For Quick Alerts
  ALLOW NOTIFICATIONS  
  For Daily Alerts

  Super Queen : ಮಹಿಳೆಯರಿಗಾಗಿ ಹೊಸ ಅವಕಾಶ ಕೊಟ್ಟ 'ಸೂಪರ್ ಕ್ವೀನ್' ರಿಯಾಲಿಟಿ ಶೋ

  By ಪ್ರಿಯಾ ದೊರೆ
  |

  ಪ್ರೇಕ್ಷಕರಿಗೆ ಹೊಸತನ ಹುಡುಕುವ ಜೀ ಕನ್ನಡ ವಾಹಿನಿ, ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ. ವಾಹಿನಿಯಲ್ಲಿ ಮೂಡಿ ಬರುವ ಹಲವು ರಿಯಾಲಿಟಿ ಶೋಗಳು ಪ್ರಾಯೋಗಿಕವಾಗಿ ಬಂದು ಸಕ್ಸಸ್ ಆಗಿವೆ.

  ಕಳೆದ ತಿಂಗಳು ವಾಹಿನಿ ಮತ್ತೊಂದು ಪ್ರಯೋಗಕ್ಕೆ ಕೈ ಹಾಕಿತ್ತು. ಅದೇ, 'ಸೂಪರ್ ಕ್ವೀನ್' ಎಂಬ ಹೊಚ್ಚ ಹೊಸ ರಿಯಾಲಿಟಿ ಶೋ. ಈ ಶೋನ ಕೆಲ ಎಪಿಸೋಡ್‌ಗಳು ಈಗಾಗಲೇ ಪ್ರಸಾರವನ್ನೂ ಕಂಡಿದೆ.

  ಮೇಘಾ ಶೆಟ್ಟಿ: ರಶ್ಮಿಕಾ ಮಂದಣ್ಣ ಬಿಟ್ಟು ಮೇಘಾ ಶೆಟ್ಟಿಗೆ ಶುರುವಾಯ್ತಾ ಡಿಮ್ಯಾಂಡ್?ಮೇಘಾ ಶೆಟ್ಟಿ: ರಶ್ಮಿಕಾ ಮಂದಣ್ಣ ಬಿಟ್ಟು ಮೇಘಾ ಶೆಟ್ಟಿಗೆ ಶುರುವಾಯ್ತಾ ಡಿಮ್ಯಾಂಡ್?

  ಈ ಕಾರ್ಯಕ್ರಮದಲ್ಲಿ ಜೀವನದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದ ಮಹಿಳೆಯರು ಕಂಟೆಸ್ಟ್ ಗಳಾಗಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಇದರಲ್ಲಿಕಿರುತೆರೆ ನಟಿಯರು ಭಾಗವಹಿಸಿದ್ದರು. ಇದೀಗ ಈ ಶೋ ಹೊಸ ರೂಪವನ್ನು ತಾಳಲಿದೆ.

  ಕಿರುತೆರೆ ನಟಿಯರ ಶೋ

  ಕಿರುತೆರೆ ನಟಿಯರ ಶೋ

  'ಸೂಪರ್ ಕ್ವೀನ್' ರಿಯಾಲಿಟಿ ಶೋನಲ್ಲಿ ಬದುಕಿನಲ್ಲಿ ಬಹಳ ಕಷ್ಟಪಟ್ಟು ಸಾಧಿಸಿದವರ ಕಥೆ ಪ್ರಸಾರವಾಗುತ್ತಿದೆ. ಇದು ವಿಶೇಷವಾಗಿ ಮಹಿಳೆಯರಿಗಾಗಿ ಮಾಡಿದ ಶೋ. ಈಗಾಗಲೇ ಪ್ರಸಾರ ಕಂಡಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಗಾಯಕಿ ರೆಮೋ, ನಟಿಯರಾದ ಅಪೂರ್ವ ಶ್ರೀ, ರಶ್ಮಿ ಪ್ರಭಾಕರ್, ರಜನಿ, ಗೀತಾ ಭಟ್, ಚಂದ್ರಕಲಾ ಮೋಹನ್, ಹೇಮಲತಾ ಗೇಬ್ರಿಯೆಲ್ಲ ಸ್ಮಿತ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮವನ್ನು ಶ್ವೇತಾ ಚೆಂಗಪ್ಪ ನಡೆಸಿಕೊಡುತ್ತಿದ್ದಾರೆ. ಇನ್ನು ಕಾರ್ಯಕ್ರಮದ ತೀರ್ಪುಗಾರರಾಗಿ ರಚಿತಾ ರಾಮ್, ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ.

  ಕಷ್ಟ ಜೀವಿಗಳ ಕಥೆಯುಳ್ಳ ಶೋ

  ಕಷ್ಟ ಜೀವಿಗಳ ಕಥೆಯುಳ್ಳ ಶೋ

  ಪ್ರತೀ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಗೆ 'ಸೂಪರ್ ಕ್ವೀನ್' ಕಾರ್ಯಕ್ರಮ ಪ್ರಸಾರಗೊಳ್ಳುತ್ತಿದೆ. ಈ ಕಾರ್ಯಕ್ರಮ ಈಗಾಗಲೇ ಅದ್ಭುತವಾಗಿ ಮೂಡಿ ಬರುತ್ತಿದೆ. ಇದರಲ್ಲಿ ಪ್ರತಿಯೊಬ್ಬ ನಟಿಯರು ತಮ್ಮ ಜೀವನದ ಕಷ್ಟದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಪೂರ್ವಶ್ರೀ, ರೆಮೋ ಎಲ್ಲರೂ ತಮ್ಮ ಮಕ್ಕಳನ್ನು ಸಾಕಲು ಪಟ್ಟಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಬದುಕಿನ ಬಂಡಿ ಸಾಗಿಸಲು ಜೀವನದಲ್ಲಿ ಏನೆಲ್ಲಾ ಕಷ್ಟ ಬೀಳಬೇಕಾಯ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದೆ. ಮಹಿಳಾ ಪ್ರೇಕ್ಷಕರು ಕೂಡ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದಾರೆ.

  ಮಹಿಳೆಯರಿಗೆ ಜೀ ವಾಹಿನಿ ಆಫರ್

  ಮಹಿಳೆಯರಿಗೆ ಜೀ ವಾಹಿನಿ ಆಫರ್

  ಇದೀಗ ಜೀ ಕನ್ನಡ ವಾಹಿನಿ ಮತ್ತೊಂದು ಪ್ರಯೋಗಕ್ಕೆ ತೆರೆದುಕೊಂಡಿದೆ. 'ಸೂಪರ್ ಕ್ವೀನ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವ ಮಹಿಳೆಯರಿಗೆ ಜೀ ವಾಹಿನಿ ಆಹ್ವಾನ ನೀಡಿದೆ. ಈ ಆಫರ್ ಅನ್ನು ಮಿಸ್ ಮಾಡಿಕೊಳ್ಳಲು ಬಯಸದ ಮಹಿಳೆಯರು, ಸೂಪರ್ ಕ್ವೀನ್ ವೇದಿಕೆ ಹತ್ತಲು ಸಜ್ಜಾಗಿ. ಜೀ ಕನ್ನಡ ವಾಹಿನಿ ಇಂತಹದ್ದೊಂದು ಅವಕಾಶವನ್ನು ನೀಡಿದೆ. ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಯಾರಾಗಿ. ಜೀ ಕನ್ನಡ ವಾಹಿನಿ ಕೊಟ್ಟಂತಹ ಈ ಸೂಪರ್ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

  ಗೊಂದಲ ಸೃಷ್ಟಿಸಿದ ವಾಹಿನಿ ನಡೆ

  ಗೊಂದಲ ಸೃಷ್ಟಿಸಿದ ವಾಹಿನಿ ನಡೆ

  ಕರುನಾಡಿನ ಕ್ವೀನ್ಸ್.. ನೀವು ಸೂಪರ್ ಕ್ವೀನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸೆ ಇದ್ದರೆ, ಜೀ ಕನ್ನಡ ನಿಮಗೊಂದು ಅವಕಾಶ ಕಲ್ಪಿಸುತ್ತಿದೆ. ನಿಮ್ಮ ಇತ್ತೀಚಿನ ಭಾವಚಿತ್ರ ಮತ್ತು ಸ್ವವಿವರಗಳನ್ನು 8618165941 ಸಂಖ್ಯೆಗೆ ವಾಟ್ಸಪ್ ಮಾಡಿ. ಸೂಪರ್ ಕ್ವೀನ್ಸ್ ವೇದಿಕೆಯಲ್ಲಿ ಅವಕಾಶ ನಿಮ್ಮದಾಗಿಸಿಕೊಳ್ಳಿ ಎಂದು ವಾಹಿನಿ ಮಾಹಿತಿ ಹಂಚಿಕೊಂಡಿದೆ. ಇದೀಗ ವಾಹಿನಿ ಸೋಶಿಯಲ್ ಮೀಡಿಯಾದಿಂದ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಇದು ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡಿದೆ.

  English summary
  Super Queen show Team Invites Common women to Participate as Contestants.
  Thursday, December 15, 2022, 20:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X