»   » ಬಿಗ್ ಬಾಸ್ ಮನೆಯಿಂದ ವೈಲ್ಡ್ ಕಾರ್ಡ್ ಸ್ಪರ್ಧಿ ಔಟ್

ಬಿಗ್ ಬಾಸ್ ಮನೆಯಿಂದ ವೈಲ್ಡ್ ಕಾರ್ಡ್ ಸ್ಪರ್ಧಿ ಔಟ್

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಎಲ್ಲರಿಗೂ ಮನರಂಜನೆ ನೀಡುವ ಉದ್ದೇಶದಿಂದ ಆರಂಭವಾಗಿರುವ ಸುವರ್ಣ ವಾಹಿನಿಯ ಬಿಗ್ ಬಾಸ್ ಸ್ಪರ್ಧೆಯಲ್ಲಿ ದಿನದಿಂದ ದಿನಕ್ಕೆ ಕೋಪ ತಾಪ, ವೈಯಕ್ತಿಕ ದ್ವೇಷಗಳು ಹೆಚ್ಚಾಗುತ್ತಿದ್ದು, ಪರಸ್ಪರ ಸಂಧಾನ ಕಾರ್ಯಗಳು ಮುರಿದು ಬೀಳುತ್ತಿವೆ. ಈ ನಡುವೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶಿಸಿದ ಸ್ಪರ್ಧಿ ನಟಿ ಹರ್ಷಿಕಾ ಪೂಣಚ್ಚ ಮನೆಯಿಂದ ಹೊರನಡೆದಿದ್ದಾರೆ.

ಇದರ ಜೊತೆಗೆ ಮನೆಯಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿರುವ ಅಕುಲ್ ಹಾಗೂ ಗುರುಪ್ರಸಾದ್ ಅವರಿಗೆ ಕಿಚ್ಚ ಸುದೀಪ್ ರಿಂದ ಮಾತಿನ ಪೆಟ್ಟು ಸಿಕ್ಕಿದೆ. ಮಗನನ್ನು ನೆನೆದು ಅಕುಲ್ ಕಣ್ಣೀರಿಟ್ಟಿದ್ದು, ಮೊದಲ ಬಾರಿಗೆ ನಾಮಿನೇಟ್ ಆಗಿದ್ದಕ್ಕೆ ಸಂಭ್ರಮಿಸಿದ ದೀಪಿಕಾ, ಕನ್ನಡ ಪಂಡಿತ ಗುರು ಪ್ರಸಾದ್ ಗೆ ಕಿಚ್ಚನ ಪಾಠ ನಡೆಯಿತು. [ಕಳೆದ ವಾರ ಮಯೂರ್ ಔಟ್]

ಬಿಗ್ ಬಾಸ್ ಮನೆಯಿಂದ ಎರಡನೇ ಬಾರಿಗೆ ಹರ್ಷಿಕಾ ಹೊರ ನಡೆದಿದ್ದಾರೆ. ಸೃಜನ್ ರಿಂದ ನಾಮಿನೇಟ್ ಆಗಿ ಎರಡನೇ ವಾರಕ್ಕೆ ಮನೆಯಿಂದ ಹೊರ ನಡೆದು ಅತ್ತು ಕರೆದು ಮನೆಗೆ ಮತ್ತೆ ಬಂದಿದ್ದ ಹರ್ಷಿಕಾ ತಾವು ಬಾಯ್ಬಿಟ್ಟು ನುಡಿದ ಸತ್ಯ ಅವರನ್ನು ಮನೆಯಿಂದ ಮತ್ತೆ ಹೊರ ಹಾಕಿದೆ ಎಂದರೆ ಅಚ್ಚರಿಯೇನಿಲ್ಲ. ಈ ನಡುವೆ ಭಾನುವಾರದ ಎಪಿಸೋಡಿನಲ್ಲಿ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಹರ್ಷಿಕಾಗೆ ಮುಳುವಾದ ಮಾತುಗಳು ಯಾವುದು? ಮುಂದೆ...

ಇದು ಜನರು ಕೊಟ್ಟ ತೀರ್ಪು ಹರ್ಷಿಕಾ

ಮನೆಗೆ ಮತ್ತೆ ಎಂಟ್ರಿ ಕೊಟ್ಟ ಸ್ವಲ್ಪ ದಿನಗಳಲ್ಲೇ ಹೊರಗಡೆ ಇದ್ದಾಗ ತಾನು ಏನು ಯೋಚಿಸಿದೆ ಎಂಬುದನ್ನು ಹರ್ಷಿಕಾ ಹೊರ ಹಾಕಿದ್ದರು. ಸ್ವಲ್ಪ ಜಾಸ್ತಿ ಗರ್ವದಿಂದ ಕೂಡಿದ ಅವರ ಅನಿಸಿಕೆ ಅವರಿಗೆ ಮುಳುವಾಗಿರುವ ಸಾಧ್ಯತೆಯಿದೆ.

ಮೊದಲ ಬಾರಿಗೆ ಎಲಿಮಿನೇಟ್ ಆಗಲು ಸೃಜನ್ ನಾಮಿನೇಷನ್ ನೆಪಮಾತ್ರ ಕಾರಣ ಅಷ್ಟೆ. ಆದರೆ, ನಿಜಕ್ಕೂ ಜನಕ್ಕೆ ಹರ್ಷಿಕಾ ಬೇಡವಾಗಿದ್ದರು ಆದರೆ, ಇದನ್ನು ಅರಿಯದ ಹರ್ಷಿಕಾ ಮಾತ್ರ ಒಬ್ಬ ನಿರೂಪಕ, ಒಬ್ಬ ಆರ್ ಜೆ ಗಿಂತ ನನ್ನ ಅಭಿಮಾನಿ ಬಳಗ ಚಿಕ್ಕದೇ? ಎಂದು ಪ್ರಶ್ನಿಸಿದ್ದರು. ಈ ಕಹಿ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೂಪರ್ ಪವರ್ ಕೂಡಾ ಸರಿಯಾಗಿ ಬಳಸಲಿಲ್ಲ. ಜನರು ಹೀಗಾಗಿ ತಕ್ಕಪಾಠ ಕಲಿಸಿದ್ದಾರೆ.

ಮಾತಿನ ಚಾಟಿಯೇಟು ನೀಡಿದ ಕಿಚ್ಚ ಸುದೀಪ್

ಮಾತು ಆಡಿದರೆ ಹೋಯ್ತು, ಮುತ್ತು ಹೊಡೆದರೆ ಹೋಯ್ತು ಎಂಬ ಗಾದೆ ಮಾತಿಗೆ ನಿಜನಾ ಗುರುಗಳೆ ಎಂದು ಕಿಚ್ಚ ಸುದೀಪ್ ಅವರು ಗುರುಪ್ರಸಾದ್ ರನ್ನು ಕುಟುಕಿದರು.

ಆಡಿದ ಮಾತು ಕೆಲವೊಮ್ಮೆ ಸರಿಪಡಿಸಿಕೊಳ್ಳಬಹುದು. ಅದರೆ, ಆಡದಂತೆ ಇರುವುದು ಉತ್ತಮ ಕೆಲವರ ಮಾತುಗಳು ಜನರಿಗೆ ಇಷ್ಟವಾಗುತ್ತಿಲ್ಲ, ಸ್ಸಾರಿ ಇಲ್ಲಿ ಆ ಥರ ಪದ ಬಳಕೆ ಅವಕಾಶವಿಲ್ಲ ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದರು.

ಈ ಬಗ್ಗೆ ಸ್ಪಷ್ಟನೆ ನೀಡಲು ಯತ್ನಿಸಿದ ಮಠ ಗುರುಪ್ರಸಾದ್ ತೆಪ್ಪಗಾದರು. ಕೊನೆ ತನಕ ಅವರ ಮುಖ ಹೀಗೆ ಗುಂಟಿಕ್ಕಿಕೊಂಡಿತ್ತು. ಅಕುಲ್ ಮೇಲೆ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದ ಗುರು ಹಾಗೂ ರೋಹಿತ್ ಗೆ ಸಂದೇಶ ತಲುಪಿತ್ತು.

ದಿನದಿಂದ ದಿನಕ್ಕೆ ಸಪ್ಪಗಾಗುತ್ತಿರುವ ಬಿಗ್ ಬಾಸ್

ಪ್ರತಿದಿನದ ಟಾಸ್ಕ್ ಗಳಲ್ಲದೆ, ಇತ್ತೀಚಿನ ಅರಣ್ಯ, ಕಬಡ್ಡಿ ಶೋಗಳು ಮನರಂಜನೆಗಿಂತ ವೈಯಕ್ತಿಕ ಕಿಚ್ಚನ್ನು ಹೆಚ್ಚಿಸಿವೆ.

ಇದು ಎಲ್ಲದರೂ ಹಾಳಾಗಿ ಹೋಗ್ಲಿ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರೊಟ್ಟಿಗೆ ಲವಲವಿಕೆಯಿಂದ ಮಾತನಾಡುತ್ತಿದ್ದ ಸ್ಪರ್ಧಿಗಳು ಯಾಕೋ ಗರ ಬಡಿದಂತೆ ಮಂಕಾಗಿದ್ದಾರೆ. ಒಂದು ರೀತಿ ಪಾಪಪ್ರಜ್ಞೆಯಿಂದ ಇದ್ದಂತೆ ಕಾಣುತ್ತಿದ್ದಾರೆ. ಎಲ್ಲರೂ ಮುಖವಾಡ ಧರಿಸಿದ್ದು, ಜನರ ಸಿಂಪಥಿ ಗಿಟ್ಟಿಸಿಕೊಂಡಿರುವ ರೋಹಿತ್ ಕೂಡಾ ಇದರಿಂದ ಹೊರತಲ್ಲ.

ಎಲಿಮಿನೇಷನ್ ಸಂದರ್ಭದಲ್ಲಿ ಇರುತ್ತಿದ್ದ ಭಾವನಾತ್ಮಕ ನೋಟಗಳು ಮರೆಯಾಗಿವೆ. ಪರಸ್ಪರ ಕಣ್ಣು ಕಣ್ಣು ಕಲೆತು ಮಾತನಾಡುವುದನ್ನೆ ಸ್ಪರ್ಧಿಗಳು ಮರೆತ ಹಾಗೆ ಕಾಣುತ್ತಿದೆ.

ಗುರು ಹಾಗೂ ಅಕುಲ್ ಜೋಡಿ ಅಬಾಧಿತ

ಇರುವುದರಲ್ಲಿ ಪ್ರೇಕ್ಷಕರಿಗೆ ಕಿರಿ ಕಿರಿ ಎನಿಸಿದರೂ ಅಕುಲ್ ಬಾಲಾಜಿ ಹಾಗೂ ಗುರುಪ್ರಸಾದ್ ಮನರಂಜನೆ ನೀಡುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ನಡೆಯುವುದಕ್ಕೂ ಮುನ್ನ ಬಿಗ್ ಬಾಸ್ ನೀಡಿದ ಅಧಿಕಾರ ಬಳಸಿಕೊಂಡು ಗುರು ಅವರ ನೆರಳಾಗಿ ಇರುವ ಶಿಕ್ಷೆಯನ್ನು ಅಕುಲ್ ಗೆ ಹರ್ಷಿಕಾ ನೀಡಿದ್ದಾರೆ.

ಇದಕ್ಕೂ ಮುನ್ನ ಮಗನನ್ನು ನೆನೆಸಿಕೊಂಡು ಗಳ ಗಳನೆ ಅತ್ತ ಅಕುಲ್ ಬಾಲಾಜಿ, ಗುರು ಸಾಂಗತ್ಯದಿಂದ ಮತ್ತೊಮ್ಮೆ ಉತ್ಸಾಹದಿಂದ ಮಾತುಗಾರಿಕೆ ಮುಂದುವರೆಸಿದರು.

English summary
Actress Harshika Poonachcha who came to 'Big Boss' house for the second time in a wild card entry two weeks back has been eliminated. This is the second time that the actress has been eliminated from the house.
Please Wait while comments are loading...