»   » 'ಬಿಗ್ ಬಾಸ್' ಮನೆಯಿಂದ ಸುಷ್ಮಾ ಔಟ್! ವೀಕ್ಷಕರ ಅಭಿಪ್ರಾಯವೇನು?

'ಬಿಗ್ ಬಾಸ್' ಮನೆಯಿಂದ ಸುಷ್ಮಾ ಔಟ್! ವೀಕ್ಷಕರ ಅಭಿಪ್ರಾಯವೇನು?

Posted By:
Subscribe to Filmibeat Kannada

ಇದ್ದಿದ್ದನ್ನ ಇದ್ದ ಹಾಗೆ, ಮುಖಕ್ಕೆ ಹೊಡೆದ ಹಾಗೆ ಹೇಳುವ ಜಾಯಮಾನ ಸುಷ್ಮಾ ವೀರ್ ರದ್ದು. ನಿಜ ಜೀವನದಲ್ಲೂ ಬೋಲ್ಡ್ ಅಂಡ್ ಡೇರಿಂಗ್ ಆಗಿರುವ ಸುಷ್ಮಾ ವೀರ್ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಾಗ 'ಬಿಗ್ ಬಾಸ್' ಮನೆ ಸದಸ್ಯರ ಬಾಯಿಗೆ ಬಿಸಿ ತುಪ್ಪ ಬಿದ್ದ ಹಾಗಾಗಿತ್ತು.

ಸುಷ್ಮಾ ರವರ ಛೂಬಾಣದಂತಹ ಮಾತುಗಳಿಂದ 'ಬಿಗ್ ಬಾಸ್' ಮನೆಯಲ್ಲಿ ರಂಪ-ರಾದ್ಧಾಂತ ಸೃಷ್ಟಿಯಾಗಿತ್ತು. ಸುಷ್ಮಾ ರವರ ಇರುವಿಕೆ ಇಂದ ಕೆಲವರಿಗೆ ಕಿರಿಕಿರಿ ಹೆಚ್ಚಾಗಿತ್ತು.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

ಕಳೆದ ವಾರ ಮನೆಯ ಕ್ಯಾಪ್ಟನ್ ಆಗಿದ್ದ ಗೌತಮಿ ಗೌಡ ಸುಷ್ಮಾ ವೀರ್ ರನ್ನ ನೇರವಾಗಿ ನಾಮಿನೇಟ್ ಮಾಡಿದರು. ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದ ಸುಷ್ಮಾ ವೀರ್ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದಿದ್ದಾರೆ.['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಸುಷ್ಮಾ ವೀರ್!]

ಈ ಬಗ್ಗೆ ವೀಕ್ಷಕರು 'ಕಲರ್ಸ್ ಕನ್ನಡ' ಫೇಸ್ ಬುಕ್ ನಲ್ಲಿ ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಅತಿ ಹೆಚ್ಚು ಖುಷಿಯಾಗಿರುವ ವ್ಯಕ್ತಿ?

ಸುಷ್ಮಾ ವೀರ್ ಔಟ್ ಆಗಿರುವುದಕ್ಕೆ ಅತಿ ಹೆಚ್ಚು ಖುಷಿಯಾಗಿರುವ ವ್ಯಕ್ತಿ (ವೀಕ್ಷಕರ ಪ್ರಕಾರ) ಅಂದ್ರೆ ಅದು ನಟಿ ಶ್ರುತಿ. ಅಂದ್ಹಾಗೆ, ಈ ಕಾಮೆಂಟ್ ಗೆ ಸಿಕ್ಕಿರುವ ಲೈಕ್ಸ್ ಎಷ್ಟು ಅಂತ ಒಮ್ಮೆ ನೋಡಿ....

ಚಂದನ್ ಹೋಗ್ಬೇಕಿತ್ತು!

ಡೈರೆಕ್ಟ್ ಆಗಿ ಮಾತಾಡುವ ಸುಷ್ಮಾ ವೀರ್ ಉತ್ತಮ ಸ್ಪರ್ಧಿ. ಅವರ ಬದಲು ಚಂದನ್ ಔಟ್ ಆಗ್ಬೇಕಿತ್ತು ಅನ್ನೋದು ವೀಕ್ಷಕರ ಅಭಿಪ್ರಾಯ.

ಬೇಸರ ತಂದಿದೆ.!

ಸುಷ್ಮಾ ಕಿರಿಕಿರಿ ಅಂತ ಯಾರು ಎಷ್ಟೇ ಹೇಳಿದರೂ 'ಬೆಲೆಕಟ್ಟಲಾಗದ ಸುಷ್ಮಾ ಹೋಗಿರುವುದು ಬೇಸರ ತಂದಿದೆ' ಎನ್ನುವ ವೀಕ್ಷಕರೂ ಇದ್ದಾರೆ ಸ್ವಾಮಿ.

ಚಂದನ್ ಸೇಫ್ ಆಗಿದ್ಯಾಕೆ?

ಸುಷ್ಮಾ ವೀರ್ ಔಟ್ ಆಗಿದ್ದಕ್ಕೆ ''ನನಗೆ ತುಂಬಾ ಸಂತೋಷವಾಯ್ತು'' ಅಂತ ಚಂದನ್ ಉದ್ಘಾರ ಮಾಡಿದ್ದು ವೀಕ್ಷಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಚಂದನ್ ಔಟ್ ಆಗ್ಬೇಕಿತ್ತು ಅನ್ನೋದು ವೀಕ್ಷಕರ ವಾದ.

ಸುಷ್ಮಾ ಒಳ್ಳೆಯವರು!

ಮನಸ್ಸಿನಿಂದ ಸುಷ್ಮಾ ಒಳ್ಳೆಯವರು. ಅವರು ಮಾತನಾಡುವ ಶೈಲಿ ಚೆನ್ನಾಗಿರ್ಲಿಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ.

ಸುವರ್ಣಾವಕಾಶ

''ಸುಷ್ಮಾ ಔಟ್ ಆಗಿದ್ರಿಂದ ಶ್ರುತಿಗೆ ಸಂತೋಷವಾಗಿದೆ. ಇನ್ಮುಂದೆ ಮತ್ತೆ emotional game ಶುರು ಮಾಡ್ತಾರೆ'' ಅಂತಾವ್ರೆ ವೀಕ್ಷಕರು.

ಚಂದನ್-ಶ್ರುತಿ ಔಟ್ ಆಗ್ಬೇಕ್!

ಚಂದನ್ ಮತ್ತು ಶ್ರುತಿಗೆ ಹೋಲಿಸಿದರೆ ಸುಷ್ಮಾ ವೀರ್ ಒಳ್ಳೆಯವರು. ಹೀಗಾಗಿ ಚಂದನ್ ಮತ್ತು ಶ್ರುತಿಯನ್ನ ಆಚೆ ಹಾಕ್ಬೇಕು ಎನ್ನುವವರೂ ಇದ್ದಾರೆ.

ಚಂದನ್ ವಿರುದ್ಧ ಗುಡುಗು

ಅನೇಕ ವೀಕ್ಷಕರು ಚಂದನ್ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಿರಿಕಿರಿ ಇತ್ತು ನಿಜ!

ಸುಷ್ಮಾ ವೀರ್ ರವರಿಂದ 'ಬಿಗ್ ಬಾಸ್' ಮನೆಯಲ್ಲಿ ಕಿರಿಕಿರಿ ಆಗಿದ್ದು ನಿಜ. ಅವರು ಹೋಗಿದ್ದು ಒಳ್ಳೇದು ಎನ್ನುವ ಅಭಿಪ್ರಾಯ ಕೂಡ ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತವಾಗಿದೆ.

ಚಂದನ್ ಸಪೋರ್ಟ್ ಯಾಕೆ?

ಒಂದ್ಕಾಲದಲ್ಲಿ ಚಂದನ್ ನ ಸಪೋರ್ಟ್ ಮಾಡುತ್ತಿದ್ದ ವೀಕ್ಷಕರು ಇದೀಗ ಚಂದನ್ ವಿರುದ್ಧ ತಿರುಗಿಬಿದ್ದಿದ್ದಾರೆ.

ನಿಮ್ಮ ಅಭಿಪ್ರಾಯ ಏನು?

'ಬಿಗ್ ಬಾಸ್' ಮನೆಯಿಂದ ಸುಷ್ಮಾ ವೀರ್ ಔಟ್ ಆಗಿರುವುದು ನಿಮಗೆ ಸಮಾಧಾನ ನೀಡಿದ್ಯಾ? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.....

English summary
Bigg Boss Kannada 3 Viewers are unhappy over the eviction of Sushma Veer. Check out the viewers reaction here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada