ಸವಾಲ್.

ಪ್ರತಿ ನಿತ್ಯದ ತಮ್ಮ ಲೈಫ್ ಸ್ಟೈಲ್ ನಲ್ಲಿ ಸಂಸಾರ ಎಂಬ ಸಾಗರದಲ್ಲಿ ಮುಳುಗಿರುವ ಈ ದಂಪತಿಗಳಿಗೆ ವಿವಿಧ ರೀತಿಯ ಟಾಸ್ಕ್ ಗಳನ್ನು ನೀಡಿ ನಿಜವಾದ ಜೀವನ ಶೈಲಿಯನ್ನು ತಿಳಿಸುವುದೇ ಈ ಶೋ ಉದ್ದೇಶ. ಇದರಲ್ಲಿ 10 ಸೆಲೆಬ್ರಿಟಿ ದಂಪತಿಗಳಿದ್ದು ತಮ್ಮ ಜೀವನದಲ್ಲಿ ಎಂದೂ ಎದುರಿಸದ ಸ್ಪರ್ಧೆಗಳನ್ನು ಇಲ್ಲಿ ಎದುರಿಸಬೇಕಾಗುತ್ತದೆ.

Super Jodi: A new reality show in Suvarna Channel

ಅಕುಲ್ ಬಾಲಾಜಿ ಈ ರಿಯಾಲಿಟಿ ಶೋ ಸಾರಥಿ. ಸುವರ್ಣ ವಾಹಿನಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ಇವರು ಅನೇಕ ರಿಯಾಲಿಟಿ ಶೋಗಳನ್ನು ನಡೆಸಿ ಕೊಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 'ಬಿಗ್ ಬಾಸ್-2' ವಿಜೇತರಾಗಿರುವ ಅಕುಲ್ ಬಾಲಾಜಿ, ಹೊಚ್ಚ ಹೊಸ ಶೋ 'ಸೂಪರ್ ಜೋಡಿ' ನಿರೂಪಕರಾಗಿ ಆಯ್ಕೆ ಆಗಿದ್ದಾರೆ.

ಇಲ್ಲಿವರೆಗೆ ಸಾಕಷ್ಟು ಮನರಂಜನಾತ್ಮಕ ಶೋಗಳನ್ನು ಸುವರ್ಣ ವಾಹಿನಿ ನೀಡುತ್ತಾ ಬಂದಿದೆ. ಹಾಗೆಯೇ, 'ಸೂಪರ್ ಜೋಡಿ' ಕೂಡ ವಿಭಿನ್ನ ಶೋ. ದಂಪತಿಗಳ ನಡುವೆ ಇರಬೇಕಾದ ಅನ್ಯೋನ್ಯ ಸಂಬಂಧವನ್ನು ಇನ್ನಷ್ಟು ದೃಢಗೊಳಿಸಿ ಆ ಜೋಡಿ ಆದರ್ಶ ದಂಪತಿಗಳಾಗಲಿ ಎಂಬ ಹಾರೈಕೆ ನಮ್ಮದು ಅಂತಾರೆ ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್. [ಸೀಸನ್ -2 ನಲ್ಲಿ ಮತ್ತೆ ಪ್ಯಾಟೆಗೆ ಬಂದಿಳಿದ ಹಳ್ಳಿ ಹೈಕಳು]

'ಸೂಪರ್ ಜೋಡಿ' ಕಾರ್ಯಕ್ರಮ ಅಕ್ಟೋಬರ್ 19 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

English summary
Kannada's popular Suvarna Channel is launching a new reality show called 'Super Jodi'. Akul Balaji is hosting this show, which will be aired from October 19th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada